ಉಚಿತ ವಿದ್ಯುತ್‌ನಿಂದ ಸಾಲದಲ್ಲಿ ಸಿಲುಕುತ್ತೀರಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

By Kannadaprabha NewsFirst Published Apr 8, 2024, 5:23 AM IST
Highlights

ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌, ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್‌ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. 
 

ನವದೆಹಲಿ (ಏ.08): ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್‌.ಕೆ.ಸಿಂಗ್‌, ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್‌ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ಸರಿ. 

ಆದರೆ, ಸಾಲ ಮಾಡಿ ವಿದ್ಯುತ್‌ ನೀಡಿದರೆ ಅದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ. ಏಕೆಂದರೆ ವಿದ್ಯುತ್‌ ತಯಾರಿಸಲು ಖರ್ಚು ತಗಲುತ್ತದೆ’ ಎಂದು ಹೇಳಿದ್ದಾರೆ. ಅವರು ಪಂಜಾಬ್‌ ಹೆಸರು ಪ್ರಸ್ತಾಪಿಸಿ ಈ ಎಚ್ಚರಿಕೆ ನೀಡಿದ್ದರೂ, ಕರ್ನಾಟಕ ಕೂಡ ಜನರಿಗೆ ಉಚಿತ ವಿದ್ಯುತ್‌ ನೀಡುತ್ತಿರುವುದರಿಂದ ಕರ್ನಾಟಕಕ್ಕೂ ಅವರು ಪರೋಕ್ಷ ಎಚ್ಚರಿಕೆ ನೀಡಿದಂತಾಗಿದೆ. ‘ಬೇರೆಲ್ಲಾ ಉತ್ಪನ್ನಗಳಂತೆ ವಿದ್ಯುತ್‌ ತಯಾರಿಸಲು ಕೂಡ ಹಣ ಬೇಕು. ಜನರಿಗೆ ಅದನ್ನು ಯಾವುದೇ ರಾಜ್ಯ ಸರ್ಕಾರ ಉಚಿತವಾಗಿ ನೀಡುತ್ತದೆಯಾದರೆ ಅಷ್ಟು ಹಣ ರಾಜ್ಯ ಸರ್ಕಾರದ ಬಳಿಯೇ ಇರಬೇಕು. 

ಪ್ರಚಾರಕ್ಕೆ ನನ್ನನ್ನೂ ಯಾರೂ ಕರೆದಿಲ್ಲ: ಸಿಎಂ, ಡಿಸಿಎಂ ವಿರುದ್ಧ ಮುನಿಯಪ್ಪ ಮುನಿಸು

ಅದಿಲ್ಲದೆ ಸಾಲ ಮಾಡಿ ಹಣ ತಂದು ಜನರಿಗೆ ಉಚಿತ ವಿದ್ಯುತ್‌ ನೀಡಿದರೆ ಖಂಡಿತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ. ವಿದ್ಯುತ್‌ ಉಚಿತವಲ್ಲ ಎಂದು ನಾನು ರಾಜ್ಯಗಳಿಗೆ ಹೇಳುತ್ತಲೇ ಬಂದಿದ್ದೇನೆ. ಆದರೂ ಅವು ವಿದ್ಯುತ್ತನ್ನು ಉಚಿತವಾಗಿ ನೀಡುತ್ತವೆಯಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. ಈಗಾಗಲೇ ಸಾಲದಲ್ಲಿರುವ ರಾಜ್ಯಗಳು ಉಚಿತ ವಿದ್ಯುತ್‌ನಂತಹ ಜನಪ್ರಿಯ ಯೋಜನೆಗಳಿಗಾಗಿ ಇನ್ನಷ್ಟು ಸಾಲ ಮಾಡುತ್ತಿವೆ. ಹೀಗೆ ಸಾಲದ ಸುಳಿಗೆ ರಾಜ್ಯವನ್ನು ಸಿಲುಕಿಸಬಾರದು. ಉಚಿತಗಳಿಂದಾಗಿಯೇ ಅನೇಕ ರಾಜ್ಯ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

click me!