
ನವದೆಹಲಿ(ಜ.19): ಕೇರಳದ ಜಾಕೋಬೈಟ್ ಸಿರಿಯನ್ ಚರ್ಚ್ ವಿವಾದ ಅಂತ್ಯಗೊಳಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕಿಳಿದಿದ್ದಾರೆ. ಕಳೆದ ವಾರ ಕ್ರಿಶ್ಚಿಯನ್ ಚರ್ಚ್‌ನ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದ ಮೋದಿ, ಇದೀಗ ಸಿರಿಯೊ ಮಲಬಾರ್ ಚರ್ಚ್‌ನ ಬಿಷಪ್, ಬಾಂಬೆ ಚರ್ಚ್ ಬಿಷಪ್ ಹಾಗೂ ಸಿರಿಯೊ ಮಲಂಕರ ಕ್ಯಾಥೋಲಿಕ್ ಚರ್ಚ್ ಬಿಷಪ್ ಜೊತೆ ಮೋದಿ ಸಭೆ ನಡೆಸಿದ್ದಾರೆ.
ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್
ಅತ್ಯಂತ ಹಳೆಯ ಚರ್ಚ್ ಸಿರಿಯನ್ ಚರ್ಚ್ ಹಾಗೂ ಸಮುದಾಯದ ನಡುವಿನ ವಿವಾದಕ್ಕೆ ತಾರ್ಕಿಕ ಅಂತ್ಯಕಾಣಿಸಲ ಪ್ರಯತ್ನಗಳು ನಡೆಯುತ್ತಿದೆ. ಒಂದು ಸಾವಿರ ಚರ್ಚ್ ಹಾಗೂ ಅದರ ಆಸ್ತಿ ಮಾಲೀಕತ್ವ ವಿವಾದ ಮತ್ತೆ ಭುಗಿಲೆದ್ದಿದೆ. 2017ರಲ್ಲಿ ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ನೀಡಿದೆ. ಆದರೆ ವಿವಾದ ಮಾತ್ರ ಬಗೆಹರಿದಿಲ್ಲ.
ಹೀಗಾಗಿ ಸಿರಿಯೊ ಮಲಬಾರ್ ಚರ್ಚ್‌ನ ಬಿಷಪ್ ಜಾರ್ಜ್ ಕಾರ್ಡಿನಲ್ ಅಲಂಚೇರಿ, ಬಾಂಬೆ ಚರ್ಚ್ ಬಿಷಪ್ ಹಾಗೂ ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಒಸ್ವಾವಾಲ್ಡ್ ಗ್ರಾಸಿಯಾಸ್ ಹಾಗೂ ಮಲಂಕರ ಕ್ಯಾಥೋಲಿಕ್ ಚರ್ಚ್ ಬಿಷಪ್ ಕ್ಲೀಮಿಸ್ ಜೊತೆ ಮೋದಿ ಸಭೆ ನಡೆಸಿದ್ದಾರೆ. ಈ ಕುರಿತು ಟ್ವಿಟರ್ ಮೂಲಕ ಮೋದಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಳೆ ವಿವಾದ ಬಗೆ ಹರಿಸಲು ಪ್ರಧಾನಿ ಮೋದಿ ಶ್ರಮವಹಿಸುತ್ತಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಕುರಿತು ಮೋದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ