ಚುನಾವಣೆ ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ಗೆ ಪ್ರಣಬ್ ಮುಖರ್ಜಿ ಪುತ್ರಿ ಶಾಕ್, ಬಿಜೆಪಿ ಆರೋಪಕ್ಕೆ ಸಿಕ್ಕಿತು ಸಾಕ್ಷ್ಯ!

By Suvarna NewsFirst Published Dec 6, 2023, 8:59 PM IST
Highlights

ದಿ.ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಬಯಸಿದ್ದರು. 2004ರಲ್ಲಿ ಪ್ರಣಬ್ ಪ್ರಧಾನಿಯಾಗುವುದು ಬಹುತೇಕ ಖಚಿತವಾಗಿತ್ತು. ಆದರೆ ಸೋನಿಯಾ ಗಾಂಧಿಗೆ ತನ್ನ ಅಧಿಕಾರ ಚಲಾಯಿಸಲು ಪ್ರಣಬ್ ಅಡ್ಡಿಯಾಗಲಿದ್ದಾರೆ ಅನ್ನೋ ಕಾರಣಕ್ಕೆ ಅವಕಾಶ ತಪ್ಪಿಸಲಾಗಿತ್ತು. ಇದು ಪ್ರಣಬ್ ಮುಖರ್ಜಿ ಪುತ್ರಿ ಹೇಳಿದ ಸ್ಫೋಟಕ ಮಾಹಿತಿ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
 

ನವದೆಹಲಿ(ಡಿ.06) ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ದಿವಂಗತ ನಾಯಕ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಪ್ರಣಬ್ ಮೈ ಫಾದರ್, ಎ ಡಾಟರ್ ರಿಮೆಂಬರ್ಸ್ ಅನ್ನೋ ಆತ್ಮಚರಿತ್ರೆ ಬಿಡುಗಡೆಗೆ ಸಜ್ಜಾಗಿದೆ. ಇದಕ್ಕೂ ಮೊದಲು ಶರ್ಮಿಷ್ಠಾ ನೀಡಿರುವ ಸಂದರ್ಶನ ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ. ಪ್ರಣಬ್ ಮುಖರ್ಜಿ ಮಾತುಗಳು, ಡೈರಿಯಲ್ಲಿ ಬರೆದಿರುವ ಮಾಹಿತಿ ಸೇರಿದಂತೆ ಹಲವು ವಿಚಾರಗಳನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲಾ ವಿಚಾರಗಳು ಕಾಂಗ್ರೆಸ್‌ಗೆ ಹಿನ್ನಡೆ ತಂದಿದೆ. ಇದೀಗ ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಬಯಸಿದ್ದರು ಅನ್ನೋ ಮಾಹಿತಿಯನ್ನು ಶರ್ಮಿಷ್ಠಾ ಬಹಿರಂಗಪಡಿಸಿದ್ದಾರೆ. ಆದರೆ ಪ್ರಣಬ್ ಪ್ರಧಾನಿಯಾದರೆ, ತನಗೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ಸೋನಿಯಾ ಗಾಂಧಿ ಪ್ರಣಬ್‌ ಮುಖರ್ಜಿಗೆ ಪ್ರಧಾನಿ ಅವಕಾಶ ನೀಡಲಿಲ್ಲ ಎಂದಿದ್ದಾರೆ.

2004ರಲ್ಲಿ ಯುಪಿಎ ಲೋಕಸಭೆಯಲ್ಲಿ ಗೆಲುವಿನ ಸಿಹಿ ಕಂಡಿತ್ತು. ಕಾಂಗ್ರೆಸ್ ನಾಯಕರ ಪೈಕಿ ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಎಲ್ಲಾ ಅರ್ಹತೆಗಳಿತ್ತು. ಇದು ಕಾಂಗ್ರೆಸ್‌ನ ಬಹುತೇಕ ನಾಯಕರ ಆಯ್ಕೆ ಕೂಡ ಆಗಿತ್ತು. ಆದರೆ ಗಾಂಧಿ ಕುಟುಂಬಕ್ಕೆ ಪ್ರಣಬ್ ಮುಖರ್ಜಿ ಪ್ರಧಾನಿಯಾಗುವುದು ಸುತಾರಂ ಇಷ್ಟವಿರಲಿಲ್ಲ ಅನ್ನೋ ಸ್ಫೋಟಕ ಮಾಹಿತಿಯನ್ನು ಪ್ರಣಬ್ ಮುಖರ್ಜಿ ಪುತ್ರಿ ಬಹಿರಂಗಪಡಿಸಿದ್ದಾರೆ. ಈ ಮೂಲಕ ಬಿಜೆಪಿ ಮಾಡಿದ್ದ ಪ್ರಮುಖ ಆರೋಪಗಳಲ್ಲಿ, ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು, ಆದರೆ ಎಲ್ಲಾ ಅಧಿಕಾರ ಸೋನಿಯಾ ಗಾಂಧಿ ಕೈಯಲ್ಲಿತ್ತು ಅನ್ನೋ ಆರೋಪಕ್ಕೆ ಇದೀಗ ಪ್ರಬಲ ಸಾಕ್ಷ್ಯ ಲಭ್ಯವಾಗಿದೆ.

Latest Videos

ನರೇಂದ್ರ ಮೋದಿ ಜನರ ನಾಡಿ ಮಿಡಿತ ಅರಿತ ಪ್ರಧಾನಿ, ದಿ.ಪ್ರಣಬ್ ಮುಖರ್ಜಿ ಅಭಿಪ್ರಾಯ ಹಂಚಿಕೊಂಡ ಪುತ್ರಿ!

ಪ್ರಣಬ್ ಮುಖರ್ಜಿ ಪ್ರಧಾನಿಯಾಗಲು ಬಯಸಿದ್ದರು.ಆದರೆ ತಾನು ಪ್ರಧಾನಿಯಾಗಲು ಸಾಧ್ಯವಿಲ್ಲ ಅನ್ನೋದನ್ನು ತಿಳಿದಿದ್ದರು. ಹೀಗಾಗಿ ಪ್ರಣಭ್‌ಗೆ ಯಾವುದೇ ಭ್ರಮನಿರಸನವಾಗಿಲ್ಲ. ಪ್ರಣಬ್ ಮುಖರ್ಜಿ ವ್ಯಕ್ತಿತ್ವ, ರಾಜಕೀಯ ಜೀವನ ಎಲ್ಲರಿಗೂ ತಿಳಿದಿದೆ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿತ್ವ. ಪ್ರಣಬ್ ಪ್ರಧಾನಿಯಾದರೆ ಗಾಂಧಿ ಕುಟುಂಬದ ಕೈಯಲ್ಲಿರುವ ಅಧಿಕಾರಿ ಸಂಪೂರ್ಣ ಕೈತಪ್ಪಲಿದೆ. ತನಗೆ ಯಾವುದೇ ಅಧಿಕಾರ ಚಲಾವಣೆ ಸಾಧ್ಯವಿಲ್ಲ ಎಂದು ಸೋನಿಯಾ  ಗಾಂಧಿ ಪ್ರಣಬ್ ಪ್ರಧಾನಿಯಾಗುವುದನ್ನು ವಿರೋಧಿಸಿದರು ಎಂದು ಪುತ್ರಿ ಹೇಳಿದ್ದಾರೆ.

 

| Gurugram: On being asked if his father wanted to be the Prime Minister, Author and Daughter of former President Pranab Mukherjee, Sharmistha Mukherjee says, "Yes, he wanted to become the PM, but he knew that he couldn't become one, so he was not in some disillusionment… pic.twitter.com/5PSu0e4UTp

— ANI (@ANI)

 

ಸೋನಿಯಾ ಹಾಗೂ ಗಾಂಧಿ ಕುಟುಂಬದ ಮಾತು ಕೇಳುವ ಹಾಗೂ ಸೋನಿಯಾ ಅಧಿಕಾರ ಚಲಾವಣೆಯಲ್ಲಿ ಯಾವುದೇ ರೀತಿ ಅಡ್ಡಬರದ ವ್ಯಕ್ತಿಯನ್ನು ಸೋನಿಯಾ ಗಾಂಧಿ ಪ್ರಧಾನಿ ಮಾಡಿದರು ಎಂದು ಪುತ್ರಿ ಹೇಳಿದ್ದಾರೆ. ಇದೇ ವೇಳೆ ತಾನು ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಸಾಮರ್ಥ್ಯ, ಅವರನ್ನ ಪ್ರಧಾನಿ ಮಾಡಿರುವುದಕ್ಕೆ ನನ್ನ ಯಾವುದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ತಂದೆಯನ್ನು ಪ್ರಧಾನಿ ಮಾಡದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ 2021ರಲ್ಲಿ ಕಾಂಗ್ರೆಸ್ ವಕ್ತಾರೆಯಾಗಿದ್ದ ಶರ್ಮಿಷ್ಠಾ ಮುಖರ್ಜಿ ಕಾಂಗ್ರೆಸ್ ತೊರೆದಿದ್ದಾರೆ ಎಂದಿದ್ದಾರೆ. 
 

click me!