18ನೇ ಲೋಕಸಭೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮೊದಲ ಭಾಷಣ, ವಿಪಕ್ಷಗಳ ಅಡ್ಡಿ!

By Chethan Kumar  |  First Published Jun 27, 2024, 11:27 AM IST

18ನೇ ಲೋಕಸಭೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಭಾಷಣ ಮಾಡಿದ್ದಾರೆ. ಆದರೆ ವಿಪಕ್ಷಗಳು ಕೆಲ ಮಾತುಗಳುಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಸೃಷ್ಟಿಸಿದೆ.
 


ನವದೆಹಲಿ(ಜೂ.27)  ಲೋಕಸಭೆ ಹಾಗೂ ರಾಜ್ಯಸಭೆ ಜಂಟಿ ಸದನವನ್ನುದ್ದೇಶಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. 18ನೇ ಲೋಕಸಭೆ ರಚನೆಯಾದ ಬಳಿಕ ರಾಷ್ಟ್ರಪತಿ ಅವರ ಮೊದಲ ಭಾಷಣ ಇದಾಗಿದೆ. ಆದರೆ ದ್ರೌಪದಿ ಮುರ್ಮು ಮೊದಲ ಭಾಷಣದ ಕೆಲ ವಿಚಾರಗಳಿಗೆ ವಿಪಕ್ಷಗಳು ಅಡ್ಡಿಪಡಿಸಿದೆ. ಪ್ರಮುಖವಾಗಿ ಸ್ಪಷ್ಟ ಬಹುಮತದ ಸರ್ಕಾರ, ಜನರ ವಿಶ್ವಾಸ ಅನ್ನೋ ಮಾತುಗಳಿಗೆ ವಿಪಕ್ಷಗಳು ಗದ್ದಲ ಸೃಷ್ಟಿಸಿದೆ. ದ್ರೌಪದಿ ಮುರ್ಮು ಭಾಷಣಕ್ಕೆ ವಿಪಕ್ಷಗಳು ಪದೇ ಪದೇ ಅಡ್ಡಿ ಪಡಿಸಿದೆ. 

ಇದು ವಿಶ್ವದ ಅತೀ ದೊಡ್ಡ ಚುನಾವಣೆ. ಭಾರತದಲ್ಲಿ ಮೂರನೇ ಬಾರಿಗೆ ಸ್ಪಷ್ಟ ಬಹುಮತದ ಸರ್ಕಾರ ರಚನೆಯಾಗಿದೆ. ಇಡೀ ವಿಶ್ವವೇ ಭಾರತವನ್ನು ಗಮಿನಿಸುತ್ತಿದೆ.  ಮಹಿಳೆಯರ ಅತೀ ದೊಡ್ಡ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ. ವಿಕಸಿತ್ ಭಾರತ ಸಂಕಲ್ಪದ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ ಎಂದು ದ್ರೌಪದಿ ಮುರ್ಮು ಹೇಳಿದ್ದಾರೆ. ಈ ವೇಳೆ ವಿಪಕ್ಷಗಳು ಗದ್ದಲ ಸೃಷ್ಟಿಸಿತ್ತು.

Tap to resize

Latest Videos

ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತ 5 ಅಪರೂಪದ ಸಂಗತಿಗಳು

ಹಲವು ಸವಾಲುಗಳನ್ನು ಮೆಟ್ಟಿ ಭಾರತ ತನ್ನ ಗುರಿಯತ್ತ ಸಾಗುವ ವಿಶ್ವಾಸವಿದೆ. ಈ 18ನೇ ಲೋಕಸಭೆ ಜನರ ಕಲ್ಯಾಣಕ್ಕೆ ಶ್ರಮಿಸುವ ವಿಶ್ವಾಸವಿದೆ. ಹೀಗಾಗಿ 18ನೇ ಲೋಕಸಭೆ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಲಿದೆ. ಈ ಬಾರಿ ಜನರ ಕಲ್ಯಾಣಕ್ಕೆ ಬಜೆಟ್ ಮಂಡಿಸಲಾಗುತ್ತದೆ. ಈ ಬಜೆಟ್ ಜನಸಾಮಾನ್ಯರ ಒಳಿತು ಹಾಗೂ ಅಭಿವೃದ್ಧಿ ನೆರವಾಗುವ ವಿಶ್ವಾಸವಿದೆ. 

ಭಾರತ ಆರ್ಥಿಕತೆಯಲ್ಲಿ 5ನೇ ಸ್ಥಾನಕ್ಕೇರಿದೆ. ಇದೀಗ ಮೂರನೇ ಸ್ಥಾನಕ್ಕೇರುವ ಗುರಿ ಹೊಂದಿದೆ. ಕೊರೋನಾ ಸೇರಿದಂತೆ ವಿಶ್ವದ ಬೇರೆ ಬೇರೆ ಕಡೆ ನಡೆಯುತ್ತಿರುವ ಸಂಘರ್ಷಗಳ ನಡುವೆ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ವಿಕಸಿತ ಭಾರತದತ್ತ ಸರ್ಕಾರ ಕೆಲಸ ಮಾಡಲಿದೆ. ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ಕುರಿತು ಸರ್ಕಾರ ವಿಶೇಷ ಗಮನಹರಿಸಲಿದೆ ಎಂದು ಮುರ್ಮು ಹೇಳಿದ್ದಾರೆ.

ಸೆಮಿಕಂಡ್ಟರ್, ಗ್ರೀನ್ ಹೈಡ್ರೋಜನ್, ಏರ್‌ಕ್ರಾಫ್ಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಐಟಿ, ಆರೋಗ್ಯ ಸೇರಿದಂತೆ ಹಲವು ಸೇವಾ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಳೆದ 10 ವರ್ಷ ನಮ್ಮ ಸರ್ಕಾರ ಗ್ರಾಮೀಣ ಅಭಿವೃದ್ದಿಗೆ ನೆರವ ನೀಡಿದೆ. ಇದರಿಂದ ಕೃಷಿ, ಉದ್ಯೋಗಳು ಜನಸಾಮಾನ್ಯರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿದೆ ಎಂದು ಮೋದಿ ಹೇಳಿದ್ದಾರೆ.

ರಾಜ್ಯದ 27 ಎಂಪಿಗಳು ಕನ್ನಡದಲ್ಲಿ, ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ!

ಕಿಸಾನ್ ಸಮ್ಮಾನ್ ನಿಧಿ ಮೂಲಕ ಸಣ್ಣ ರೈತರಿಗೆ ನೆರವು ನೀಡಲಾಗುತ್ತಿದೆ. ರೈತರ ಬೆಳೆಗಳಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗಧಿಪಡಿಸಿದೆ. ಕೃಷಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರ ಪರಿಶ್ರಮಿಸುತ್ತಿದೆ. ಆತ್ಮನಿರ್ಭರತೆ ಸಾಧಿಸಲು ಸರ್ಕಾರ ಅವಿರತ ಪ್ರಯತ್ನ ನಡೆಸುತ್ತಿದೆ. ನಮ್ಮ ಸರ್ಕಾರ ಇಲ್ಲಿನ ಪ್ರದೇಶಗಳನ್ನು ಸುರಕ್ಷಿತವಾಗಿ ಸುವ್ಯವಸ್ಥಿತ ಪ್ರದೇಶವಾಗಿ ಮಾಡಲು ಕಾರ್ಯನಿರ್ವಹಿಸುತ್ತಿದೆ ಎಂದು ಮುರ್ಮು ಹೇಳಿದ್ದಾರೆ.

ದೇಶದ ಹಲವು ನಗರಗಳಿಗೆ ಮೆಟ್ರೋ ವಿಸ್ತರಣೆಯಾಗಿದೆ. ಸಾರಿಗೆ ಸಂಪರ್ಕದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

click me!