
ಪತ್ತನಂತಿಟ್ಟ: ಶಬರಿಮಲೆ ದರ್ಶನಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಲಿಕಾಪ್ಟರ್ ಇಳಿದ ಸ್ಥಳದ ಕಾಂಕ್ರೀಟ್ ನೆಲ ಕುಸಿದಿದೆ. ಪತ್ತನಂತಿಟ್ಟದ ಕೊನ್ನಿ ಪ್ರಮಾದಂ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಹೆಲಿಕಾಪ್ಟರ್‌ನ ಟೈರ್‌ಗಳು ಕಾಂಕ್ರೀಟ್‌ನಲ್ಲಿ ಹೂತುಹೋಗಿದ್ದವು. ನಂತರ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಹೆಲಿಕಾಪ್ಟರ್ ಮೇಲೆಕ್ಕೆತ್ತಿದ್ದಾರೆ.
ರಾಷ್ಟ್ರಪತಿಯವರ ಮೊದಲು ನೀಲಕ್ಕಲ್‌ನಲ್ಲಿ ಹೆಲಿಕಾಪ್ಟರ್ ಇಳಿಸಲು ನಿರ್ಧರಿಸಲಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಸ್ಥಳವನ್ನು ಪ್ರಮಾದಂ ಒಳಾಂಗಣ ಕ್ರೀಡಾಂಗಣಕ್ಕೆ ಬದಲಾಯಿಸಲಾಯಿತು. ಹೀಗಾಗಿ ಬೆಳಗ್ಗೆಯೇ ಪ್ರಮಾದಂನಲ್ಲಿ ಕಾಂಕ್ರೀಟ್ ಹಾಕಿ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು. ಈ ಕಾಂಕ್ರೀಟ್ ಗಟ್ಟಿಯಾಗುವ ಮುನ್ನವೇ ಹೆಲಿಕಾಪ್ಟರ್ ಇಳಿಸಿದ್ದರಿಂದ ನೆಲ ಕುಸಿಯಲು ಕಾರಣ ಎಂದು ತಿಳಿದು ಬಂದಿದೆ. ಈ ಘಟನೆ ಗಂಭೀರ ಭದ್ರತಾ ಲೋಪ ಎಂಬ ಆರೋಪ ಕೇಳಿಬರುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬೆಳಗ್ಗೆ ರಾಜಭವನದಿಂದ ಬೆಳಗ್ಗೆ 7.30ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪತ್ತನಂತಿಟ್ಟಕ್ಕೆ ಬಂದರು. ರಾಷ್ಟ್ರಪತಿಯವರ ಪ್ರಯಾಣ ನಿಗದಿತ ಸಮಯಕ್ಕಿಂತ ಮುಂಚೆಯೇ ಇತ್ತು. ಬೆಳಗ್ಗೆ 9 ಗಂಟೆಗೆ ಪ್ರಮಾದಂನಲ್ಲಿ ಹೆಲಿಕಾಪ್ಟರ್ ಇಳಿದ ನಂತರ, ಅಲ್ಲಿಂದ ರಸ್ತೆ ಮೂಲಕ ಪಂಪಾಗೆ ತೆರಳಿದ್ದಾರೆ. ಪೊಲೀಸ್ ಪಡೆಯ ಗೂರ್ಖಾ ವಾಹನದಲ್ಲಿ ಸನ್ನಿಧಾನಕ್ಕೆ ತೆರಳಿ ಇರುಮುಡಿ ಹೊತ್ತು 18 ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣ ಡ್ಯೂಟಿ ಫ್ರೀ ಶಾಪ್‌ನಿಂದ ಮದ್ಯ ಖರೀದಿಸಿದ ಯುವಕ ಅರೆಸ್ಟ್, ನಿಯಮವೇನು?
ಮಧ್ಯಾಹ್ನ 12.20ಕ್ಕೆ ದರ್ಶನದ ನಂತರ ಸನ್ನಿಧಾನದ ಅತಿಥಿಗೃಹದಲ್ಲಿ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ರಾಷ್ಟ್ರಪತಿ ದರ್ಶನ ಮುಗಿಸಿ ಹಿಂತಿರುಗುವವರೆಗೆ ಇತರ ಯಾತ್ರಾರ್ಥಿಗಳಿಗೆ ನೀಲಕ್ಕಲ್ ಬಳಿ ಪ್ರವೇಶವಿರುವುದಿಲ್ಲ. ದರ್ಶನದ ನಂತರ ರಾತ್ರಿ ತಿರುವನಂತಪುರಕ್ಕೆ ಹಿಂತಿರುಗುವ ರಾಷ್ಟ್ರಪತಿ, ಹೋಟೆಲ್ ಹಯಾತ್ ರೀಜೆನ್ಸಿಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೀಡುವ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 24 ರಂದು ರಾಷ್ಟ್ರಪತಿ ದೆಹಲಿಗೆ ಹಿಂತಿರುಗಲಿದ್ದಾರೆ. ದೇವಸ್ವಂ ಮಂಡಳಿಯಿಂದ ಉಡುಗೊರೆಯಾಗಿ ಕುಂಬಿಲಿಯಿಂದ ಕೆತ್ತಿದ ಮರದ ಅಯ್ಯಪ್ಪ ವಿಗ್ರಹವನ್ನು ರಾಷ್ಟ್ರಪತಿಗಳಿಗೆ ನೀಡಲಾಗುವುದು.
ಇದನ್ನೂ ಓದಿ: ಶಬರಿಮಲೆ ಬಳಿಕ ಗುರುವಾಯೂರು ದೇಗುಲದ ಸ್ವತ್ತಿನಲ್ಲೂ ಅಕ್ರಮ ಶಂಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ