ಪ್ರೇಮಾನಂದ ಆಶ್ರಮದ ವಿಕ್ಷಿಪ್ತ ನಿಯಮ ಹೊರ ಪ್ರಪಂಚದ ಸಂಪರ್ಕ ನಿಷೇಧ, ಸಾಯೋ ಮುನ್ನ ಖಾಸಗಿ ಅಂಗ ಕತ್ತರಿಸಿಕೊಂಡ ಶಿಷ್ಯ!

Published : Oct 07, 2026, 12:29 PM IST
Premanand Maharaj Ashram Death

ಸಾರಾಂಶ

ಉತ್ತರ ಪ್ರದೇಶದ ಪ್ರೇಮಾನಂದ ಮಹಾರಾಜ್ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ಶರಣ್ ಅವರ ಅನುಮಾನಾಸ್ಪದ ಸಾವಿನ ತನಿಖೆ ತೀವ್ರಗೊಂಡಿದೆ. ಕಟ್ಟಡದಿಂದ ಹಾರುವ ಮುನ್ನ ಆತ ತನ್ನ ಖಾಸಗಿ ಅಂಗಗಳನ್ನು ಕತ್ತರಿಸಿಕೊಂಡಿದ್ದ ಎಂಬ ಭೀಕರ ಸತ್ಯ ಮರಣೋತ್ತರ ಪರೀಕ್ಷೆ ಮತ್ತು ಸಿಸಿಟಿವಿ ದೃಶ್ಯಗಳಿಂದ ಬಯಲಾಗಿದೆ. ಆಶ್ರಮದ ವಿಚಿತ್ರ ನಿಯಮಗಳು ಮತ್ತು ಈ ಘಟನೆಯ ಹಿಂದಿನ ನಿಗೂಢ ಕಾರಣಗಳನ್ನು ಪೊಲೀಸರು ಭೇದಿಸುತ್ತಿದ್ದಾರೆ.

ಲಖನೌ: ಉತ್ತರ ಪ್ರದೇಶದ ಸಂತ ಪ್ರೇಮಾನಂದ ಮಹಾರಾಜ್ ಅವರ ಆಶ್ರಮದಲ್ಲಿ ಶಿಷ್ಯ ರಸಿಕ್ ದುಲಾರಿ ಶರಣ್ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ತನಿಖೆ ವೇಳೆ, ಆಶ್ರಮದಲ್ಲಿ ಮೊಬೈಲ್ ಬಳಕೆಯ ಮೇಲಿನ ನಿರ್ಬಂಧ ಸೇರಿದಂತೆ ಹಲವು ವಿಚಿತ್ರ ಮತ್ತು ಅನುಮಾನಾಸ್ಪದ ನಿಯಮಗಳು ಬೆಳಕಿಗೆ ಬಂದಿವೆ.

ಆಶ್ರಮದ ಪ್ರವೇಶದ ನಂತರ ಶಿಷ್ಯರಿಗೆ ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುತ್ತದೆ. ಶಿಷ್ಯರಾದ ಅಥವಾ ಸಾಧಕರಾದ ನಂತರ, ಅವರ ವೈಯಕ್ತಿಕ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಮತ್ತು ಆಶ್ರಮದಿಂದ ಅವರಿಗೆ ಹೊಸ ಫೋನ್‌ಗಳು ಹಾಗೂ ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಪರ್ಕ ಸಹ ಸೀಮಿತವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಸಂಪೂರ್ಣವಾಗಿ ನಿಷೇಧಿತವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಈ ನಿಯಮಗಳ ಹಿಂದಿನ ಕಾರಣಗಳನ್ನು ತನಿಖೆ ಮಾಡುತ್ತಿದ್ದಾರೆ. ಜತೆಗೆ ಶಿಷ್ಯರ ಮೊಬೈಲ್ ಫೋನ್‌ಗಳು ಮತ್ತು ಅವರ ಹಿಂದಿನ ಸಂಪರ್ಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲಿ ಮತ್ತು ಯಾರ ಬಳಿ ಸಂಗ್ರಹಿಸಿಡಲಾಗಿತ್ತು ಎಂಬುದರ ಕುರಿತೂ ಪರಿಶೀಲನೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ:

ಆಶ್ರಮದ ಹಾಸ್ಟೆಲ್‌ನ ನಾಲ್ಕನೇ ಮಹಡಿಯಿಂದ ಹಾರಿ ದೀಪಕ್ ಲೋಧಿ (ಆಲಿಯಾಸ್ ರಸಿಕ್ ದುಲಾರಿ ಶರಣ್) ಎಂಬ ಯುವಕ ಸಾವಿಗೆ ಶರಣಾದ ಎಂಬ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಮೇಲ್ನೋಟಕ್ಕೆ ಇದು ಕೇವಲ ಸ್ವಯಂ ಸಾವು ಎಂದು ಕಂಡುಬಂದರೂ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ನೀಡಿವೆ.

ಕಟ್ಟಡದಿಂದ ಹಾರುವ ಮುನ್ನ ನಡೆದ ಭೀಕರ ಕೃತ್ಯ!

ಪೋಲಿಸರ ಮರಣೋತ್ತರ ಪರೀಕ್ಷೆಯ ವೇಳೆ ಬಯಲಾದ ಮಾಹಿತಿ ಪ್ರಕಾರ, ದೀಪಕ್ ಮಹಡಿಯಿಂದ ಕೆಳಗೆ ಹಾರುವ ಮುನ್ನವೇ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ. ತನ್ನ ಕೋಣೆಯಲ್ಲಿದ್ದ ಎಲೆಕ್ಟ್ರಿಕ್ ಆಂಗಲ್ ಗ್ರೈಂಡರ್ ಯಂತ್ರ ಬಳಸಿ ಆತ ತನ್ನ ಖಾಸಗಿ ಅಂಗಗಳನ್ನು ಸ್ವತಃ ಕತ್ತರಿಸಿಕೊಂಡಿದ್ದ ಎಂಬುದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಯಾವುದೇ ಪತ್ರ ಸಿಗದ ಕಾರಣ, ಅಷ್ಟೊಂದು ಭೀಕರವಾಗಿ ತನ್ನ ಅಂಗಚ್ಛೇದನ ಮಾಡಿಕೊಳ್ಳಲು ಹಾಗೂ ಪ್ರಾಣ ಕಳೆದುಕೊಳ್ಳಲು ಆತನಿಗೆ ಇದ್ದ ಬಲವಾದ ಕಾರಣವೇನು ಎಂಬುದು ಪೊಲೀಸರಿಗೆ ಕಗ್ಗಂಟಾಗಿದೆ.

ನಾಲ್ಕು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದೇನು?

ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ನಾಲ್ಕು ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ತೀವ್ರ ಪರಿಶೀಲನೆಗೆ ಒಳಪಡಿಸಿದ್ದಾರೆ. ಮೊದಲ ದೃಶ್ಯ ಬೆಳಿಗ್ಗೆ 10:30ಕ್ಕೆ ದೀಪಕ್ ನಾಲ್ಕನೇ ಮಹಡಿಯಿಂದ ಕೆಳಗೆ ರಸ್ತೆಗೆ ಬೀಳುವ ದೃಶ್ಯ ಸೆರೆಯಾಗಿದೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಎರಡನೇ ದೃಶ್ಯದಲ್ಲಿ ದೀಪಕ್ ಟೆರೇಸ್ ಅಂಚಿನಲ್ಲಿ ಕುಳಿತು, ನಂತರ ಛಾವಣಿಯ ಮೇಲೆ ಮಲಗಿ, ಇದ್ದಕ್ಕಿದ್ದಂತೆ ಎದ್ದು ಕೆಳಗೆ ಜಿಗಿಯುತ್ತಾನೆ. ಇದೇ ವೇಳೆ ಟೆರೇಸ್ ಹಿಂಭಾಗದಿಂದ ಮತ್ತೊಬ್ಬ ವ್ಯಕ್ತಿ ಆತನತ್ತ ನಡೆದು ಬರುತ್ತಿರುವುದು ಕಾಣಿಸುತ್ತದೆ.

ಮೂರನೇ ದೃಶ್ಯ ಬೆಳಿಗ್ಗೆ 10:15ಕ್ಕೆ ರಕ್ತಸಿಕ್ತ ಬಟ್ಟೆಗಳಲ್ಲಿದ್ದ ದೀಪಕ್ ಮೆಟ್ಟಿಲುಗಳನ್ನು ಹತ್ತಿ ಟೆರೇಸ್‌ಗೆ ಹೋಗುತ್ತಾನೆ. ಜಿಗಿಯುವ ಮೊದಲು ಸುಮಾರು 15 ರಿಂದ 20 ನಿಮಿಷಗಳ ಕಾಲ ಆತ ಅಲ್ಲಿಯೇ ಕಾಲ ಕಳೆದಿದ್ದಾನೆ.

ನಾಲ್ಕನೇ ದೃಶ್ಯ ಘಟನೆ ನಡೆಯುವ ಕೆಲವೇ ಕ್ಷಣಗಳ ಮೊದಲು ದೀಪಕ್ ಗ್ಯಾಲರಿಯಿಂದ ತನ್ನ ಕೋಣೆಯ ಕಡೆಗೆ ನಡೆದುಕೊಂಡು ಹೋಗುವುದು ದಾಖಲಾಗಿದೆ.

ಬ್ರಹ್ಮಚರ್ಯದ ತಪ್ಪು ಅರ್ಥೈಸುವಿಕೆಯೇ?

ಪ್ರೇಮಾನಂದ ಮಹಾರಾಜ್ ಅವರು ತಮ್ಮ ಧರ್ಮೋಪದೇಶಗಳಲ್ಲಿ ಸಾತ್ವಿಕ ಜೀವನ ಮತ್ತು 'ಬ್ರಹ್ಮಚರ್ಯ'ದ ಮಹತ್ವವನ್ನು ಸಾರುತ್ತಾರೆ. ಈ ಹಿನ್ನೆಲೆಯಲ್ಲಿ, ದೀಪಕ್ ಬ್ರಹ್ಮಚರ್ಯ ಪಾಲನೆಯಲ್ಲಿ ತಾನು ವಿಫಲನಾದೆನೆಂಬ ಪಶ್ಚತಾಪದಿಂದ ಅಥವಾ ಬ್ರಹ್ಮಚರ್ಯ ತತ್ವವನ್ನು ತಪ್ಪಾಗಿ ಅರ್ಥೈಸಿಕೊಂಡು ಈ ರೀತಿ ಅತಿರೇಕದ ಕೃತ್ಯಕ್ಕೆ ಕೈಹಾಕಿದನೇ ಎಂಬ ಪ್ರಶ್ನೆಗಳು ಎದ್ದಿವೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೆಲ್ಲಿ ಆಶ್ರಮದ ಸನ್ಯಾಸಿಗಳು ಹಾಗೂ ಶಿಷ್ಯರು:

ಗುರುಗಳಿಗೂ ಈ ಘಟನೆಗೂ ಸಂಬಂಧವಿಲ್ಲ. ದೀಪಕ್ ವಾಸಿಸುತ್ತಿದ್ದ ಹಾಸ್ಟೆಲ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಕೆಲಸಗಾರರು ಹಾಗೂ ಸಾಧಕರು ವಾಸಿಸುತ್ತಿದ್ದರು. ಪ್ರೇಮಾನಂದ ಮಹಾರಾಜರು ಇಲ್ಲಿಂದ ಹಲವು ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹಾಗೂ ಮಹಾರಾಜರ ಹೆಸರಿಗೆ ಮಸಿಬಳಿಯಲು ಈ ದುರಂತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿಗೆ ಆಶ್ರಮಕ್ಕೆ ಬರಲು ₹5 ಕೋಟಿ ನೀಡಲಾಗಿದೆ ಎಂಬ ವದಂತಿ ಸೇರಿದಂತೆ ಆಶ್ರಮದ ಮೇಲಿನ ಎಲ್ಲಾ ಆರೋಪಗಳನ್ನು ಶಿಷ್ಯರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ನಿಗೂಢವಾಗಿ ಉಳಿದ ಕಾರಣ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೀಪಕ್ ಅವರ ರೂಮ್‌ಮೇಟ್ ಮತ್ತು ಇತರ ಹಾಸ್ಟೆಲ್ ನಿವಾಸಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ಜಿಗಿದು ಸತ್ತಿದ್ದನ್ನು ದೃಢಪಡಿಸಿದರೂ, ಖಾಸಗಿ ಅಂಗ ಕತ್ತರಿಸಿಕೊಳ್ಳುವ ಮಟ್ಟಕ್ಕೆ ಆತನನ್ನು ತಳ್ಳಿದ ಮಾನಸಿಕ ಒತ್ತಡ ಅಥವಾ ಆಂತರಿಕ ಘಟನೆ ಯಾವುದು ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಮಥುರಾ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಹುಲ್ ಗಾಂಧಿ ‘Sting’ ಕುಡಿದ್ರು…ಅಣ್ಣ ಕೊಟ್ಟ ಬಾಟಲಿ ನೋಡಿ ಪ್ರಿಯಾಂಕ ಹಿಂಗ್ಯಾಕ್ ಮಾಡಿದ್ರು!
ಆರ್‌ಬಿಐ ವಿತ್ತನೀತಿ ಪ್ರಕಟ: ರೆಪೊ ದರ ಶೇ. 5.50ಕ್ಕೆ ಏರಿಕೆ, ಇನ್ಮುಂದೆ ಇಎಂಐ ಹೊರೆ ಹೆಚ್ಚಳ!