ಲಸಿಕೆಗೆ ವಿಭಿನ್ನ ದರ ಏಕೆ? ಪ್ರಧಾನಿಗೆ ಸೋನಿಯಾ ಗಾಂಧಿ ಪತ್ರ

By Suvarna News  |  First Published Apr 22, 2021, 2:42 PM IST

ಪ್ರಧಾನಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ/ ದೇಶದಲ್ಲಿ ಕೋವಿಡ್ ಸೋಂಕು‌ಹೆಚ್ಚುತ್ತಲೇ ಇದೆ/ ಕಳೆದ ವರ್ಷದಿಂದ ಇಲ್ಲಿಯವರೆಗೂ ವಿಸ್ತರಿಸಿಕೊಂಡಿದೆ/ ಸೋಂಕು ನಿಯಂತ್ರಣಕ್ಕೆ ಇನ್ನೂ ಸಾಧ್ಯವಾಗ್ತಿಲ್ಲ/ ಈ ವಿಷಮ ಸ್ಥಿತಿಯಲ್ಲಿ ಯುವಜನತೆ ಪ್ರಾಣ ಮುಖ್ಯ/ 18 ವರ್ಷದಿಂದ 45 ವರ್ಷದವರಿಗೆ ಉಚಿತ ಲಸಿಕೆ ಒದಗಿಸಿ/ ಅವರ ಪ್ರಾಣ ಅತ್ಯಮೂಲ್ಯವಾದುದು/ ಎಲ್ಲ ಜನರಿಗೂ ಉಚಿತ ಲಸಿಕೆ ಸಿಗುವಂತೆ ಮಾಡಿ..


ನವದೆಹಲಿ(ಏ.  22) ಕೊರೋನಾ ಸೋಂಕು ಏರಿಕೆಯಾಗುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಪತ್ರ ಬರೆದಿದ್ದಾರೆ. ದೇಶದಲ್ಲಿ ಕೋವಿಡ್ ಸೋಂಕು ‌ಹೆಚ್ಚುತ್ತಲೇ ಇದೆ. ಕಳೆದ ವರ್ಷದಿಂದ ಇಲ್ಲಿಯವರೆಗೂ ವಿಸ್ತರಿಸಿಕೊಂಡಿದೆ ಸೋಂಕು ನಿಯಂತ್ರಣಕ್ಕೆ ಇನ್ನೂ ಸಾಧ್ಯವಾಗ್ತಿಲ್ಲ ಈ ವಿಷಮ ಸ್ಥಿತಿಯಲ್ಲಿ ಯುವಜನತೆ ಪ್ರಾಣ ಮುಖ್ಯ ಎಂದು ತಿಳಿಸಿದ್ದಾರೆ.

18 ವರ್ಷದಿಂದ 45 ವರ್ಷದವರಿಗೆ ಉಚಿತ ಲಸಿಕೆ ಒದಗಿಸಿ. ಅವರ ಪ್ರಾಣ ಅತ್ಯಮೂಲ್ಯವಾದುದು. ಎಲ್ಲ ಜನರಿಗೂ ಉಚಿತ ಲಸಿಕೆ ಸಿಗುವಂತೆ ಮಾಡಿ. ಸಿರಂ ಇನ್ಸಿಟಿಟ್ಯೂಟ್ ಲಸಿಕೆಯನ್ನ ರಿಲೀಸ್ ಮಾಡಿದೆ. ಆದರೆ ಒಂದೇ ಸಂಸ್ಥೆ ಮೂರು ವಿಭಿನ್ನ ದರ ಇಟ್ಟಿದೆ. ಕೇಂದ್ರ ಸರ್ಕಾರಕ್ಕೆ ಲಸಿಕೆಗೆ 150 ದರ ಫಿಕ್ಸ್ ಮಾಡಿದೆ. ರಾಜ್ಯ ಸರ್ಕಾರಗಳಿಗೆ 400 ರೂ.ದರ ನಿಗದಿಯಾಗಿದೆ. ಖಾಸಗಿಯವರಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಒಂದೇ ಸಂಸ್ಥೆ ಒಂದೇ ಲಸಿಕೆಗೆ ವಿಭಿನ್ನ ದರವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

undefined

ಕಾಳಸಂತೆಯಲ್ಲಿ ರೆಮಿಡಿಸಿವರ್ ಮಾರಾಟ; ಯಾರ ನಿಯಂತ್ರಣವೂ ಇಲ್ಲವೇ? 

ಈದರ ನೀಡಿ ಲಸಿಕೆ ಪಡೆಯೋದು ಎಲ್ಲರಿಂದ ಸಾಧ್ಯವಿಲ್ಲ. ಕೂಡಲೇ ಈ ತಾರತಮ್ಯ ಸರಿಪಡಿಸಿ. ಆಸ್ಪತ್ರೆಗಳು,ಹಾಸಿಗೆ ಸಮಸ್ಯೆ ಸರಿಪಡಿಸಿ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸೋನಿಯಾ ಆಗ್ರಹಪಡಿಸಿದ್ದಾರೆ.

ದೇಶದಲ್ಲಿ ಪ್ರತಿ ದಿನ ಎರಡು ಲಕ್ಷಕ್ಕೂ ಅಧಿಕ ಸೋಂಕಿನ ಪ್ರಕರಣ ದಾಖಲಾಗುತ್ತಿದೆ. 40-60  ವರ್ಷದ ವಯೋಮಾನದವರು ಹೆಚ್ಚಾಗಿ ಚೀನಿ ವೈರಸ್ ಗೆ ಬಲಿಯಾಗುತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಳ ಮಾಡಿದೆ. 

The nation's goal must be to ensure that everyone over 18 years is given the vaccine, regardless of their economic circumstances. I urge you to intervene immediately & reverse the new Covid19 vaccination policy.

- Congress President Smt. Sonia Gandhi writes to PM Modi pic.twitter.com/lXFmbfULdT

— Congress (@INCIndia)
click me!