ಜಮ್ಮು ಕಾಶ್ಮೀರದ ನೂತನ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹ ಯಾರು?

By Suvarna NewsFirst Published Aug 6, 2020, 7:55 PM IST
Highlights

ಘಾಜಿಪುರದ ವಿಕಾಸ ಪುರುಷ ಎಂದೇ ಹೆಸರುವಾಸಿಯಾಗಿರುವ ಮನೋಜ್ ಸಿನ್ಹ ಜಮ್ಮ ಮತ್ತು ಕಾಶ್ಮೀರದ ನೂತನ ಲೆಫ್ಟೆನೆಂಟ್ ಗರ್ವನರ್ ಆಗಿ ನೇಮಕಗೊಂಡಿದ್ದಾರೆ. ಗೀರಿಶ್ ಚಂದ್ರ ಮುರ್ಮು ದಿಢೀರ್ ರಾಜೀನಾಮೆಯಿಂದ ಸಿನ್ಹ ಅವರನ್ನು ಮೋದಿ ಸರ್ಕಾರ ನೇಮಕ ಮಾಡಿದೆ. ಆರ್ಟಿಕಲ್ 370 ವಿಧಿ ರದ್ದು ಮಾಡಿದ ಒಂದೇ ವರ್ಷಕ್ಕೆ ಜಮ್ಮು ಕಾಶ್ಮೀರದ ಲೆ.ಗರ್ವನರ್ ನೇಮಕಗೊಂಡ ಮನೋಜ್ ಸಿನ್ಹ ಯಾರು? ಇಲ್ಲಿದೆ ವಿವರ.

ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿ ಇದೀಗ ಒಂದು ವರ್ಷ ಸಂದಿದೆ. ಇದರ ಬೆನ್ನಲ್ಲೇ ಜಮ್ಮ ಮತ್ತು ಕಾಶ್ಮೀರದಲ್ಲಿ ಕೆಲ ಬದಲಾವಣೆಗಳು ಆಗಿವೆ. ಇದರಲ್ಲಿ ಪ್ರಮುಖವಾಗಿ ಜಮ್ಮ ಕಾಶ್ಮೀರದ ನೂತನ ಲೆಫ್ಟಿನೆಂಟ್ ಗರ್ವನರ್ ಆಗಿ ಮನೋಜ್ ಸಿನ್ಹ ನೇಮಕಗೊಂಡಿದ್ದಾರೆ. ಗಿರೀಶ್ ಚಂದ್ರ ಮುರ್ಮು ದಿಢೀರ್ ರಾಜೀನಾಮೆಯಿಂದ ಇದೀಗ ನೂತನ ಲೆ.ಗವರ್ನರ್ ನೇಮಕ ಮಾಡಲಾಗಿದೆ.

370ನೇ ವಿಧಿ ರದ್ದಾಗಿ ಒಂದು ವರ್ಷ: ಜಮ್ಮು- ಕಾಶ್ಮೀರದಾದ್ಯಂತ ಕರ್ಫ್ಯೂ ಜಾರಿ!

ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ಬೆನ್ನಲ್ಲೇ ಹಲವು ಹೆಸರುಗಳು ಕೇಳಿಬಂದಿತ್ತು. ಆದರೆ ಅಚ್ಚರಿ ಎಂಬಂತೆ ಮನೋಜ್ ಸಿನ್ಹ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಮನೋಜ್ ಸಿನ್ಹ ಉತ್ತರ ಪ್ರದೇಶದ ಘಾಜಿಪುರದ ವಿಕಾಸ ಪುರುಷ ಎಂದೇ ಹೆಸರುವಾಸಿಯಾಗಿದ್ದಾರೆ. 

'ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ

ಮನೋಜ್ ಸಿನ್ಹ ಪರಿಚಯ:
61 ವರ್ಷದ ಮನೋಜ್ ಸಿನ್ಹ ಹುಟ್ಟಿದ್ದು, ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಮೊಹನಪುರದಲ್ಲಿ. ವಾರಣಸಿಯ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ(BHU) ಬಿ.ಟೆಕ್ ಹಾಗೂ ಮೆ.ಟೆಕ್ ಸಿವಿಲ್ ಎಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದಾರೆ. ಕಾಲೇಜು ದಿನಗಲ್ಲಿ ಬನಾರಸ್ ಹಿಂದೂ ಯುನಿವರ್ಸಿಟಿ(BHU)ಅಧ್ಯಕ್ಷನಾಗಿದ್ದರು.

ಬಿಜೆಪಿ ಪಕ್ಷದ ಮೂಲಕ ರಾಜಕೀಯ ಜೀವನ ಆರಂಭಿಸಿದ ಮನೋಜ್ ಸಿನ್ಹ 1996ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಇನ್ನು 1999ರಲ್ಲಿ ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆಯಾದ ಹೆಗ್ಗಳಿಕೆಗೆ ಮನೋಜ್ ಸಿನ್ಹಗಿದೆ. ಇದಾದ ಬಳಿಕ ಜನರಲ್ ಕೌನ್ಸಿಲ್ ಹಾಗೂ ಸ್ಕೂಲ್ ಆಫ್ ಪ್ಲಾನಿಂಗ್‌ಲ್ಲಿ ಸಕ್ರಿಯವಾಗಿದ್ದ ಸಿನ್ಹ 2014ರಲ್ಲಿ ಮತ್ತೆಘಾಜಿಪುರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

2014ರಲ್ಲಿ ರೈಲ್ವೆ ರಾಜ್ಯ ಸಚಿವ ಸ್ಥಾನ ಪಡೆದ ಮನೋಜ್ ಸಿನ್ಹ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ಹಿಂದೆ ಇದೇ ಮನೋಜ್ ಸಿನ್ಹ ಶ್ರಮಿಸಿದ್ದರು. ಇಷ್ಟೇ ಅಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದೇ ಗುರುತಿಸಿಕೊಂಡಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಯೋಗಿ ಆದಿತ್ಯನಾಥ್‌ಗೆ ಮುಖ್ಯಮಂತ್ರಿ ಪಟ್ಟ ನೀಡಿತ್ತು.

click me!