ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ಗೆ ಶೀಘ್ರದಲ್ಲೇ ಬೈಪಾಸ್ ಸರ್ಜರಿ!

By Suvarna NewsFirst Published Mar 27, 2021, 8:17 PM IST
Highlights

ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆ ದಾಖಲಾಗಿದ್ದ ರಾಷ್ಟ್ರಪತಿ ರಾಮ್‍ ನಾಥ್ ಕೋವಿಂದ್ ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ಚಿಕಿತ್ಸೆಗೆ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಇದೀಗ ಬೈಪಾಸ್ ಸರ್ಜರಿ ನಡೆಸಲು ವೈದ್ಯರ ತಂಡ ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮಾ.27):  ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಶುಕ್ರವಾರ(ಮಾ.26) ಎದೆ ನೋವು ಕಾಣಿಸಿಕೊಂಡ ಕಾರಣ ತಕ್ಷಣವೇ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಂದ್ ಆರೋಗ್ಯ ಸ್ಥಿರವಾಗುತ್ತಿದ್ದಂತೆ ಇದೀಗ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮಧ್ಯಾಹ್ನ(ಮಾ.27) ರಾಷ್ಟ್ರಪತಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  

ರಾಷ್ಟ್ರಪತಿ ಕೋವಿಂದ್‌ಗೆ ಎದೆನೋವು, ಆಸ್ಪತ್ರೆಗೆ ದಾಖಲು!.

ಸದ್ಯ ರಾಮ್ ನಾಥ್ ಆರೋಗ್ಯ ಸ್ಥಿರವಾಗಿದೆ. ಎದೆನೋವು ಸಮಸ್ಯೆಗೆ ಪರಿಹಾರ ನೀಡಲು ವೈದ್ಯರ ತಂಡ ಬೈಸ್ ಪಾಸ್ ಸರ್ಜರಿ ನಡೆಸಲು ಮುಂದಾಗಿದೆ. ಮಾರ್ಚ್ 30 ರಂದು ದೆಹಲಿಯ ಏಮ್ಸ್ ತಜ್ಞ ವೈದ್ಯರ ತಂಡ ರಾಮ್ ನಾಥ್ ಕೋವಿಂದ್‌ಗೆ ಬೈ ಪಾಸ್ ಸರ್ಜರಿ ಮಾಡಲಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಕೋವಿಂದ್ ಆರೋಗ್ಯ ಸ್ಥಿರವಾಗಿದೆ. ಕೋವಿಂದ್ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದ ಎಂದು ರಾಷ್ಟ್ರಪತಿ ಭವನ ಅಧೀಕೃತ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದೆ.

 

The President has been under observation after a routine medical checkup. He thanks all who enquired about his health and wished him well.

— President of India (@rashtrapatibhvn)

75 ವರ್ಷದ ರಾಮನಾಥ್ ಕೋವಿಂದ್ ಅವರಿಗೆ ಶುಕ್ರವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡು ಸೇನಾ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಆರೋಗ್ಯ ವಿಚಾರಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಆಸ್ಪತ್ರೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

click me!