ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡಿ ಗಮನಸೆಳೆದಿದ್ದಾರೆ. ಕ್ರೀಡೆ ಕುರಿತು ರಾಷ್ಟ್ರಪತಿಗಿರುವ ಒಲವು ಹಾಗೂ ಆಸಕ್ತಿ ಎಲ್ಲರನ್ನು ಚಕಿತಗೊಳಿಸಿದೆ.
ನವದೆಹಲಿ(ಜು.10) ರಾಷ್ಟ್ರಪತಿ ದ್ರೌಪದಿ ಮುರ್ಮು ಕೆಲ ವೇದಿಕೆಗಳಲ್ಲಿ ಕ್ರೀಡೆ ಕುರಿತು ತಮಗಿರುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಹೆಚ್ಚು ಗಂಭೀರವಾಗಿ ಕಾಣುವ ದ್ರೌಪದಿ ಮುರ್ಮು ಇಂದು ಎಲ್ಲರನ್ನು ಚಕಿತಗೊಳಿಸಿದ್ದಾರೆ. ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಮುರ್ಮು ಕಾಣಿಸಿಕೊಂಡಿದ್ದಾರೆ. ಸೈನಾ ನೆಹ್ವಾಲ್ ಜೊತೆ ಬ್ಯಾಡ್ಮಿಂಟನ್ ಆಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ದ್ರೌಪದಿ ಮುರ್ಮು, ಸೈನಾ ನೆಹ್ವಾಲ್ ಜೊತೆ ಯಾವುದೇ ಅಡೆ ತಡೆ ಇಲ್ಲದೆ ಬ್ಯಾಡ್ಮಿಂಟನ್ ಆಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿನ ಕೋರ್ಟ್‌ನಲ್ಲಿ ಕೆಲ ಹೊತ್ತು ಬ್ಯಾಡ್ಮಿಂಟನ್ ಆಡಿದ್ದಾರೆ. ಅವಳ ಕತೆ, ನನ್ನ ಕತೆ ಉಪನ್ಯಾಸ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಮಹಿಳಾ ಸಾಧಕರ ಕುರಿತ ಉಪನ್ಯಾಸ ಸರಣಿಯಲ್ಲಿ ಈ ಬಾರಿ ಸೈನಾ ನೆಹ್ವಾಲ್ ಪಾಲ್ಗೊಳ್ಳುತ್ತಿದ್ದಾರೆ. ಜುಲೈ 11ರಂದು ರಾಷ್ಟ್ರಪತಿ ಭವನದ ಸಾಂಸ್ಕೃತಿ ಭವನದಲ್ಲಿ ಉಪನ್ಯಾಸ ಸರಣಿ ಕಾರ್ಯಕ್ರಮ ನಡೆಯಲಿದೆ. ಸೈನಾ ನೆಹ್ವಾಲ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
70 ವರ್ಷ ದಾಟಿದ ಪ್ರಜೆಗಳಿಗೆ ಉಚಿತ ಚಿಕಿತ್ಸೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ, ಹಾಗೂ ಸಾಧಕರ ಸ್ಪೂರ್ತಿ ಮಾತುಗಳು ಇತರರಿಗೆ ಪ್ರೇರಣೆಯಾಗಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದ್ರೌಪದಿ ಮುರ್ಮು ವಿಶೇಷ ಆಸಕ್ತಿ ವಹಿಸಿರುವ ಈ ಕಾರ್ಯಕ್ರಮಕ್ಕೂ ಮೊದಲು ಬ್ಯಾಡ್ಮಿಂಟನ್ ಆಡಿ ಗಮನಸೆಳೆದಿದ್ದಾರೆ.
President Droupadi Murmu’s natural love for sports and games was seen when she played badminton with the much-celebrated player Ms. Saina Nehwal at the Badminton Court in Rashtrapati Bhavan. The President’s inspiring step is in keeping with India’s emergence as a badminton-power… pic.twitter.com/DGjRudbzSc
— President of India (@rashtrapatibhvn)
ಇದಕ್ಕೂ ಮುನ್ನ ದ್ರೌಪದಿ ಮುರ್ಮು, ಡ್ಯುರಾಂಡ್ ಕಪ್ 2024 ಹಾಗೂ ಪ್ರೆಸಿಡೆಂಟ್ ಕಪ್ ಶಿಮ್ಲಾ ಟ್ರೋಫಿ ಅನಾವರಣಗೊಳಿಸಿದ್ದರು. ಫುಟ್ಬಾಲ್, ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಸಹಸ್ರಾರು ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ವೃತ್ತಿಪರ ಆಟಗಾರರು ಆಟ ಆಡುತ್ತಿದ್ದರೆ ಆಟಗಾರರು ಮತ್ತು ಪ್ರೇಕ್ಷಕರ ಉತ್ಸಾಹ ಹಲವು ಪಟ್ಟು ವೃದ್ಧಿಸುತ್ತದೆ ಎಂದಿದ್ದಾರೆ.
ಡ್ಯುರಾಂಡ್ ಕಪ್ 2024ರ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ರಾಷ್ಟ್ರಪತಿಯವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಪಂದ್ಯದಲ್ಲಿ ಗೆದ್ದರೂ ಅಥವಾ ಸೋತರೂ, ಆಟದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಮತ್ತು ಇತರ ತಂಡಗಳನ್ನು ಗೌರವಿಸಬೇಕು ಎಂದು ಆಟಗಾರರಿಗೆ ಕಿವಿಮಾತು ಹೇಳಿದರು. ಕೆಲವೊಮ್ಮೆ, ಆಟದಲ್ಲಿ ಪ್ರಚೋದನೆಗಳು ಮತ್ತು ಭಾವೋದ್ರೇಕಗಳು ಇರುತ್ತವೆ, ಆದರೆ ಆಟಗಾರರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೇ ಇರುವುದು ಉತ್ತಮ ಬೆಳವಣಿಗೆ. ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಎಲ್ಲಾ ಆಟಗಾರರು ದೃಢಸಂಕಲ್ಪ ಮತ್ತು ಕ್ರೀಡಾ ಮನೋಭಾವದಿಂದ ಆಡುವ ವಿಶ್ವಾಸವಿದೆ ಎಂದಿದ್ದಾರೆ.
ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ 5 ಅಪರೂಪದ ಸಂಗತಿಗಳು