ರಕ್ಷಾ ಬಂಧನಕ್ಕೆ ಪೋಸ್ಟ್ ಆಫೀಸ್ ಸ್ಪೇಷಲ್ ಆಫರ್ ! 10 ರೂ.ಗೆ ಸಿಗ್ತಿದೆ ಕವರ್, ಸ್ವೀಟ್ ಗೆ ವಿಶೇಷ ಕವರ್

Published : Aug 10, 2026, 02:42 PM IST
Raksha Bandhan

ಸಾರಾಂಶ

ಪೋಸ್ಟ್ ಮೂಲಕ ನೀವು ರಾಖಿ ಕಳುಹಿಸುವ ಪ್ಲಾನ್ ನಲ್ಲಿದ್ರೆ ನಿಮಗೊಂದು ಖುಷಿ ಸುದ್ದಿ ಇದೆ. ನೀವು ಕಡಿಮೆ ಬೆಲೆಗೆ, ಸತ್ಯಂತ ಸುರಕ್ಷಿತವಾಗಿ ನಿಮ್ಮ ರಾಖಿಯನ್ನು ಸಹೋದರರಿಗೆ ಕಳುಹಿಸ್ಬಹುದು.

ಅಣ್ಣ ತಂಗಿಯರ ಬಾಂಧವ್ಯದ ಸಂಕೇತವಾಗಿ ಆಚರಿಸುವ ರಕ್ಷಾಬಂಧನಕ್ಕೆ ದಿನಗಣನೆ ಶುರುವಾಗಿದೆ. ಸಹೋದರ- ಸಹೋದರಿ ಹಬ್ಬದ ಸಂದರ್ಭದಲ್ಲಿ ಒಂದೇ ಕಡೆ ಸೇರಿ ಹಬ್ಬ ಆಚರಿಸಲು ಸಾಧ್ಯವಿಲ್ಲ. ಅದೆಷ್ಟೋ ಸಹೋದರಿಯರು ತಮ್ಮ ರಕ್ಷಾಬಂಧನವನ್ನು ಪೋಸ್ಟ್, ಕೊರಿಯರ್ ಮೂಲಕ ಅಣ್ಣ – ತಮ್ಮನಿಗೆ ಕಳಿಸ್ತಾರೆ. ನೀವೂ ಹೀಗೆ ಮಾಡ್ತಿದ್ದಲ್ಲಿ ಪೋಸ್ಟ್ ಆಫೀಸ್ ನಿಮಗೊಂದು ಆಫರ್ ನೀಡ್ತಿದೆ.

ಪೋಸ್ಟ್ ಆಫೀಸ್ ಆಫರ್ ಏನು?

ಆಗಸ್ಟ್ 12, 2026 ರಿಂದ ನೀವು ಸ್ಪೀಡ್ ಪೋಸ್ಟ್ ಮೂಲಕ ರಾಖಿಯನ್ನು ಕಳುಗಿಸಿದ್ರೆ ನಿಮಗೆ ವಿಶೇಷ ಕೊಡುಗೆ ಸಿಗಲಿದೆ. ನಿಮಗೆ ಇದ್ರ ಮೇಲೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಸಹೋದರಿಯರ ರಾಖಿಯನ್ನು ಅವರ ಸಹೋದರರಿಗೆ ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಲಕೋಟೆಗಳು ಅತ್ಯಂತ ಕೈಗೆಟುಕುವ ದರಗಳಲ್ಲಿ ಲಭ್ಯವಿರಲಿವೆ. ಅಲ್ದೆ ಕವರ್ ಗಳು ವಾಟರ್ ಪ್ರೂಫ್ ಆಗಿರಲಿವೆ.

ಕವರ್ ರೇಟ್ ಹೀಗಿದೆ

ಸಣ್ಣ ಕವರ್ ಗಳನ್ನು ಕಳುಹಿಸಿದ್ರೆ 10 ರೂಪಾಯಿ ಪಾವತಿಸಬೇಕು. ದೊಡ್ಡ ಕವರ್ ಬೆಲೆ 15 ರೂಪಾಯಿ. ನೀವು ರಾಖಿ ಜೊತೆ ಸ್ವೀಟ್ ಕೂಡ ಕಳುಹಿಸ್ಬಹುದು. ಆ ಬಾಕ್ಸ್ ಗೆ 30 ರೂಪಾಯಿ. ಅಂಚೆ ಕಚೇರಿಯಲ್ಲಿ ಲಭ್ಯವಿರುವ ಈ ಲಕೋಟೆಗಳ ವಿಶೇಷತೆ ಅಂದ್ರೆ ಅವುಗಳನ್ನು ಲ್ಯಾಮಿನೇಟ್ ಮಾಡಲಾಗಿದೆ. ಮಳೆ ಅಥವಾ ತೇವಾಂಶದ ಸಂದರ್ಭದಲ್ಲಿ ರಾಖಿಗೆ ಯಾವುದೇ ಹಾನಿಯಾಗೋದಿಲ್ಲ.

ಜನಸಂದಣಿಯನ್ನು ತಪ್ಪಿಸಲು ಕೊನೆಯ ದಿನಾಂಕದವರೆಗೆ ಕಾಯ್ಬೇಡಿ. ಮೊದಲೇ ರಾಖಿ ಬುಕ್ ಮಾಡಿ, ಪೋಸ್ಟ್ ಆಫೀಸ್ ಮೂಲಕ ರಾಖು ಕಳುಹಿಸಿ, ವಿಶೇಷ ಆಫರ್ ಪಡೆಯಿರಿ. ಎಲ್ಲ ಸೌಲಭ್ಯಗಳು ನಗರ ಪ್ರದೇಶಗಳ ಶಾಖಾ ಅಂಚೆ ಕಚೇರಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮಾನವಾಗಿ ಲಭ್ಯವಿರುತ್ತದೆ.

ಗಂಗಾ ನೀರು

ಇದಲ್ದೆ ಪೋಸ್ಟ್ ಆಫೀಸ್ ಗಂಗಾ ನೀರಿನ ವಿಶೇಷ ಕೊಡುಗೆ ಕೂಡ ನೀಡ್ತಿದೆ. ಶ್ರಾವಣ ಮಾಸದ ವಿಶೇಷ ಸಂದರ್ಭದಲ್ಲಿ, ಭಕ್ತರು ಗಂಗೋತ್ರಿಯಿಂದ ಕೇವಲ 30 ರೂಪಾಯಿಗಳಿಗೆ ಗಂಗಾ ನೀರನ್ನು ತರಿಸಿಕೊಳ್ಳುವ ಅವಕಾಶವನ್ನು ಪೋಸ್ಟ್ ಆಫೀಸ್ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಯೋಧ್ಯೆ ದೇಗುಲದ CEO ಆಗಲು 5000 ಅರ್ಜಿ.. ಅರ್ಹತೆಗಳು ಏನೇನು ಗೊತ್ತಾ..?
ಕೆಮಿಕಲ್ಸ್​ ಹಾಕದೇ ವರ್ಷಪೂರ್ತಿ ತಾಜಾ ತಾಜಾ ಬಾಳೆ ಎಲೆ: ವಿದ್ಯಾರ್ಥಿಯ ಸಂಶೋಧನೆಗೆ ಸಿಕ್ಕಾಪಟ್ಟೆ ಡಿಮಾಂಡ್​