ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಜನತೆಯಿಂದ ಸಲಹೆ ಹಾಗೂ ಸೂಚನೆಗಳನ್ನು ಆಹ್ವಾನಿಸಿದ್ದಾರೆ. ‘ಮೈ ಗವ್’ www.mygovt.in ವೆಬ್‌ಸೈಟ್‌ನಲ್ಲಿ ನಿಮ್ಮ ಸಲಹೆಗಳನ್ನು ನೀಡಬಹುದು’ ಎಂದು ಅವರು ಕೋರಿದ್ದಾರೆ.
ನವದೆಹಲಿ [ಜ.10]: ಫೆಬ್ರವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಈ ನಡುವೆ, ಗುರುವಾರ ಅವರು ಆರ್ಥಿಕ ತಜ್ಞರು ಹಾಗೂ ಉದ್ಯಮ ತಜ್ಞರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಿಯವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಗುರುವಾರ ಪ್ರಕಟಣೆಯೊಂದನ್ನು ಹೊರಡಿಸಿ, ‘ಕೇಂದ್ರ ಬಜೆಟ್ 130 ಕೋಟಿ ಭಾರತೀಯರ ಆಸೆ, ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮಲ್ಲಿರುವ ಆಲೋಚನೆಗಳನ್ನು ಹಂಚಿಕೊಳ್ಳಿ ಎಂದು ನಾನು ನಿಮಗೆಲ್ಲರಿಗೂ ಆಹ್ವಾನ ನೀಡುತ್ತಿದ್ದೇನೆ. ‘ಮೈ ಗವ್’ www.mygovt.in ವೆಬ್‌ಸೈಟ್‌ನಲ್ಲಿ ನಿಮ್ಮ ಸಲಹೆಗಳನ್ನು ನೀಡಬಹುದು’ ಎಂದು ಅವರು ಕೋರಿದ್ದಾರೆ.
undefined
ಆರ್ಥಿಕ ಕುಸಿತಕ್ಕೆ ಮೋದಿ, ಶಾ ಕಾರಣ'...
ತಜ್ಞರೊಂದಿಗೆ ಸಭೆ:
ಗುರುವಾರ ಮೋದಿ ಅವರು ಆರ್ಥಿಕ ತಜ್ಞರು ಹಾಗೂ ಉದ್ಯಮ ತಜ್ಞರನ್ನು ನೀತಿ ಆಯೋಗದ ಕಚೇರಿಯಲ್ಲಿ ಭೇಟಿ ಮಾಡಿ ಆರ್ಥಿಕತೆಯ ಚೇತರಿಕೆ ಕುರಿತ ಚರ್ಚೆ ನಡೆಸಿದರು. ಜಿಡಿಪಿ ಪ್ರಗತಿ ದರ ಶೇ.5ಕ್ಕೆ ಕುಸಿಯುವ ಮುನ್ಸೂಚನೆ ಇರುವ ಕಾರಣ ಪ್ರಧಾನಿಯವರು, ಕೃಷಿ ಹಾಗೂ ಮೂಲಸೌಕರ್ಯ ಕ್ಷೇತ್ರವನ್ನು ಉತ್ತೇಜಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು. ಗೃಹ ಸಚಿವ ಅಮಿತ್ ಶಾ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್, ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೇಕ್ ದೇಬ್ರಾಯ್ ಸಭೆಯಲ್ಲಿದ್ದರು.
ಜನವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ