ಗ್ರ್ಯಾಂಡ್ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದ ಅನಂತ್ ಅಂಬಾನಿ; ಡಿಸೈನರ್ ಟೀ ಕುಡಿಯೋಕೆ ಹೋಗಿದ್ನಾ ಎಂದ ನೆಟ್ಟಿಗರು

By Mahmad Rafik  |  First Published Jul 13, 2024, 11:48 AM IST

ಬಹುಶಃ ಡಿಸೈನರ್ ಟೀ ಕುಡಿಯಲು ಹೋದಾಗ ಅನಂತ್ ಅಂಬಾನಿ ಬೇಗ ಬೇಗ ಸ್ಪೂರ್ಟ್ಸ್ ಶೂ ವೇದಿಕೆಗೆ ಬಂದಿರಬಹುದು ಎಂದು ನೆಟ್ಟಿಗರು ನಗೆ ಚಟಾಕಿ ಹಾರಿಸಿದ್ದಾರೆ


ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಮದುವೆ ಶುಕ್ರವಾರ ನಡೆದಿದೆ. ಮದುವೆಯ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವರ ಅನಂತ್ ಅಂಬಾನಿ ಗ್ರ್ಯಾಂಡ್ ಶೇರ್ವಾನಿ ಧರಿಸಿದ್ದರು. ಸಾಮಾನ್ಯವಾಗಿ ಶೇರ್ವಾನಿಗೆ ಮ್ಯಾಚಿಂಗ್ ರಾಯಲ್ ಶೂ ಅಥವಾ ಕೋಲ್ಹಾಪುರಿ ಚಪ್ಪಲ್ ಸಹ ಧರಿಸಲಾಗುತ್ತದೆ. ಕೆಲವರು ಲೂಫರ್ ಮಾದರಿಯ ಶೂ ಧರಿಸೋದು ಕೆಲದಿನಗಳಿಂದ ಟ್ರೆಂಡ್ ಆಗುತ್ತಿದೆ. ಆದ್ರೆ ಅನಂತ್ ಅಂಬಾನಿ ಮದುವೆಯಲ್ಲಿ ಶೇರ್ವಾನಿಗೆ ಸ್ಪೋರ್ಟ್ಸ್ ಶೂ ಧರಿಸಿ ಬಂದಿರೋದು ನೋಡುಗರ ಅಚ್ಚರಿಗೆ ಕಾರಣವಾಗಿದೆ.

ಅನಂತ್ ಅಂಬಾನಿ ಟ್ರೆಡಿಷನಲ್ ಲುಕ್‌ನಲ್ಲಿ ಸ್ಪೋರ್ಟ್ ಶೂ ಧರಿಸಿದ್ದು ಯಾಕೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಬಹುಶಃ ಡಿಸೈನರ್ ಟೀ ಕುಡಿಯಲು ಹೋದಾಗ ಅನಂತ್ ಅಂಬಾನಿ ವೇದಿಕೆಗೆ ಬಂದಿರಬಹುದು ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಅನಂತ್ ಅಂಬಾನಿ ಡಿಸೈನರ್ ಗಳಿಗೆ ಇದು ಯಾಕೆ ಗಮನಕ್ಕೆ ಬಂದಿಲ್ಲ ಎಂದು ನೆಟ್ಟಿಗರು ಕೇಳುತ್ತಿದ್ದಾರೆ.

Tap to resize

Latest Videos

ಅಂಬಾನಿ ಕುಟುಂಬದ ಸ್ಪೆಷಲ್ ಲುಕ್

ಮದುವೆಯಲ್ಲಿ ಅಂಬಾನಿ ಕುಟುಂಬ ಸದಸ್ಯರ ಸ್ಪೆಷಲ್ ಲುಕ್ ಸೆಂಟರ್ ಆಫ್ ಅಟ್ರಾಕ್ಷನ್ ಆಗಿತ್ತು. ಮದುವೆಗೂ ಮುನ್ನ ಎಲ್ಲರೂ ನೀಲಿಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ನೀತಾ ಅಂಬಾನಿ ಪೀಚ್, ಗುಲಾಬಿ ಮತ್ತು ಕಿತ್ತಳೆ ಬಣ್ಣದ ಸಂಯೋಜನೆಯ ಲೆಹೆಂಗಾ ಮತ್ತು ಡೈಮಂಡ್ ಆಭರಣಗಳನ್ನು ಧರಿಸಿದ್ದರು. ಅನಂತ್ ಅಂಬಾನಿ ಗುಲಾಬಿ ಬಣ್ಣದ ಶೇರ್ವಾನಿ, ಬಿಳಿ ಪೈಜಾಮಾ ಹಾಗೂ ಸ್ಪೋರ್ಟ್ ಶೂ ಹಾಕಿಕೊಂಡಿದ್ದರು. ಅನಂತ್ ಅಂಬಾನಿ ಶೇರ್ವಾನಿಯಲ್ಲಿ ಆನೆಯನ್ನು ಚಿತ್ರಿಸಲಾಗಿತ್ತು.

83 ಕೋಟಿ ಪಡೆದ್ರೂ ಹಾಕಳ್ಳೋಕೆ ಬಟ್ಟೆ ಸಿಗಲಿಲ್ವಾ? ರಿಹಾನಾ ಬಳಿಕ ಜಸ್ಟಿನ್ ಬೀಬರ್ ಟ್ರೋಲ್

ಮೈದುನ ಅನಂತ್ ಮದುವೆಯಲ್ಲಿ ಅಂಬಾನಿ ಕುಟುಂಬದ ಹಿರಿಯ ಸೊಸೆ ಶ್ಲೋಕಾ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ಮ್ಯಾಚ್ ಆಗುವ ಡೈಮಂಡ್ ಆಭರಣಗಳನ್ನು ಧರಿಸಿದ್ದರು. ಸೋದರಿ ಇಶಾ ಅಂಬಾನಿ ಕೂಡ ಗುಲಾಬಿ ಮತ್ತು ಗೋಲ್ಡನ್ ಬಣ್ಣದ ಸಂಯೋಜನೆಯ ಸುಂದರವಾದ ಲೆಹೆಂಗಾ ಧರಿಸಿದ್ದರು. ಹೆವಿ ಗ್ರ್ಯಾಂಡ್ ಆಭರಣಗಳು ಇಶಾ ಸೌಂದರ್ಯವನ್ನು ಹೆಚ್ಚಳ ಮಾಡಿತ್ತು.  ಆಕಾಶ್ ಅಂಬಾನಿ ಪೀಚ್ ಬಣ್ಣದ ಶೇರ್ವಾನಿಯಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದಾರೆ. ಅವರ ಮಕ್ಕಳಿಬ್ಬರೂ ಕಿತ್ತಳೆ, ಹಳದಿ, ಗುಲಾಬಿ ಬಣ್ಣದ ಕಾಂಬಿನೇಷನ್‌ ಬಟ್ಟೆಗಳನ್ನು ಧರಿಸಿದ್ದಾರೆ.

ಜುಲೈ 15ರಂದು ಆರತಕ್ಷತೆ

ಜುಲೈ 13 ರಂದು ಅಂದ್ರೆ ಇಂದು  ಅನಂತ್-ರಾಧಿಕಾ ಅವರಿಗೆ ಮಂಗಳಕರ ಆಶೀರ್ವಾದ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಮಾರಂಭಕ್ಕೆ ಆಗಮಿಸುವ ಅತಿಥಿಗಳೆಲ್ಲರೂ ನವಜೋಡಿಗೆ ಆಶೀರ್ವಾದ ಮಾಡಲಿದ್ದಾರೆ. ಜುಲೈ 14 ರಂದು ಮಂಗಳೋತ್ಸವ ನಡೆಯಲಿದೆ. ಇದಾದ ನಂತರ ಜುಲೈ 15 ರಂದು ರಿಲಯನ್ಸ್ ಜಿಯೋ ವರ್ಲ್ಡ್ ನಲ್ಲಿ ಸಂಜೆ 7:30 ರಿಂದ ಅದ್ಧೂರಿ ವಿವಾಹ ಆರತಕ್ಷತೆ ನಡೆಯಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಸಹ ಮುಂಬೈಗೆ ಆಗಮಿಸಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗೆ ಶುಭ ಹಾರೈಸಲಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ನಡೆದ ಮದುವೆ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಸೇರಿದಂತೆ 1,200 ಜಾಗತೀಕ ಗಣ್ಯರು ಭಾಗಿಯಾಗಿದ್ರು. 

ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?

click me!