ಕರ್ನಾಟಕದ ಪ್ರಾಂಜಲ್‌ಗೆ ಮರಣೋತ್ತರ ಶೌರ್ಯ ಪ್ರಶಸ್ತಿ: ಒಟ್ಟು 80 ಮಂದಿಗೆ ಶೌರ್ಯ ಪದಕ

By Kannadaprabha News  |  First Published Jan 26, 2024, 7:39 AM IST

ಜೀವದ ಹಂಗು ತೊರೆದು ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಪ್ರಾಂಜಲ್ ಸೇರಿದಂತೆ 80 ಮಂದಿ ಯೋಧರಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 


ನವದೆಹಲಿ: ಜೀವದ ಹಂಗು ತೊರೆದು ದೇಶ ಸೇವೆ ಸಲ್ಲಿಸಿದ ಕರ್ನಾಟಕದ ಯೋಧ ಪ್ರಾಂಜಲ್ ಸೇರಿದಂತೆ 80 ಮಂದಿ ಯೋಧರಿಗೆ 75ನೇ ಗಣರಾಜ್ಯೋತ್ಸವದ ಅಂಗವಾಗಿ ಶೌರ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 

6 ಮಂದಿಗೆ ಕೀರ್ತಿ ಚಕ್ರ (3 ಮರಣೋತ್ತರ), 16 ಮಂದಿಗೆ ಶೌರ್ಯಚಕ್ರ (2 ಮರಣೋತ್ತರ), 53 ಮಂದಿಗೆ ಸೇನಾ ಪದಕ (7 ಮರಣೋತ್ತರ), ಒಬ್ಬರಿಗೆ ನೌಕಾಸೇನಾ ಪದಕ ಮತ್ತು 4 ಮಂದಿಗೆ ವಾಯುಸೇನಾ ಪದಕಗಳನ್ನು ಪ್ರಕಟಿಸಲಾಗಿದೆ. ಇದಲ್ಲದೇ 31 ಪರಮ ವಿಶಿಷ್ಟ ಸೇವಾ ಪದಕ, 4 ಉತ್ತಮ ಸೇವಾ ಪದಕ, 2 ಬಾರ್ ಟು ಅತಿ ವಿಶಿಷ್ಟ ಸೇವಾ ಪದಕ, 59 ಅತಿ ವಿಶಿಷ್ಟ ಸೇವಾ ಪದಕ, 10 ಯುದ್ಧ ಸೇವಾ ಪದಕ, ಕರ್ತವ್ಯ ಶ್ರದ್ದೆ ವಿಭಾಗದಲ್ಲಿ 8 ಬಾರ್ ಟು ಸೇನಾ ಪದಕ, 38 ಸೇನಾ ಪದಕ, 10 ಯುದ್ಧ ಸೇವಾ ಪದಕ, 59 ಅತೀ ವಿಶಿಷ್ಟ ಪದಕ, ಕರ್ತವ್ಯ ಶ್ರದ್ಧೆ ವಿಭಾಗದಲ್ಲಿ 8 ಬಾರ್‌ ಟು ಸೇನಾ ಪದಕ, 38 ಸೇನಾ ಪದಕ, 10 ನೌಕಾ ಸೇನಾ ಪದಕ, 5 ಬಾರ್ 2 ಸೇವಾ ಪದಕ ಮತ್ತು 130 ವಿಶಿಷ್ಟ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.

Tap to resize

Latest Videos

ಪ್ರಾಂಜಲ್ ವೀರಮರಣ
ರಾಷ್ಟ್ರೀಯ ರೈಫಲ್ಸ್‌ನ 63ನೇ ಬೆಟಾಲಿಯನ್‌ನಲ್ಲಿ ಯೋಧರಾಗಿದ್ದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬೆಂಗಳೂರಿನವರಾಗಿದ್ದಾರೆ. ಕಳೆದ ವರ್ಷ ನ.22ರಂದು ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. 

1132 ಮಂದಿಗೆ ಪೊಲೀಸ್ ಪದಕ
ಒಟ್ಟಾರೆ 1132 ಮಂದಿಗೆ ಪೊಲೀಸ್ ಪದಕ ಪ್ರಕಟಿಸಲಾಗಿದೆ. ಇದರಲ್ಲಿ 277 ಶೌರ್ಯ ಪದಕಗಳು ಸೇರಿವೆ. 72 ಮಂದಿ ಕಾಶ್ಮೀರ , 65 ಸಿಆರ್‌ಪಿಎಫ್ ,18 ಮಹಾರಾಷ್ಟ್ರ ,21 ಎಸ್‌ಎಸ್‌ಬಿ ಪೊಲೀಸರು ಶೌರ್ಯ ಪದಕ ಪಡೆದುಕೊಂಡಿದ್ದಾರೆ.

ರಾಷ್ಟ್ರಪತಿ ಗಣರಾಜ್ಯೋತ್ಸವದ ಭಾಷಣ; ಇಸ್ರೋ ಯೋಜನೆ, ರಾಮ ಮಂದಿರ ಕಾರ್ಯ ಶ್ಲಾಘಿಸಿದ ದ್ರೌಪದಿ ಮುರ್ಮು!

click me!