ಭಾರಿ ಪರ ವಿರೋಧಗಳ ನಡುವೆ ಸಂಸತ್ತಿನಲ್ಲಿ ಮಂಡನೆಯಾದ ವಕ್ಫ್ ಬಿಲ್ ಅಷ್ಟೇ ಗದ್ದಲದ ನಡುವೆ ಪಾಸ್ ಆಗಿತ್ತು. ಇದೀಗ ವಕ್ಫ್ ತಿದ್ದುಪಡಿ ಮಸೂದೆ ಕಾನೂನಾಗಿದೆ. ಕಾರಣ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಲ್‌ಗೆ ಅಂಕಿತ ಹಾಕಿದ್ದಾರೆ.
ನವದೆಹಲಿ(ಏ.06) ಕೇಂದ್ರ ಬಿಜೆಪಿ ಸರ್ಕಾರದ ಮಹತ್ವಕಾಂಕ್ಷಿ ಮಸೂದೆಗಳ ಪೈಕಿ ಒಂದಾಗ ವಕ್ಫ್ ತಿದ್ದುಪಡಿ ಮಸೂದೆ ಈಗ ಕಾನೂನಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಭಾರಿ ಪರ ವಿರೋಧಗಳಿಗೆ ಕಾರಣವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ ಗದ್ದಲದ ನಡುವೆ ಪಾಸ್ ಆಗಿತ್ತು. ಸುದೀರ್ಘ ಚರ್ಚೆ ದೇಶದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಪ್ರತಿಭಟನೆ, ಪರ ವಿರೋಧಗಳ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ವಕ್ಫ್ ತಿದ್ದುಪಡಿ ಮಸೂದೆ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿಗಳ ಅಂಕಿತ ಬೀಳುತ್ತಿದ್ದಂತೆ ವಕ್ಫ್ ತಿದ್ದುಪಡಿ ಮಸೂದೆ ಕಾನೂನಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದೆ. ಇದರ ಜೊತೆಗೆ ಮುಸ್ಲಿಮ್ ಸಂಸದರು, ಮುಸ್ಲಿಮ್ ಲೀಗ್, ಮುಸ್ಲಿಮ್ ಸಂಘಟನೆಗಳು ಭಾರಿ ಪ್ರತಿಭಟನೆ ಮಾಡುತ್ತಿದೆ. ಇಷ್ಟೇ ಅಲ್ಲ ಕೆಲ ಮುಸ್ಲಿಮ್ ಸಂಘಟನೆಗಳು ರಾಷ್ಟ್ರಪತಿಗ ಮನವಿಯನ್ನು ಮಾಡಿಕೊಂಡಿದೆ. ಇತ್ತ ಕೆಲ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಎಲ್ಲಾ ಬೆಳವಣಗೆ ನಡುವೆ ರಾಷ್ಟ್ರಪತಿ ಮುರ್ಮು ಬಿಲ್‌ಗೆ ಅಂಕಿತ ಹಾಕಿದ್ದಾರೆ.
ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ವಕ್ಫ್ ಮಸೂದೆಯನ್ನು ಅಂಗೀಕರಿಸಿ್ತು. ಮತ ಚಲಾವಣೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆಗಿತ್ತು. ಬಳಿಕ ಈ ಮಸೂದೆಯನ್ನು ರಾಷ್ಟ್ರಪತಿ ಅನುಮೋದನೆಗೆ ಕಳುಹಿಸಲಾಗಿತ್ತು. ಶುಕ್ರವಾರ ಉಭಯ ಸದನಗಳ ಚರ್ಚೆ ಬಳಿಕ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿತ್ತು. ಸೋಮವಾರ ಮುರ್ಮು ಅಂಕಿತ ಹಾಕಲಿದ್ದಾರೆ ಎಂದು ಕೇಂದ್ರ ಸರ್ಕಾರ ಈ ಕುರಿತು ಸೂಚನೆ ನೀಡಿತ್ತು. ಆದರೆ ಪ್ರತಿಭಟನೆ, ಸುಪ್ರೀಂ ಕೋರ್ಟ್ ಕದತಟ್ಟಿದ ಬೆನ್ನಲ್ಲೇ ಶನಿವಾರವೇ ಮುರ್ಮು ಅಂಕಿತ ಹಾಕಿದ್ದಾರೆ. ಇದೀಗ ಈ ಮಸೂದೆ ಕಾನೂನಾಗಿ ಗಜೆಟ್‌ನಲ್ಲಿ ಪ್ರಕಟಣೆಯಾಗಲಿದೆ. ಇದೇ ವೇಳೆ ಕಾನೂನು ನಿಯಮ ಹೊರಡಿಸಲಾಗುತ್ತದೆ.
ರಾಜ್ಯಸಭೆಯಲ್ಲಿ 128 ಮತ
ವಕ್ಫ್ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ 128 ಮತಗಳೊಂದಿಗೆ ಪಾಸ್ ಆಗಿತ್ತು. ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಸರಿಸುಮಾರು 17 ಗಂಟೆ ಬಿಲ್ ಕುರಿತು ಚರ್ಚೆ ನಡೆದಿತ್ತು. ಕೊನೆಗೆ ಮಸೂದೆಯನ್ನು ಮತಕ್ಕೆ ಹಾಕಲಾಗಿತ್ತು. ಈ ವೇಳೆ 128 ಸಂಸದರು ಬಿಲ್ ಪರವಾಗಿ ಮತ ಹಾಕಿದ್ದರೆ, 95 ಸಂಸದರು ಬಿಲ್ ವಿರುದ್ಧವಾಗಿ ಮತ ಚಲಾವಣೆ ಮಾಡಿದ್ದರು.
ಲೋಕಸಭೆಯಲ್ಲಿ 288 ಮತ
ಲೋಕಸಭೆಯಲ್ಲಿ ಸರಿಸುಮಾರು 12 ಗಂಟೆಗಳ ಕಾಲ ವಕ್ಫ್ ತಿದ್ದುಪಡಿ ಮಸೂದೆ ಕುರಿತು ಚರ್ಚೆ ನಡೆದಿತ್ತು. ಬಳಿಕ ಮತ ಚಲಾಣೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪರ 288 ಮತಗಳು ಬಿದ್ದಿತ್ತು. ವಿರುದ್ಧವಾಗಿ 232 ಮತಗಳು ಚಲಾವಣೆಗೊಂಡಿತ್ತು.