ಪಶ್ಚಿಮ ಬಂಗಾಳದಲ್ಲಿ ಶೇ.79.79, ಅಸ್ಸಾಂನಲ್ಲಿ ಶೇ.72 ರಷ್ಟು ಮತದಾನ; ಹೇಗೆ ಸಾಧ್ಯ ಎಂದ ದೀದಿ!

Published : Mar 27, 2021, 07:38 PM IST
ಪಶ್ಚಿಮ ಬಂಗಾಳದಲ್ಲಿ ಶೇ.79.79, ಅಸ್ಸಾಂನಲ್ಲಿ ಶೇ.72 ರಷ್ಟು ಮತದಾನ;  ಹೇಗೆ ಸಾಧ್ಯ ಎಂದ ದೀದಿ!

ಸಾರಾಂಶ

ಪಂಚ ರಾಜ್ಯ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳ ಮೊದಲ ಹಂತದ ಮತದಾನ ಇಂದು ನಡೆದಿದೆ. ಬೆಳಗ್ಗೆಯಿಂದ ಬಿರುಸಿನ ಮತದಾನ ನಡೆದಿದ್ದು ಇದೀಗ ಶೇಕಡಾವರು ಮತದಾನದ ವಿವರ ಬಹಿರಂಗವಾಗಿದೆ. ಆದರೆ ಬಂಗಾಳ ಸಿಎಂ ಮಮತಾ ಇದು ಹೇಗೆ ಸಾಧ್ಯ? ಎಂದು ಆಯೋಗವನ್ನೇ ಪ್ರಶ್ನಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಮಾ.27):  ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯದ ಮೊದಲ ಹಂತದ ಚುನಾವಣೆ ನಡೆದಿದೆ. ಪಶ್ಚಿಮ ಬಂಗಾಳದ 8 ಹಂತದ ಮತದಾನದ ಪೈಕಿ ಇಂದು(ಮಾ.27) ಮೊದಲ ಹಂತದ ಮತದಾನ ನಡೆದಿದೆ. ಮೊದಲ ಹಂತದ 30 ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇಕಡಾ 79.79 ಮತದಾನ ದಾಖಲಾಗಿದೆ ಎಂದು ಆಯೋಗ ಹೇಳಿದೆ.

ಮೋದಿ ಬಾಂಗ್ಲಾ ಪ್ರವಾಸಕ್ಕೆ ಕೆರಳಿದ ಮಮತಾ; ಆಯೋಗಕ್ಕೆ ದೂರು ನೀಡಲು ಮುಂದಾದ ಸಿಎಂ!

ಅಸ್ಸಾಂ ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇದರಲ್ಲಿ ಮೊದಲ ಹಂತದ 47 ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ. ಅಸ್ಸಾಂನಲ್ಲಿಂದು ಶೇಕಡಾ 72.14 ರಷ್ಟು ಮತದಾನವಾಗಿದೆ. ಕೊರೋನಾ ನಡುವೆ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಯಾವುದೇ ಅಹಿತರ ಘಟನೆ ನಡೆಯದಂತೆ ಆಯೋಗ ಮುನ್ನಚ್ಚೆರಿಕ ಕ್ರಮ ಕೈಗೊಂಡು ಮತದಾನ ನಡೆಯಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 5 ನಿಮಿಷದಲ್ಲಿ ಶೇಕಡವಾರು ಮತದಾನ ಅರ್ಧಕ್ಕೆ ಕುಸಿದಿದ್ದು ಹೇಗೆ? ಎಂದು ತೃಣಮೂಲ ಕಾಂಗ್ರೆಸ್, ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ. ಈ ಕುರಿತು ತಕ್ಷಣವೇ ಗಮನಹರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದರ ನಡುವೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಹೋದರ ಸೌಮೆಂದು ಅಧಿಕಾರಿ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರಮ ಮೋದಿ ಚುನಾವಣಾ ನೀತಿ ಸಂಹಿತ ಉಲ್ಲಂಘಿಸಿದ್ದಾರೆ. ಬಾಂಗ್ಲಾದೇಶ ಪ್ರವಾಸದಲ್ಲಿ ಬಂಗಾಳ ಕುರಿತು ಭಾಷಣ ಮಾಡಿ ಚುನಾವಣೆ ನೀತಿ ಉಲ್ಲಂಘಿಸಿದ್ದಾರೆ. ಈ ಕುರಿತು ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ಸಿಇಒ ವಜಾಕ್ಕೆ ಕೇಂದ್ರ ಸೂಚನೆ ಸಾಧ್ಯತೆ
ಗುಲಾಮಿ ಮನಃಸ್ಥಿತಿ ಬಿಡಲು 2035ರ ಗಡುವು : ಮೋದಿ