PM ಆವಾಸ್ ಯೋಜನೆ: 6 ಲಕ್ಷ ಮಂದಿಗೆ 2691 ಕೋಟಿ ಬಿಡುಗಡೆ ಮಾಡಲಿದ್ದಾರೆ ಮೋದಿ!

By Suvarna NewsFirst Published Jan 19, 2021, 8:37 PM IST
Highlights

2022ರ ವೇಳೆಗೆ ಎಲ್ಲರಿಗೂ ಸೂರು ಪರಿಕಲ್ಪನೆ ಅಡಿಯಲ್ಲಿ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಜನವರಿ 20 ರಂದು ಮೋದಿ 6 ಲಕ್ಷ ಮಂದಿಗೆ ಫಲಾನುಭವಿಗಳಿಗೆ 2691 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ. ಈ ಕುರಿತ ಹೆಚ್ಚಿನ ವರದಿ ಇಲ್ಲಿದೆ.

ನವದೆಹಲಿ(ಜ.19):  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉತ್ತರ ಪ್ರದೇಶದ 6 ಲಕ್ಷ ಫಲಾನುಭವಿಗಳಿಗೆ ಇದೇ ಜನವರಿ 20 ರಂದು ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ನೆರವು ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಧಾನಿ ಮೋದಿ, ವರ್ಚುವಲ್ ಕಾರ್ಯಕ್ರಮದ ಮೂಲಕ ಹಣ ಬಿಡುಗಡೆ ಮಾಡಲಿದ್ದಾರೆ.

ಆವಾಸ್ ಯೋಜನೆಯಡಿ ಚಂದದ ಮನೆ ನಿರ್ಮಿಸಿದ ಚಳ್ಳಕೆರೆಯ ಮಹಿಳೆಗೆ ಮೋದಿಯಿಂದ ಸನ್ಮಾನ

6.1 ಲಕ್ಷ ಫಲಾನುಭವಿಗಳಿಗೆ 2691 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದ್ದಾರೆ. ವರ್ಚುವಲ್ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಪಾಲ್ಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ 5.30 ಲಕ್ಷ ಫಲಾನುಭವಿಗಳು ಹಾಗೂ ಎರಡನೇ ಹಂತದಲ್ಲಿ 80,000 ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ.

2022ರ ವೇಳೆ ಎಲ್ಲರಿಗೂ ಮನೆ ಎಂಬ ಪರಿಕಲ್ಪನೆಯಡಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಕಾರ್ಯಕ್ರಮವನ್ನು 2016ರಲ್ಲಿ ಜಾರಿಗೆ ತರಲಾಗಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ 1.26 ಕೋಟಿ ಮನೆ ನಿರ್ಮಿಸಲಾಗಿದೆ. ಸಮತಟ್ಟು ಪ್ರದೇಶದಲ್ಲಿನ ಮನೆ ನಿರ್ಮಾಣಕ್ಕೆ 1.30 ಲಕ್ಷ ರೂಪಾಯಿ, ಪರ್ವತ ಹಾಗೂ ಎತ್ತರ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.30 ಲಕ್ಷ ರೂಪಾಯಿ ನೀಡಲಾಗುತ್ತಿದೆ
 

click me!