ಸೋನಿಯಾ ಪ್ರಧಾನಿಯಾಗಬಹುದಿತ್ತು: ಕೇಂದ್ರ ಸಚಿವರ ಕಾಂಗ್ರೆಸ್‌ ಪ್ರೀತಿ!

Published : Sep 26, 2021, 12:50 PM ISTUpdated : Sep 26, 2021, 01:01 PM IST
ಸೋನಿಯಾ ಪ್ರಧಾನಿಯಾಗಬಹುದಿತ್ತು: ಕೇಂದ್ರ ಸಚಿವರ ಕಾಂಗ್ರೆಸ್‌ ಪ್ರೀತಿ!

ಸಾರಾಂಶ

* ಕಮಲಾ ಅಮೆರಿಕ ಉಪಾಧ್ಯಕ್ಷೆ ಆಗ್ತಾರಂದ್ರೆ, ಸೋನಿಯಾ ಭಾರತದ ಪಿಎಂ ಯಾಕಿಲ್ಲ: ಬಿಜೆಪಿಗನ ಕಾಂಗ್ರೆಸ್‌ ಪ್ರೀತಿ * ಸೋನಿಯಾ ಅಥವಾ ಪವಾರ್ ಪ್ರಧಾನಿಯಾಗಿದ್ದರೆ ಕಾಂಗ್ರೆಸ್‌ ಬಲಶಾಲಿಯಾಗಿರುತ್ತಿತ್ತು * ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಕ್ಕೆ ಕಾಂಗ್ರೆಸ್‌ ಸ್ಥಿತಿ ಹೀನಾಯ ಎಂದ ಅಠಾವಳೆ

ನವದೆಹಲಿ(ಸೆ.26): ಕೇಂದ್ರದ ಬಿಜೆಪಿ ಸರ್ಕಾರದ (BJP Government) ಆಪ್ತ ಮಿತ್ರರಾದ ಕೇಂದ್ರ ಸಚಿವ ರಾಮದಾಸ್ ಅಠಾವಳೆ(Ramdas Athawale) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ(Congress Chief Sonia Gandhi) ವಿಚಾರವಾಗಿ ಪ್ರಮುಖ ಹೇಳಿಕೆ ನೀಡಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗುತ್ತಾರೆ ಎಂದಾದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 2004 ರ ಚುನಾವಣೆಯ ನಂತರ ಭಾರತದ ಪ್ರಧಾನಿಯಾಗಬಹುದಿತ್ತು ಎಂದು ಕೇಂದ್ರ ಸಚಿವ ಅಠಾವಳೆ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕನ ಬಗ್ಗೆ ಕೇಂದ್ರ ಸರ್ಕಾರದ ಸಚಿವರ ಇಂತಹ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಕೇಂದ್ರ ಸರ್ಕಾರದ ಪಾಲುದಾರರ ಮೇಲಿನ ಕಾಂಗ್ರೆಸ್ ಪ್ರೀತಿಗೆ ಹಲವು ಅರ್ಥಗಳನ್ನು ನಿಡಲಾಗುತ್ತಿದೆ. 

ಸೋನಿಯಾ ನಿರಾಕರಿಸಿದರೆ ಶರದ್ ಪವಾರ್‌ರನ್ನು ಪ್ರಧಾನಿಯನ್ನಾಗಿ ಮಾಡಲು ಸಲಹೆ

ರಾಮದಾಸ್ ಅಠಾವಳೆ ಸೋನಿಯಾ ಗಾಂಧಿ 2004 ರಲ್ಲಿ ಪ್ರಧಾನಿಯಾಗಬೇಕಿತ್ತು, ಅವರು ಆ ಸ್ಥಾನವನ್ನು ಸ್ವೀಕರಿಸದಿದ್ದಾಗ ಕಾಂಗ್ರೆಸ್ ತನ್ನನ್ನು ಬಲಪಡಿಸಲು ಪಕ್ಷದ ಹಿರಿಯ ನಾಯಕ ಶರದ್ ಪವಾರ್ ಅವರಿಗೆ ಪ್ರಧಾನಿ ಸ್ಥಾನ ನೀಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ಇಂದೋರ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಠಾವಳೆ, 2004 ರ ಚುನಾವಣೆಯಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಬಹುಮತ ಪಡೆದಾಗ, ನಾನು ಸೋನಿಯಾ ಗಾಂಧಿಗೆ ಪ್ರಧಾನಿಯಾಗಲು ಸಲಹೆ ನೀಡಿದ್ದೆ. ಅವರು ವಿದೇಶಿಗರು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಲು ಸಾಧ್ಯವಾದರೆ, ಸೋನಿಯಾ ಗಾಂಧಿಗೆ ಭಾರತದ ಪ್ರಜೆ, ರಾಜೀವ್ ಗಾಂಧಿಯವರ ಪತ್ನಿ (ಮಾಜಿ ಪ್ರಧಾನಿ) ಮತ್ತು ಲೋಕಸಭೆಯಲ್ಲಿ ಸಂಸತ್ ಸದಸ್ಯರು. ಹೀಗಿರುವಾಗ ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅಠಾವಳೆ ಪ್ರಶ್ನಿಸಿದ್ದಾರೆ.

ಪವಾರ್ ಪ್ರಧಾನಿಯಾಗಿದ್ದರೂ, ಕಾಂಗ್ರೆಸ್ ಸ್ಥಿತಿ ಚೆನ್ನಾಗಿರುತ್ತಿತ್ತು.

ಪವಾರ್ ಕೂಡಾ ಜನ ನಾಯಕರಾಗಿ ಪ್ರಧಾನಮಂತ್ರಿ ಹುದ್ದೆಗೆ ಅರ್ಹರು ಮತ್ತು ಮನಮೋಹನ್ ಸಿಂಗ್ ಬದಲಿಗೆ ಕಾಂಗ್ರೆಸ್ ಅವರನ್ನು ಪ್ರಧಾನಿಯಾಗಿಸಬೇಕಿತ್ತು, ಆದರೆ ಸೋನಿಯಾ ಗಾಂಧಿ ಹಾಗೆ ಮಾಡಲಿಲ್ಲ ಎಂದು ಅಠಾವಳೆ ಹೇಳಿದ್ದಾರೆ. ಅಲ್ಲದೇ ಪವಾರ್ 2004 ರಲ್ಲಿ ದೇಶದ ಪ್ರಧಾನಿಯಾಗಿದ್ದರೆ, ಕಾಂಗ್ರೆಸ್ ಇಂದಿನ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಇದರ ಪರಿಣಾಮವಾಗಿಯೇ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಅವರ ಸ್ಥಾನವನ್ನು ನರೇಂದ್ರ ಮೋದಿ ಪಡೆದರು ಎಂದಿದ್ದಾರೆ.

ಅಮರಿಂದರ್ ಸಿಂಗ್ ಅವರಿಗೆ ಎನ್ ಡಿಎ ಸೇರಲು ಆಹ್ವಾನ

ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹಿರಿಯ ನಾಯಕ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ತೊರೆದು ಬಿಜೆಪಿ ಅಥವಾ ಅವರ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್ ಡಿಎ) ಗೆ ಸೇರುವಂತೆ ಒತ್ತಾಯಿಸಿದ್ದಾರೆ. "ಸಿಂಗ್ ಬಿಜೆಪಿಗೆ ಸೇರಿದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಸ್ಥಾನ ಮತ್ತಷ್ಟು ಬಲಶಾಲಿಯಾಘುತ್ತದೆ" ಎಂದು ಅಠಾವಳೆ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು