ಪೋರ್ಶೆ ಕಾರಿಗೆ 28 ಲಕ್ಷ ದಂಡ : ದೇಶದಲ್ಲೇ ಅತೀ ಹೆಚ್ಚು

Published : Jan 10, 2020, 11:35 AM IST
ಪೋರ್ಶೆ ಕಾರಿಗೆ 28 ಲಕ್ಷ ದಂಡ : ದೇಶದಲ್ಲೇ ಅತೀ ಹೆಚ್ಚು

ಸಾರಾಂಶ

ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸುವ ದಂಡದ ಮೊತ್ತ ಹಲವು ಪಟ್ಟು ಹೆಚ್ಚಳವಾಗಿದ್ದು,  ಉದ್ಯಮಿಯ ದುಬಾರಿ ಪೋರ್ಶೆ ಕಾರಿಗೆ ಭಾರೀ ದಂಡ ವಿಧಿಸಲಾಗಿದೆ. 

ಅಹ್ಮದಾಬಾದ್‌ [ಜ.10]: ಹೊಸ ಮೋಟಾರು ಕಾಯ್ದೆ ಬಳಿಕ ರಸ್ತೆ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ವಿಧಿಸುವ ದಂಡದ ಮೊತ್ತ ಹಲವು ಪಟ್ಟು ಹೆಚ್ಚಳವಾಗಿದ್ದು, ಇಲ್ಲಿನ ಉದ್ಯಮಿಯ ದುಬಾರಿ ಪೋರ್ಶೆ ಕಾರಿಗೆ ಬರೋಬ್ಬರಿ 27.68 ಲಕ್ಷ ದಂಡ ವಿಧಿಸಲಾಗಿದೆ. 

ಆ ಮೂಲಕ ಹೊಸ ನಿಯಮದ ಬಳಿಕದ ವಿಧಿಸಲಾದ ದೇಶದಲ್ಲೇ ಅತೀ ಹೆಚ್ಚು ದಂಡದ ಪ್ರಮಾಣ ಇದಾಗಿದೆ. ಉದ್ಯಮಿ ಎಂ.ಬಿ ವಿರ್ಜಾ ಎಂಬುವವರಿಗೆ ಸೇರಿದ್ದ 2 ಕೋಟಿ ಮೌಲ್ಯದ ಪೋರ್ಶೆ 911 ಸ್ಪೋಟ್ಸ್‌ರ್‍ ಕಾರನ್ನು, ನೋಂದಣಿ ಮಾಡದ್ದಕ್ಕೆ ಕಳೆದ ನವೆಂಬರ್‌ನಲ್ಲಿ ಪೊಲೀಸರು ತಪಾಸಣೆ ವೇಳೆ ವಶಕ್ಕೆ ಪಡೆದಿದ್ದರು. 

ಭಾರತಕ್ಕೆ ಬರುತ್ತಿದೆ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; 350KM ಮೈಲೇಜ್!...

2017ರಿಂದ ನೋಂದಣಿ ಮಾಡದೇ ಕಾರು ಬಳಸಲಾಗುತ್ತಿದ್ದು, 16 ಲಕ್ಷ ಮೋಟಾರ್‌ ವಾಹನ ತೆರಿಗೆ, 7.68 ಲಕ್ಷ ಬಡ್ಡಿ ಹಾಗೂ ಹಳೇ 4 ಲಕ್ಷ ದಂಡ ಸೇರಿ ಒಟ್ಟು 27.68 ಲಕ್ಷ ರು. ಪಾವತಿ ಮಾಡಿದ್ದಾರೆ. ಈ ದಂಡದ ರಸೀದಿಯನ್ನು ಪೊಲೀಸರು ಟ್ವಿಟರ್‌ನಲ್ಲಿ ಹಂಚಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Panna Diamond Mine: ಮಣ್ಣು ತಂದ ಸೌಭಾಗ್ಯ... ಒಂದೇ ರಾತ್ರಿಯಲ್ಲಿ ಲಕ್ಷಾಧಿಪತಿಗಳಾದ 7 ಮಂದಿ ಕಾರ್ಮಿಕರು
'ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳೋದು ವಿದೇಶಾಂಗ ನೀತಿಯಲ್ಲ..' ಮೋದಿ ಬಗ್ಗೆ ಮಿಮಿಕ್ರಿ ಮಾಡಿ ಲೇವಡಿ ಮಾಡಿದ ರಾಹುಲ್‌ ಗಾಂಧಿ