
ಪ್ರಯಾಗರಾಜ್ ನಲ್ಲಿ ಮಹಾ ಕುಂಭ ಮೇಳ (Prayagraj Maha Kumbh Mela) ದ ಸಂಭ್ರಮ ಮನೆ ಮಾಡಿದೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ದೇಶ, ವಿದೇಶದಿಂದ ಕುಂಭಮೇಳ ವೀಕ್ಷಣೆ ಮಾಡಲು ಭಕ್ತರ ದಂಡೇ ಬರ್ತಿದೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು (celebrities) ಸಂಗಮದಲ್ಲಿ ಮಿಂದೆದ್ದಿದ್ದಾರೆ. ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (businessman Mukesh Ambani) ಸಹೋದರ ಹಾಗೂ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ (Industrialist Anil Ambani) ಸರದಿ. ಅನಿಲ್ ಅಂಬಾನಿ ತಮ್ಮ ಪತ್ನಿ ಟೀನಾ ಅಂಬಾನಿ ಜೊತೆ ಸೋಮವಾರ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಆಗಮಿಸಿದ್ದರು. ಅನಿಲ್ ಅಂಬಾನಿ ಸಂಗಮದಲ್ಲಿ ಧಾರ್ಮಿಕ ಸ್ನಾನ ಮಾಡಿದರು.
ಸೋಶಿಯಲ್ ಮೀಡಿಯಾದಲ್ಲಿ ಅನಿಲ್ ಅಂಬಾನಿ ಮಹಾ ಕುಂಭ ಮೇಳ ಭೇಟಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅನಿಲ್ ಅಂಬಾನಿ, ಗಂಗಾ, ಯಮುನಾ ಮತ್ತು ಸರಸ್ವತಿ ಸಂಗಮದಲ್ಲಿ ಪವಿತ್ರ ಸ್ನಾನಮಾಡಿ ಹೊರಗೆ ಬರ್ತಿರುವುದನ್ನು ವಿಡಿಯೋದಲ್ಲಿ ಕಾಣ್ಬಹುದು. ಅವರ ಪತ್ನಿ ಟೀನಾ ಅಂಬಾನಿ ಹಾಗೂ ಮಗ ಜೈ ಅಂಶುಲ್ ಅಂಬಾನಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಬಿಳಿ ಕುರ್ತಾ ಹಾಗೂ ಪೈಜಾಮವನ್ನು ಅನಿಲ್ ಅಂಬಾನಿ ಧರಿಸಿದ್ದರು. ಅವರಿಗೆ ರಕ್ಷಣೆ ನೀಡಲು ಪೊಲೀಸ್ ಪಡೆ ಅವರ ಹಿಂದಿತ್ತು. ಕೆಲ ಸೆಕ್ಯೂರಿಟಿ ಸಿಬ್ಬಂದಿ ಅನಿಲ್ ಅಂಬಾನಿ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅನಿಲ್ ಅಂಬಾನಿ ಹಾಗೂ ಟೀನಾ ಅಂಬಾನಿ, ಮಹಾ ಕುಂಭ ಮೇಳಕ್ಕೆ ಭೇಟಿ ನೀಡುವ ಮೊದಲು, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಬಿಹಾರದ ಮಹಾಬೋಧಿ ದೇವಾಲಯಕ್ಕೂ ಭೇಟಿ ನೀಡಿದ್ದರು.
ಅಂತರಿಕ್ಷದಿಂದ ಮಹಾಕುಂಭದ ಅದ್ಭುತ ನೋಟ
ಮಹಾಕುಂಭ ಮೇಳ ಜನವರಿ 13ರಿಂದ ಶುರುವಾಗಿದ್ದು, 14 ದಿನಗಳಲ್ಲಿ 11 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 26ರವರೆಗೆ ಈ ಮಹಾ ಕುಂಭ ಮೇಳ ನಡೆಯಲಿದೆ. ಕೋಟಿ ಲೆಕ್ಕದಲ್ಲಿ ಭಕ್ತರು ಬರ್ತಿದ್ದು, ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಸೋಮವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪುತ್ರ ಐಸಿಸಿ ಅಧ್ಯಕ್ಷ ಜಯ್ ಶಾ ಕೂಡ ಮಹಾ ಕುಂಭದಲ್ಲಿ ಸ್ನಾನ ಮಾಡಿದ್ದಾರೆ. ಅವರೊಂದಿಗೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜುನಾ ಅಖಾಡಾದ ಮಹಾಮಂಡಲೇಶ್ವರ ಪೀಠಾಧೀಶ್ವರ ಸ್ವಾಮಿ ಅವಧೇಶಾನಂದ ಗಿರಿ ಮತ್ತು ಯೋಗ ಗುರು ಬಾಬಾ ರಾಮದೇವ್ ಕೂಡ ಸಂಗಮದಲ್ಲಿ ಸ್ನಾನ ಮಾಡಿದರು. ಸಂಗಮದಲ್ಲಿ ಸುಮಾರು 10 ನಿಮಿಷಗಳ ಕಾಲ ಅಮಿತ್ ಶಾ ಸ್ನಾನ ಮಾಡಿದ್ದಾರೆ. ಮಂತ್ರ ಪಠಣದ ನಡುವೆ ಅಮಿತ್ ಶಾ ಅವರಿಗೆ ಸಂತರು ಆಚಮನ ನೀಡಿದರು. ಸೋಶಿಯಲ್ ಮೀಡಿಯಾ X ನಲ್ಲಿ ಅಮಿತ್ ಶಾ ಇದನ್ನು ಹಂಚಿಕೊಂಡಿದ್ದಾರೆ. ಮಹಾಕುಂಭವು ಸನಾತನ ಸಂಸ್ಕೃತಿಯ ನಿರಂತರ ಹರಿವಿನ ವಿಶಿಷ್ಟ ಸಂಕೇತವಾಗಿದೆ. ಕುಂಭಮೇಳವು ಸಾಮರಸ್ಯದಲ್ಲಿ ಬೇರೂರಿರುವ ಸನಾತನ ಧರ್ಮದ ಜೀವನ ತತ್ವಶಾಸ್ತ್ರವನ್ನು ಪ್ರದರ್ಶಿಸುತ್ತದೆ. ಎಲ್ಲರ ಕಲ್ಯಾಣಕ್ಕಾಗಿ ನಾನು ಗಂಗಾ, ಯಮುನಾ ಮತ್ತು ಸರಸ್ವತಿ ಮಾತೆಯನ್ನು ಪ್ರಾರ್ಥಿಸುತ್ತೇನೆ ಎಂದು ಅಮಿತ್ ಶಾ ಪೋಸ್ಟ್ ಹಾಕಿದ್ದಾರೆ.
ಓ ದೇವ್ರೇ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ; ಕುಂಭಮೇಳದಲ್ಲಿ ವೃದ್ಧ ಪೋಷಕರನ್ನು ಬಿಟ್ಟು ಹೋದ ಪಾಪಿ ಮಕ್ಕಳು
ದೇಶದ ಪ್ರಸಿದ್ಧ ಬಾಕ್ಸರ್, ಒಲಿಂಪಿಕ್ ಪದಕ ವಿಜೇತೆ ಮತ್ತು ರಾಜ್ಯಸಭಾ ಸಂಸದೆ ಮೇರಿ ಕೋಮ್ ಕೂಡ ಸಂಗಮ್ ನಗರವನ್ನು ತಲುಪಿ ಪವಿತ್ರ ತ್ರಿವೇಣಿಯಲ್ಲಿ ಸ್ನಾನ ಮಾಡಿದರು. ಸಂಗಮ್‌ನ ಅಲೆಗಳ ನಡುವೆ ಮೇರಿ ಕೋಮ್ ಬಾಕ್ಸಿಂಗ್ ಪಂಚ್‌ಗಳನ್ನು ತೋರಿಸುತ್ತಿರುವುದು ಕಂಡುಬಂದಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ