323 ಲೋಕಸಭೆ ಸದಸ್ಯರಿಗೆ ಎರಡೂ ಡೋಸ್‌ ಲಸಿಕೆ!

By Suvarna NewsFirst Published Jul 13, 2021, 9:21 AM IST
Highlights

* ಸಂಸತ್ತಿನ ಕಲಾಪದ ವೇಳೆ ಕೋವಿಡ್‌ ಮಾರ್ಗಸೂಚಿ ಪಾಲನೆ: ಓಂ ಬಿರ್ಲಾ

* 323 ಲೋಕಸಭೆ ಸದಸ್ಯರಿಗೆ ಎರಡೂ ಡೋಸ್‌ ಲಸಿಕೆ

* ವೈದ್ಯಕೀಯ ಕಾರಣಕ್ಕೆ ಲಸಿಕೆ ಪಡೆಯದ 23 ಸಂಸದರು

* ಲಸಿಕೆ ಪಡೆಯದ ಸಂಸದರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ

ನವದೆಹಲಿ(ಜು.13): ಇದೇ ತಿಂಗಳ 19ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದ ವೇಳೆ ಕೋವಿಡ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರು ಹೇಳಿದ್ದಾರೆ.

ಸೋಮವಾರ ಸಂಸತ್ತಿನ ಆವರಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ ಅವರು, ‘ಈವರೆಗೆ ಸಂಸತ್ತಿನ 323 ಸಂಸದರು ಲಸಿಕೆ ಪಡೆದಿದ್ದಾರೆ. ಇನ್ನು 23 ಸಂಸದರು ಕೆಲ ವೈದ್ಯಕೀಯ ಕಾರಣಗಳಿಗಾಗಿ ಮೊದಲ ಡೋಸ್‌ ಪಡೆಯಲು ಸಾಧ್ಯವಾಗಿಲ್ಲ. ಈವರೆಗೆ ಕೊರೋನಾ ಲಸಿಕೆ ಪಡೆಯದವರು ಕಲಾಪ ನಡೆಯುವ ವೇಳೆ ಸಂಸತ್ತಿನ ಆವರಣ ಪ್ರವೇಶಕ್ಕೂ ಮುನ್ನ ಆರ್‌ಟಿ-ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ’ ಎಂದು ಹೇಳಿದರು.

ಇನ್ನು ಸಂಸತ್ತಿನ ಉಭಯ ಕಲಾಪಗಳು ಬೆಳಗ್ಗೆ 11 ಗಂಟೆಯಿಂದ ಒಮ್ಮೆಲೇ ಆರಂಭವಾಗಲಿವೆ. ಜು.19ಕ್ಕೆ ಆರಂಭವಾಗಿ ಆ.13ರಂದು ಕಲಾಪಗಳು ಮುಕ್ತಾಯವಾಗಲಿವೆ.

ಕೊರೋನಾ ಕಾರಣಕ್ಕಾಗಿ ಕಳೆದ ವರ್ಷದ ಕಲಾಪವನ್ನು ರದ್ದುಗೊಳಿಸಲಾಗಿತ್ತು. ಅದಕ್ಕೂ ಮುಂಚೆ 3 ಕಲಾಪಗಳ ಕಾಲಾವಧಿಯನ್ನು ಮಿತಿಗೊಳಿಸಲಾಗಿತ್ತು.

click me!