ಕಾಂಗ್ರೆಸ್‌, ಸಿಪಿಎಂ ಓಲೈಕೆ ರಾಜಕಾರಣಕ್ಕೆ ಮುಗ್ಧರು ಬೆಲೆತೆರಬೇಕಾಗಿದೆ: ಕೇರಳ ಸ್ಫೋಟಕ್ಕೆ ರಾಜೀವ್‌ ಚಂದ್ರಶೇಖರ್‌ ಕಿಡಿ

By BK Ashwin  |  First Published Oct 29, 2023, 2:58 PM IST

ಕಾಂಗ್ರೆಸ್ ಮತ್ತು ಸಿಪಿಎಂನ ಅತಿಯಾದ ಓಲೈಕೆ ರಾಜಕಾರಣಕ್ಕೆ ಇತರ ಎಲ್ಲಾ ಸಮುದಾಯಗಳ ಮುಗ್ದರು ಬೆಲೆತೆರಬೇಕಾಗುತ್ತದೆ. ಇತಿಹಾಸ ಇದನ್ನು ನಮಗೆ ತಿಳಿ ಹೇಳಿದೆ‌ ಎಂದು ಕೇರಳ ಸ್ಫೋಟದ ಬಗ್ಗೆ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಡಿ ಕಾರಿದ್ದಾರೆ. 


ನವದೆಹಲಿ (ಅಕ್ಟೋಬರ್ 29, 2023): ಕೇರಳದ ಕಲಮಸ್ಸೆರಿಯಲ್ಲಿ ಕ್ರೈಸ್ತರ ಸಮಾವೇಶದ ಮೇಲೆ ಸರಣಿ ಸ್ಫೋಟ ನಡೆದಿದ್ದು, ಘಟನೆಯಲ್ಲಿ ಒಬ್ಬರು ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಾಂಗ್ರೆಸ್‌, ಸಿಪಿಎಂನ ಓಲೈಕೆ ರಾಜಕಾರಣವೇ ಇದಕ್ಕೆ ಕಾರಣ ಎಂದು ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಸಿಪಿಎಂನ ಅತಿಯಾದ ಓಲೈಕೆ ರಾಜಕಾರಣಕ್ಕೆ ಇತರ ಎಲ್ಲಾ ಸಮುದಾಯಗಳ ಮುಗ್ದರು ಬೆಲೆತೆರಬೇಕಾಗುತ್ತದೆ. ಇತಿಹಾಸ ಇದನ್ನು ನಮಗೆ ತಿಳಿ ಹೇಳಿದೆ‌. ಕೇರಳವನ್ನು ಲವ್ ಜಿಹಾದ್‌ನ ನಾಡನ್ನಾಗಿಸಲು ಹಾಗೂ ದ್ವೇಷವನ್ನು ಹಬ್ಬಿಸಲು ಭಯೋತ್ಪಾದಕ ಹಮಾಸ್ ಸಂಘಟನೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್/ಸಿಪಿಎಂ/ಯು.ಪಿ.ಎ ಮೈತ್ರಿಕೂಟದ ಲಜ್ಜೆಗೆಟ್ಟ ತುಷ್ಟೀಕರಣದ ರಾಜಕಾರಣಕ್ಕೆ ನಾಚಿಕೆಯಾಗಬೇಕು. ಇದು ಬೇಜವಾಬ್ದಾರಿ ಹುಚ್ಚು ರಾಜಕಾರಣದ ಪರಮಾವಧಿ, ಇದನ್ನು ಸಾಕು ಮಾಡಿ ಎಂದು ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ನಲ್ಲಿ ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಸಿಪಿಎಂನ ಅತಿಯಾದ ಓಲೈಕೆ ರಾಜಕಾರಣಕ್ಕೆ ಇತರ ಎಲ್ಲಾ ಸಮುದಾಯಗಳ ಮುಗ್ದರು ಬೆಲೆತೆರಬೇಕಾಗುತ್ತದೆ - ಇತಿಹಾಸ ಇದನ್ನು ನಮಗೆ ತಿಳಿ ಹೇಳಿದೆ‌.

ಕೇರಳವನ್ನು ಲವ್ ಜಿಹಾದ್ ನ ನಾಡನ್ನಾಗಿಸಲು ಹಾಗೂ ದ್ವೇಷವನ್ನು ಹಬ್ಬಿಸಲು ಭಯೋತ್ಪಾದಕ ಹಮಾಸ್ ಸಂಘಟನೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್/ಸಿಪಿಎಂ/ಯು.ಪಿ.ಎ ಮೈತ್ರಿಕೂಟದ…

— Rajeev Chandrasekhar 🇮🇳 (@Rajeev_GoI)

Tap to resize

Latest Videos

ಇದನ್ನು ಓದಿ: ಕೇರಳದಲ್ಲಿ ಸರಣಿ ಸ್ಫೋಟ: ದೆಹಲಿಯಲ್ಲಿ ನಡಿತೀರೋ ಪ್ಯಾಲೆಸ್ತೀನ್‌ ಪರ ಧರಣಿಯಲ್ಲಿ ಸಿಎಂ ಪಿಣರಾಯಿ ವಿಜಯನ್‌ ಭಾಗಿ!

ಅಲ್ಲದೆ, ನೀವು ನಿಮ್ಮ ಹಿತ್ತಲಿನಲ್ಲಿ ಹಾವುಗಳನ್ನು ಸಾಕಿಕೊಳ್ಳಲು ಸಾಧ್ಯವಿಲ್ಲ. ಅವು ನಿಮ್ಮ ನೆರೆಹೊರೆಯವರನ್ನೇ ಕಚ್ಚುತ್ತವೆ, ನೆರೆಹೊರೆಯವರು ಇಲ್ಲವಾದಲ್ಲಿ ನಿಮ್ಮನ್ನೇ ಕಚ್ಚುತ್ತವೆ ಎಂಬ ಸಂಗತಿ ನಿಮಗೆ ತಿಳಿದಿರಬೇಕು" ಎಂಬ ಹಿಲರಿ ರೋಧಮ್ ಕ್ಲಿಂಟನ್ ಅವರ ಕ್ವೋಟ್‌ ಅನ್ನು ಸಹ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಕೇರಳ ಸ್ಫೋಟದ ವಿಡಿಯೋವೊಂದನ್ನು ಸಹ ಈ ವೇಳೆ ಹಂಚಿಕೊಳ್ಳಲಾಗಿದೆ.

ಕಲಮಸ್ಸೆರಿಯ ಜಮ್ರಾ ಅಂತಾರಾಷ್ಟ್ರೀಯ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ 1,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಕ್ರೈಸ್ತರ ಪ್ರಾರ್ಥನಾ ಸಭೆಯಲ್ಲಿ ಸ್ಫೋಟಗಳು ಸಂಭವಿಸಿದೆ. ಅಕ್ಟೋಬರ್ 27 ರಂದು ಪ್ರಾರಂಭವಾದ ಮೂರು ದಿನಗಳ ಸಭೆಯ ಕೊನೆಯ ದಿನದಂದು ಈ ಘಟನೆ ನಡೆದಿದೆ. ಪ್ಯಾಲೆಸ್ತೀನ್‌ ಪರವಾಗಿ ಹಮಾಸ್ ಉಗ್ರ ಖಲೀದ್ ಮಶಾಲ್ ಅವರ ವಾಸ್ತವ ಭಾಷಣದ ನಂತರ ಈ ಘಟನೆಯು ಕೇರಳದಲ್ಲಿ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಿದೆ. 

ಇದನ್ನು ಓದಿ: ಕೇರಳದಲ್ಲಿ ಹಮಾಸ್‌ ಉಗ್ರ ಭಾಷಣ ಬೆನ್ನಲ್ಲೇ ತ್ರಿವಳಿ ಬಾಂಬ್‌ ಸ್ಪೋಟ: ಮಹಿಳೆ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

click me!