ಫೋನ್‌ನಲ್ಲಿ ಸ್ಮೃತಿ ಇರಾನಿ ಧ್ವನಿ ಗುರುತಿಸದ ಅಧಿಕಾರಿ ವಿರುದ್ಧ ತನಿಖೆಗೆ ಆದೇಶ..!

By BK AshwinFirst Published Aug 30, 2022, 5:59 PM IST
Highlights

ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕರೆ ಮಾಡಿದ್ದಾರೆ. ಈ ವೇಳೆ, ಅವರ ಧ್ವನಿಯನ್ನು ಲೇಖಪಾಲ್‌ ಗುರುತಿಸಲಿಲ್ಲ ಎಂದು ತಿಳಿದುಬಂದಿದೆ. 

ಉತ್ತರ ಪ್ರದೇಶದ ಅಮೇಥಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ದೂರವಾಣಿ ಮೂಲಕ ಗುರುತಿಸಲು ವಿಫಲರಾದ ಲೇಖ್‌ಪಾಲ್‌ ಅವರ ವಿರುದ್ಧ ಕರ್ತವ್ಯ ನಿರ್ವಹಿಸದಿದ್ದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ, ಆಗಸ್ಟ್ 29 ರಂದು ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಸಾಫಿರ್‌ಖಾನಾ ತಾಲೂಕು ವ್ಯಾಪ್ತಿಯ ಪೂರೆ ಪಹಲ್ವಾನ್ ಗ್ರಾಮದ ನಿವಾಸಿಯೊಬ್ಬರು ಆಗಸ್ಟ್ 27 ರಂದು ಸ್ಮೃತಿ ಇರಾನಿ ಅವರಿಗೆ ದೂರಿನ ಪತ್ರವನ್ನು ನೀಡಿದ್ದರು. ಈ ಸಂಬಂಧ ಕೇಂದ್ರ ಸಚಿವೆ ಲೇಖಪಾಲ್‌ಗೆ ಕರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕರಾಗಿದ್ದ ತನ್ನ ತಂದೆಯ ಮರಣದ ನಂತರ ತನ್ನ ತಾಯಿ ಸಾವಿತ್ರಿ ದೇವಿ ಪಿಂಚಣಿಗೆ ಅಹ್ರಾಗಿದ್ದಾರೆ. ಆದರೆ, ಈ ಸಂಬಂಧ ಲೇಖಪಾಲ್‌ ದೀಪಕ್‌ ಅವರು ಪರಿಶೀಲನೆ ಮಾಡಿಲ್ಲ. ಇದರಿಂದ ತನ್ನ ತಾಯಿ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರುದಾರ ಕರುಣೇಶ್ (27) ಸ್ಮೃತಿ ಇರಾನಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದರು. ಇದು ಮುಸಾಫಿರ್‌ಖಾನಾ ಲೇಖ್ಪಾಲ್ ದೀಪಕ್ ಅವರ ಕಡೆಯಿಂದ ನಿರ್ಲಕ್ಷ್ಯದ ಪ್ರಕರಣವಾಗಿದೆ ಮತ್ತು ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಿಲ್ಲ ಎಂದು ಸೋಮವಾರ ಅಮೇಥಿಯ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಅಂಕುರ್ ಲಾಥರ್ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಮುಸಾಫಿರ್‌ಖಾನಾದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರನ್ನು ಕೇಳಲಾಗಿದ್ದು, ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಅಂಕುರ್‌ ಲಾಥರ್ ಹೇಳಿದರು. 

‘ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ ಅಕ್ರಮ ಬಾರ್‌..?’

ಅಲ್ಲದೆ, ಕರುಣೇಶ್ ದೂರಿನ ಮೇರೆಗೆ ಶನಿವಾರ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಲೇಖ್‌ಪಾಲ್‌ಗೆ ಕರೆ ಮಾಡಿದಾಗ, ದೀಪಕ್‌ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇದಾದ ನಂತರ, ಸಿಡಿಒ ಸಚಿವರಿಂದ ಫೋನ್ ತೆಗೆದುಕೊಂಡು, ಕಚೇರಿಯಲ್ಲಿ ಅವರನ್ನು ಭೇಟಿಯಾಗಲು ಲೇಖ್‌ಪಾಲ್‌ಗೆ ಹೇಳಿದ್ದಾರೆ. ಉತ್ತರ ಪ್ರದೇಶ್ ಮುಸಾಫಿರ್‌ಖಾನಾ ತಾಲೂಕಿನ ಗೌತಮ್‌ಪುರ ಗ್ರಾಮಸಭೆಯಲ್ಲಿ ಲೇಖ್ಪಾಲರನ್ನು ನೇಮಿಸಲಾಗಿದೆ.

ಅಪೌಷ್ಠಿಕ ಮಕ್ಕಳಿಗೆ ಸಹಾಯ ಮಾಡಲು ಸಮಾಜ ಮುಮದೆ ಬರಬೇಕೆಂದ ಸ್ಮೃತಿ ಇರಾನಿ
ಇನ್ನು, ಉತ್ತರ ಪ್ರದೇಶದ ಅಮೇಥಿಯಲ್ಲಿ 1,736 ಅಪೌಷ್ಟಿಕ ಮಕ್ಕಳಿದ್ದಾರೆ ಮತ್ತು ಅವರಿಗೆ ಸಹಾಯ ಮಾಡಲು ಸಮಾಜವು ಮುಂದೆ ಬಂದು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಶನಿವಾರ ಹೇಳಿದ್ದಾರೆ. ಅಮೇಥಿಯಲ್ಲಿ 170 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ ಕೇಂದ್ರ ಸಚಿವೆ ಈ ವೇಳೆ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಅಮೇಥಿಯಲ್ಲಿ ಕ್ರೀಡಾಂಗಣಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳನ್ನು ನಿರ್ಮಿಸುತ್ತಿದೆ ಮತ್ತು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದೆ ಎಂದೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹೇಳಿದರು.

ಆದರೆ ಇಲ್ಲಿ 1,736 ಅಪೌಷ್ಟಿಕ ಮಕ್ಕಳಿದ್ದು, ಅವರಿಗೆ ನೆರವಾಗುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ಜನರು ಮುಂದೆ ಬರಬೇಕು ಮತ್ತು ನಾವೆಲ್ಲರೂ ಪ್ರಯತ್ನ ಮಾಡಬೇಕಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಸಚಿವರು, 'ಅಮೃತ್ ಸರೋವರ' (ಕೊಳ) ಅನ್ನು ಸಹ ಉದ್ಘಾಟಿಸಿದರು ಮತ್ತು ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು. ಹಾಗೂ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಯನ್ನೂ ಮಾಡಿದ್ದಾರೆ.

ಸೋನಿಯಾ, ರಾಹುಲ್‌ ವಿರುದ್ಧ ಮಾತನಾಡಿದ್ದಕ್ಕೆ ಮಗಳು ಟಾರ್ಗೆಟ್: ಸ್ಮೃತಿ ಇರಾನಿ

ಜಲ ಸಂರಕ್ಷಣೆ ಮತ್ತು ಪರಿಸರಕ್ಕೆ ಉತ್ತೇಜನ ನೀಡಲು ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಜಿಲ್ಲೆಗೆ 75 ಕೊಳಗಳನ್ನು (ಅಮೃತ ಸರೋವರ) ಹೊಂದಲು ಕರೆ ನೀಡಿದ್ದರು.

click me!