ಕಾಂಗ್ರೆಸ್‌ ಬಲವರ್ಧನೆ: ಪ್ರಿಯಾಂಕಾ ಉತ್ತರ ಪ್ರದೇಶ ಯಾತ್ರೆ!

Published : Jul 13, 2021, 10:00 AM IST
ಕಾಂಗ್ರೆಸ್‌ ಬಲವರ್ಧನೆ: ಪ್ರಿಯಾಂಕಾ ಉತ್ತರ ಪ್ರದೇಶ ಯಾತ್ರೆ!

ಸಾರಾಂಶ

* 3-4 ದಿನಗಳ ಕಾಲ ಲಖನೌನಲ್ಲೇ ನೆಲೆಯೂರಲಿರುವ ಪ್ರಿಯಾಂಕಾ * ಕಾಂಗ್ರೆಸ್‌ ಬಲವರ್ಧನೆ: ನಾಳೆಯಿಂದ ಪ್ರಿಯಾಂಕಾ ಉ.ಪ್ರ. ಯಾತ್ರೆ * ರಾಜ್ಯ ಕಾಂಗ್ರೆಸ್‌ ಸದಸ್ಯರು, ಜಿಲ್ಲೆ ಮತ್ತು ನಗರಗಳ ಅಧ್ಯಕ್ಷರ ಜೊತೆ ಸಭೆ

ನವದೆಹಲಿ(ಜು.13): ಮುಂದಿನ ವರ್ಷ ಎದುರಾಗಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪಕ್ಷದ ಬಲವರ್ಧನೆಗಾಗಿ ತಂತ್ರ ರೂಪಿಸಲು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜು.14ರಂದು ಲಖನೌಗೆ ಆಗಮಿಸಲಿದ್ದಾರೆ. ಆ ಬಳಿಕ ರಾಜ್ಯದ ಇತರೆ ಭಾಗಗಳ ಪ್ರವಾಸ ಕೈಗೊಳ್ಳಲಿದ್ದಾರೆ.

3-4 ದಿನಗಳ ಕಾಲ ಲಖನೌನಲ್ಲೇ ನೆಲೆಯೂರಲಿರುವ ಪ್ರಿಯಾಂಕಾ ಅವರು, ರಾಜ್ಯ ಕಾಂಗ್ರೆಸ್‌ ಸದಸ್ಯರು, ಜಿಲ್ಲೆ ಮತ್ತು ನಗರಗಳ ಅಧ್ಯಕ್ಷರ ಜೊತೆ ಸಭೆ ನಡೆಸಲಿದ್ದಾರೆ ಎಂದು ಎಂದು ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿ ಪಕ್ಷವನ್ನು ಗಟ್ಟಿಯಾಗಿ ನೆಲೆಯೂರಿಸುವ ನಿಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಅವರು, ಸೋಮವಾರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮತ್ತು ಇತರೆ ಮುಖಂಡರ ಜತೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ಮೂಲಭೂತ ವಸ್ತುಗಳ ಬೆಲೆ ಏರಿಕೆ, ಕೊರೋನಾ ವೈರಸ್‌ ಸೃಷ್ಟಿಸಿದ ಭೀಕರ ಪರಿಸ್ಥಿತಿ, ಪಂಚಾಯತ್‌ ಚುನಾವಣೆಯಲ್ಲಿ ನಡೆದ ಗಲಭೆಗಳ ಬಗ್ಗೆ ಚರ್ಚಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!