ಪ್ರಯಾಗ್‌ರಾಜ್‌ ಕಲ್ಲು ತೂರಾಟ ಘಟನೆಯ ಆರೋಪಿಗಳ ಮನೆ ಹರಾಜಿಗೆ ನಿರ್ಧಾರ

Published : Jun 17, 2022, 01:05 PM IST
ಪ್ರಯಾಗ್‌ರಾಜ್‌ ಕಲ್ಲು ತೂರಾಟ ಘಟನೆಯ ಆರೋಪಿಗಳ ಮನೆ ಹರಾಜಿಗೆ ನಿರ್ಧಾರ

ಸಾರಾಂಶ

Prayagraj stone pelting case: ಪೊಲೀಸರ ಮೇಲೆ ಕಲ್ಲು ತೂರಾಟಿ ಮಾಡಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಪ್ರಯಾಗರಾಜ್‌ ಎಸ್‌ಎಸ್‌ಪಿ ಆದೇಶ ಹೊರಡಿಸಿದ್ದು, ಆರೋಪಿಗಳು ಶರಣಾಗದಿದ್ದರೆ ಅವರ ಮನೆಗಳನ್ನು ಹರಾಜಿಗೆ ಹಾಕುವುದಾಗಿ ತಿಳಿಸಿದ್ದಾರೆ. 

ಉತ್ತರ ಪ್ರದೇಶದ ಪ್ರಯಾಗ್ರಾಜ್‌ ನಗರದಲ್ಲಿ ಮೊನ್ನೆ ನಡೆದ ಕಲ್ಲು ತೂರಾಟ ಮತ್ತು ಸಾರ್ವಜನಿಕ ಆಸ್ತಿ ಹಾನಿ ಘಟನೆ ಸಂಭಂದಿಸಿದಂತೆ ಆರೋಪಿಗಳು ಶರಣಾಗದಿದ್ದರೆ ಅವರಿಗೆ ವಾರಂಟ್ ಗಳನ್ನು ಹೊರಡಿಸಲಾಗುವುದು ಮತ್ತು ಅವರ ಮನೆಗಳನ್ನು ಹರಾಜು ಹಾಕಲಾಗುವುದು ಎಂದು ಪ್ರಯಾಗ್ರಾಜ್‌ನ SSP ಅಜಯ್ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಜೂನ್‌ 10 ರಂದು ನಡೆದ ಘಟನೆಯಲ್ಲಿ 29 ಗಂಭೀರ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಈ ವರೆಗೂ 92 ಜನ ಆರೋಪಿಗಳನ್ನು ಬಂಧಿಸಲಾಗಿದೆ. CCTV ಯಲ್ಲಿ ಸೆರೆ ಸಿಕ್ಕ ಉಳಿದ 40 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜೂನ್‌ 10 ರಂದು ಪ್ರಯಾಗ್ರಾಜ್ ನಲ್ಲಿ ನಡೆದ ಘಟನೆಯಲ್ಲಿ 29 ಗಂಭೀರ ಸೆಕ್ಷನ್‌ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಮತ್ತು 92 ಜನರನ್ನು ಬಂಧಿಸಲಾಗದ್ದು FIR ಗಳಲ್ಲಿ ಸೇರಿಸಲಾಗಿದೆ ಮತ್ತು CCTV ದೃಶ್ಯಾವಳಿಗಳ ಪ್ರಕಾರ 40 ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳು ಶರಣಾಗದೆ ಇದ್ದ ಪಕ್ಷದಲ್ಲಿ ಕಾನೂನಿನ ಸಂಭಂದಿತ ಸೆಕ್ಷನ್‌ಗಳ ಅಡಿಯಲ್ಲಿ ಅವರ ಮನೆಗಳನ್ನು ಹರಾಜು ಮಾಡಲಾಗುವುದು ಎಂದು SSP ಅಜಯ್ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ಉ.ಪ್ರ. ಗಲಭೆ ರೂವಾರಿ ಮನೆಗೆ ನುಗ್ಗಿ ಬುಲ್ಡೋಜರ್‌ ಶಿಕ್ಷೆ!

ಆರೋಪಿಗಳು ಕಲ್ಲು ಎಸೆಯುತ್ತಿರುವ ದೃಶ್ಯ ಸಿಸಿಟಿವಿ ಫೂಟೇಜ್‌ನಲ್ಲಿ ಎದ್ದು ಕಾಣುತಿದ್ದು ಆರೋಪಿಗಳ ಪತ್ತೆ ಮಾಡಲಾಗಿದೆ. ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ನಮಗೆ ಜ್ಞಾಪಕ ಪತ್ರಗಳನ್ನು ನೀಡಬಹುದಿತ್ತು ಆದರೆ ಆರೋಪಿಗಳು ಸಂಘಟನೆಗಳ ಮೂಲಕ ಗುಂಪು ಕಟ್ಟಿಕೊಂಡು ಗಲಭೆ ಮಾಡಿದ ಹಿನ್ನೆಲೆ ಆರೋಪಿಗಳಿಂದ ಸಾರ್ವಜನಿಕ ಆಸ್ತಿಗೆ ಕೋಟಿ ರೂಪಾಯಿಗಿಂತಲು ಹೆಚ್ಚಿನ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಮೌಲ್ಯವನ್ನು ಆರೋಪಿಗಳಿಂದಲೇ ವಸೂಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಶುಕ್ರವಾರಕ್ಕೆ ರಾಜ್ಯದಲ್ಲಿ ಹಿರಿಯ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿದೆ ಮತ್ತು 10ಕ್ಕೂ ಹೆಚ್ಚು ಪೊಲೀಸ್‌ ಪಡೆಯನ್ನು ನೇಮಕಮಾಡಲಾಗಿದೆ. ಮದರಸಾ, ಮಸೀದಿಗಳ ಮುಖಂಡರ ಜತೆಯೂ ಸಭೆ ನಡೆಸಿದ್ದೇವೆ ಎಂದು SSP ಹೇಳಿದ್ದಾರೆ.

ಇದನ್ನೂ ಓದಿ: ಅಗ್ನಿಪಥ: ಪ್ರತಿಭಟನೆ, ಟೀಕೆಗೆ ಕೇಂದ್ರದ ಮೂಲಗಳ ಸ್ಪಷ್ಟನೆ: ಸೇನೆಯ ರೆಜಿಮೆಂಟ್‌ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ!

ಈ ಪ್ರಕರಣದ ಮುಖ್ಯ ಆರೋಪಿಯಾದ "ಮಾಸ್ಟರ್ ಮೈಂಡ್" ಜಾವೇದ್ ಅಹ್ಮದ್ ನನ್ನು ಬಂಧಿಸಿದ ಪೊಲೀಸರು ಬಂಧಿಸುವ ಸಮಯದಲ್ಲಿ ಅವರ ಮನೆಯಿಂದ ಒಂದು ಕಾಗದ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣದ ಇನ್ನಷ್ಟು ಮಜಲುಗಳ ಕುರಿತು ತನಿಖೆ ನಡೆಯುತ್ತಿದೆ. ಜಾವೇದ್‌ ಅಹ್ಮದ್‌ ಈ ಹಿಂದೆ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದನಾ ಮತ್ತು ಯಾವುದಾದರೂ ದೇಶದ್ರೋಹಿ ಸಂಘಟನೆಗಳ ಜೊತೆ ಅವನಿಗೆ ಸಂಪರ್ಕವಿದೆಯಾ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ. 

ಜಾವೇದ್‌ ಅಹ್ಮದ್‌ ಮನೆಯಲ್ಲಿ ಸಿಕ್ಕ ಕಾಗದದಲ್ಲಿ, ಅಟಾಲಾ ಪ್ರದೇಶವನ್ನು ಬೇಗ ಸೇರಿ, ಇನ್ನು ನಾವು ನ್ಯಾಯಾಲಯಗಳನ್ನು ನಂಬುವುದಿಲ್ಲ ಎಂದು ಬರೆದಿತ್ತು. ಇದರ ಬಗ್ಗೆ ಕೂಡ ಆರೋಪಿಯ ವಿಚಾರಣೆ ಮಾಡಲಾಗುತ್ತಿದೆ ಎಂದು ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Agnipath Live Updates: ಬಿಹಾರ ಉಪಮುಖ್ಯಮಂತ್ರಿ ಮನೆ ಮೇಲೆ ಪ್ರತಿಭಟನಾಕಾರರಿಂದ ದಾಳಿ

ಉತ್ತರ ಪ್ರದೇಶ ರಾಜ್ಯ ಯೋಜನೆ ಮತ್ತು ಅಭಿವೃದ್ಧಿ ನಿಯಮಗಳ ವಿರುದ್ಧವಾಗಿ ನಿರ್ಮಿಸಲಾದ ಮನೆಗಳನ್ನು ಉರುಳಿಸಳಾಗಿತ್ತು ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರ (Prayagraj Development Authority) ಪ್ರಕಾರ ಮನೆಗಳನ್ನು ಅಕ್ರಮವಾಗಿ ಕಟ್ಟಲಾಗಿದೆ, ಈ ಹಿನ್ನೆಲೆ ಬುಲ್ಡೋಜರ್‌ಗಳಿಂದ ಮನೆಗಳನ್ನು ಉರುಳಿಸಲಾಗಿತ್ತು. ಇದು ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಜಮಾತ್‌-ಎ-ಹಿಂದ್‌ ಸಂಘಟನೆ ಘಟನೆಯನ್ನು ಖಂಡಿಸಿತ್ತು ಮತ್ತು ಪೊಲೀಸರ ದಬ್ಬಾಳಿಕೆ, ಅಕ್ರಮವಾಗಿ ಮನೆ ಉರುಳಿಸಿರುವ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿತ್ತು.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!