
ನವದೆಹಲಿ: ಆ.25ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಅಂಚೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಭಾರತೀಯ ಅಂಚೆ ಇಲಾಖೆ ಹೇಳಿದೆ. ಅಮೆರಿಕ ಸರ್ಕಾರದ ತೆರಿಗೆ ನೀತಿಯ ಕುರಿತ ಗೊಂದಲಗಳು ಇರುವ ಹಿನ್ನೆಲೆಯಲ್ಲಿ ಭಾರತದಿಂದ ಅಮೆರಿಕಕ್ಕೆ ಸಂಚರಿಸುವ ವಿಮಾನಗಳು ಅಂಚೆ ಸರಕು ಸ್ವೀಕಾರಕ್ಕೆ ನಿರಾಕರಿಸಿರುವ ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅಂಚೆ ಇಲಾಖೆ ಹೇಳಿದೆ.
ಇದುವರೆಗೂ 800 ಡಾಲರ್ (70,000 ರು.) ವರೆಗಿನ ಮೌಲ್ಯದ ವಸ್ತುಗಳಿಗೆ ನೀಡುತ್ತಿದ್ದ ತೆರಿಗೆ ವಿನಾಯಿತಿ ನೀತಿಯನ್ನು ಟ್ರಂಪ್ ರದ್ದು ಮಾಡಿದ್ದು, ಆ ಆದೇಶ ಆ.29ರಂದು ಜಾರಿಗೆ ಬರಲಿದೆ. ಹೀಗಾಗಿ ವಿಮಾನಯಾನ ಸಂಸ್ಥೆಗಳು ಭಾರತದಿಂದ ಅಂಚೆ ಸರಕು ಸ್ವೀಕರಿಸಲು ನಿರಾಕರಿಸುತ್ತಿವೆ.
ಆದರೆ ಪತ್ರಗಳು ಮತ್ತು 100 ಡಾಲರ್ (8,730 ರು.) ಮೌಲ್ಯದವರೆಗಿನ ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಹೀಗಾಗಿ ಅವುಗಳ ಸೇವೆ ಎಂದಿನಂತೆ ಮುಂದುವರೆಯಲಿವೆ. ಉಳಿದಂತೆ ಅಮೆರಿಕಕ್ಕೆ ಕಳಿಸುವ ಎಲ್ಲಾ ವಸ್ತುಗಳ ಬುಕಿಂಗ್ ಆ.25ರಿಂದ ಸ್ಥಗಿತಗೊಳ್ಳಲಿದೆ. ಹೊಸ ನಿಯಮದಡಿ ರವಾನೆಗೆ ಅರ್ಹವಲ್ಲದ ವಸ್ತುಗಳನ್ನು ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಅಂಚೆ ವೆಚ್ಚದ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು ಎಂದು ಅಂಚೆ ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ