ತಿರುಮಲ ತಿಮ್ಮಪ್ಪನ ಸನ್ನಿಧಾನದಲ್ಲಿ ಯೂಟ್ಯೂಬರ್‌ ಪ್ರಾಂಕ್‌ ವಿಡಿಯೋ: ಟಿಟಿಡಿ ಗರಂ

By Suvarna News  |  First Published Jul 13, 2024, 10:08 PM IST

ತಿರುಮಲ ತಿಮ್ಮಪ್ಪನ ದೇವಸ್ಥಾನದಲ್ಲಿ ಯೂಟ್ಯೂಬರ್‌  ಟಿಟಿಎಫ್ ವಾಸನ್ ಸೇರಿದಂತೆ ಕೆಲವರು ಟಿಟಿಡಿ ಉದ್ಯೋಗಿಯಂತೆ ಪೋಸ್ ಕೊಟ್ಟು ಮಾಡಿರುವ ವಿಡಿಯೋದಿಂ ಟಿಟಿಡಿ ಗರಂ ಆಗಿದೆ.  


ತಿರುಮಲ (ಜು.13): ತಿರುಮಲ ತಿಮ್ಮಪ್ಪನ ದೇವಸ್ಥಾನದಲ್ಲಿ   ಯೂಟ್ಯೂಬರ್ ಟಿಟಿಎಫ್ ವಾಸನ್ ಸೇರಿದಂತೆ ಕೆಲವರು ಟಿಟಿಡಿ ಉದ್ಯೋಗಿಯಂತೆ ಪೋಸ್ ಕೊಟ್ಟು, ಸರತಿ ಸಾಲಿನಲ್ಲಿ ಕಾಯುವ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕಂಪಾರ್ಟ್‌ಮೆಂಟ್ ತೆರೆದಂತೆ ವರ್ತಿಸುತ್ತಿರುವ ತಮಾಷೆಯ ವಿಡಿಯೋ (ಪ್ರಾಂಕ್ ವಿಡಿಯೋ) ವೈರಲ್‌ ಆಗಿದೆ.

ಚಾರ್ಮಾಡಿ ಘಾಟ್ ಎಂಟ್ರಿಯಲ್ಲಿ ಪ್ರವಾಸಿಗರ ರಂಪಾಟ, ಎಣ್ಣೆ ಮತ್ತಿನಲ್ಲಿ ಪೊಲೀಸರ ಮುಂದೆಯೇ ಹೊಡೆದಾಟ!

Tap to resize

Latest Videos

ಇದರಿಂದ ಗರಂ ಆಗಿರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಸಮಿತಿ, ಇಂಥ ಯೂಟ್ಯೂಬರ್‌ಗಳ ವಿರುದ್ಧ ಚವುದಾಗಿ ಎಚ್ಚರಿಸಿದೆ. ಕೆಲವು ಯೂಟ್ಯೂಬರ್‌ಗಳು ಟಿಟಿಡಿ ಉದ್ಯೋಗಿಯಂತೆ ಕಂಪಾರ್ಟ್‌ಮೆಂಟ್ ಅನ್ನು ಅನ್ಲಾಕ್ ಮಾಡಿ ಯಾತ್ರಾರ್ಥಿಗಳನ್ನು ದರ್ಶನಕ್ಕೆ ಬಿಡುವಂತೆ ತಮಾಷೆಯ ವೀಡಿಯೊವನ್ನು ಮಾಡಿದ್ದಾರೆ. ಕಂಪಾರ್ಟ್‌ಮೆಂಟ್‌ಗಳಲ್ಲಿ ಕಾಯುತ್ತಿದ್ದ ಭಕ್ತರು ತಮ್ಮ ಕಂಪಾರ್ಟ್‌ಮೆಂಟ್ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಏಳುತ್ತಾರೆ.

4 ದಶಕದ ಬಳಿಕ ನಕಲಿ ಕೀ ಬಳಸಿ ಪುರಿ ಜಗನ್ನಾಥನ ರತ್ನ ಭಂಡಾರ ಓಪನ್, ಖಜಾನೆ ಲೂಟಿ ಮಾಡಲಾಗಿದ್ಯಾ?

ಆದರೆ ಪ್ರಾಂಕ್ ವಿಡಿಯೋ ಮಾಡುವ ಕುಚೇಷ್ಟೆಗಾರ, ಚೇಷ್ಟೆಯಿಂದ ನಗುತ್ತಾ ಕಂಪಾರ್ಟ್‌ಮೆಂಟ್‌ನಿಂದ ಓಡಿಹೋಗುತ್ತಾನೆ. ಆಗ ಭಕ್ತರು ಮೋಸ ಹೋಗಿ ಪೆಚ್ಚು ಮೋರೆ ಹಾಕಿ ಕೂರುತ್ತಾರೆ. ಈ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದ್ದು ಅದು ವಿಶೇಷವಾಗಿ ತಮಿಳುನಾಡಿನಲ್ಲಿ ವೈರಲ್ ಆಗಿದೆ.

click me!