
ಕುಂಭಮೇಳಕ್ಕೆಂದು ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ ವಿಶೇಷ ರೈಲಿನ ಮೇಲೆ ಪ್ರಯಾಣಿಕರು ರೈಲಿನ ಬಾಗಿಲನ್ನು ಕಲ್ಲಿನಿಂದ ಒಡೆದು ಹಾಕಿದ್ದಾರೆ. ರೈಲಿನ ಬಾಗಿಲು ತೆರೆಯದ್ದಕ್ಕೆ ಕೋಪಗೊಂಡ ಪ್ರಯಾಣಿಕರು ಕಲ್ಲು ತೂರಿ ಬಾಗಿಲಿನ ಗಾಜು ಒಡೆದಿದ್ದಾರೆ. ಹರ್ಪಾಲ್ಪುರ್ ಸ್ಟೇಷನ್‌ನಲ್ಲಿ ಈ ಘಟನೆ ನಡೆದಿದೆ. ರೈಲು ನಿಲ್ದಾಣಕ್ಕೆ ಬಂದಾಗ ಬಾಗಿಲು ತೆರೆಯಲಾಗಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರ ಗುಂಪೊಂದು ರೈಲಿನ ಮೇಲೆ ದಾಳಿ ನಡೆಸಿತು. ರೈಲಿನಲ್ಲಿ ಬೇರೆ ಪ್ರಯಾಣಿಕರಿದ್ದಾಗಲೇ ಈ ದಾಳಿ ನಡೆದಿದೆ.
ಝಾನ್ಸಿ ಸ್ಟೇಷನ್‌ನಿಂದ ಪ್ರಯಾಗ್‌ರಾಜ್‌ಗೆ ನಿನ್ನೆ ರಾತ್ರಿ 8 ಗಂಟೆಗೆ ರೈಲು ಹೊರಟಿತ್ತು. ಮಧ್ಯರಾತ್ರಿ 2 ಗಂಟೆಗೆ ಹರ್ಪಾಲ್ಪುರ್ ಸ್ಟೇಷನ್‌ಗೆ ರೈಲು ಬಂದಿತ್ತು. ಆದರೆ, ಒಂದು ಬೋಗಿಯ ಬಾಗಿಲು ತೆರೆಯಲಾಗಲಿಲ್ಲ. ಇದರಿಂದ ಕೋಪಗೊಂಡ ಕೆಲವು ಪ್ರಯಾಣಿಕರು ಬಾಗಿಲಿನ ಗಾಜಿಗೆ ಕಲ್ಲು ತೂರಿ ಒಡೆದರು. ರೈಲಿನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿ ಕಿರುಚಾಟ ನಡೆಸಿದರು. ರೈಲಿನ ಮೇಲಿನ ದಾಳಿಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಯಾಗ್‌ರಾಜ್‌ಗೆ ಹೋಗುವ ರೈಲಿಗಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುತ್ತಿದ್ದರು. ಕೊನೆಗೆ ರೈಲು ಬಂದಾಗ ಬಾಗಿಲು ತೆರೆಯಲಾಗಲಿಲ್ಲ. ಇದರಿಂದ ಕೋಪಗೊಂಡ ಪ್ರಯಾಣಿಕರು ರೈಲಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಹರ್ಪಾಲ್ಪುರ್ ಪೊಲೀಸ್ ಠಾಣಾ ಮುಖ್ಯಸ್ಥರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಮತ್ತು ಭಾರತೀಯ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ.
ಸ್ವಯಂ ಬಾಗಿಲು ಮುಚ್ಚಿಕೊಂಡ ರೈಲು: ಇನ್ನು ರೈಲಿನಲ್ಲಿ ಮಿತಿಗಿಂತ ಹೆಚ್ಚಾಗಿ ಪ್ರಯಾಣಿಕರು ತುಂಬಿಕೊಂಡಿದ್ದರಿಂದ ರೈಲಿನ ಬಾಗಿಲು ಸ್ವಯಂ ಆಗಿ ಮುಚ್ಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಲೇಬೇಕು ಎಂದು ಮಧ್ಯರಾತ್ರಿವರೆಗೂ ನಿದ್ದೆಗೆಟ್ಟು ಕಾಯುತ್ತಿದ್ದ ಪ್ರಯಾಣಿಕರ ಆಕ್ರೋಶದ ಕಟ್ಟೆ ಒಡೆದಿದೆ. ಹಣ ಕೊಟ್ಟು ಟಿಕೆಟ್ ಖರೀದಿಸಿ ಅರ್ಧ ದಿನ ಕಾಯುತ್ತಾ ಕುಳಿತರೂ ನಮಗೆ ಟ್ರೇನ್‌ನಲ್ಲಿ ಹೋಗಲು ಅವಕಾಶ ಸಿಗಲಿಲ್ಲವೆಂದು ಸ್ವಯಂ ಆಗಿ ಮುಚ್ಚಿಕೊಂಡ ರೈಲಿನ ಬಾಗಿಲನ್ನು ಕಲ್ಲಿನಿಂದ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ