
ನವದೆಹಲಿ(ಡಿ.28): 1991ರಲ್ಲಿ ದೇಶದ ಆರ್ಥಿಕತೆಯನ್ನು ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣಕ್ಕೆ ತೆರೆದಿಟ್ಟಾಗ ಅತಿ ಹೆಚ್ಚು ಟೀಕೆಗೆ ಗುರಿಯಾದವರು ಡಾ। ಮನಮೋಹನ ಸಿಂಗ್. ಭಾರತವನ್ನು ವಿತ್ತ ಸಚಿವರು ವಿದೇಶಕ್ಕೆ ಮಾರಿ ಬಿಡುತ್ತಾರೆ ಎಂದು ದೇಶಾದ್ಯಂತ ರಾಜಕೀಯ ಪಕ್ಷಗಳು, ಸಂಘಟನೆಗಳು ಕೆಂಡಕಾರಿದ್ದವು.
ಸಿಂಗ್ ಅವರ ಭಾವಚಿತ್ರ ದಹಿಸಿ, ಚಪ್ಪಲಿ ಸೇವೆ ಮಾಡಿ ಪ್ರತಿಭಟನೆ ನಡೆಸಿದ್ದವು. ಸಿಂಗ್ ಅವರು ಪ್ರಧಾನಿಯಾದಾಗಲೂ ಅವರ ಬಗ್ಗೆ ಕುಹಕ ಮಾಡಿದವರಿಗೆ, ದ್ವೇಷಿಸಿದವರಿಗೆ ಲೆಕ್ಕವೇ ಇಲ್ಲ. ಅವರ ಪ್ರತಿ ನಡೆ, ನಿರ್ಧಾರವನ್ನೂ ಟೀಕಿಸಲಾಗಿತ್ತು. ಯಾರು ಏನೇ ಹೇಳಿದರೂ, ಇತಿಹಾಸ ನನ್ನ ಬಗ್ಗೆ ಕರುಣೆ ತೋರುತ್ತದೆ ಎಂದು ಡಾ। ಸಿಂಗ್ ಪ್ರಧಾನಿ ಕುರ್ಚಿ ತೊರೆಯುವ ಕೆಲವೇ ತಿಂಗಳು ಮೊದಲು ಹೇಳಿದ್ದರು. ಅವರ ಮಾತು ಈಗ ನಿಜವಾಗಿದೆ. ಡಾ। ಸಿಂಗ್ ಅವರ ಸಾವಿಗೆ ಪಕ್ಷಭೇದವಿಲ್ಲದೆ ರಾಜಕಾರಣಿಗಳು ಕಂಬನಿ ಮಿಡಿಯುತ್ತಿದ್ದಾರೆ. ದ್ವೇಷ, ಟೀಕೆ ಎಲ್ಲವನ್ನೂ ಮರೆತು ಡಾ। ಸಿಂಗ್ ಗುಣಗಾನದಲ್ಲಿ ನಿರತರಾಗಿದ್ದಾರೆ.
ಮನಮೋಹನ್ ಸಿಂಗ್ ಅವರ ಈ ವಸ್ತುಗಳನ್ನು ಪಾಕಿಸ್ತಾನ ಇಂದಿಗೂ ಉಳಿಸಿಕೊಂಡಿದೆ!
ದಿಲ್ಲಿಯಲ್ಲಿ ಇಂದು ಬೆಳಗ್ಗೆ 11.45ಕ್ಕೆ ಅಂತ್ಯಕ್ರಿಯೆ
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮಬೋಧ ಘಾಟ್‌ನಲ್ಲಿ ಶನಿವಾರ ಬೆಳಗ್ಗೆ 11.45ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.
ಬೆಳಗ್ಗೆ 9.30ರಿಂದ ಅಂತಿಮ ಯಾತ್ರೆ
ಡಾ। ಸಿಂಗ್ ಅವರ ನಿವಾಸದಿಂದ ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್ ಪ್ರಧಾನ ಕಚೇರಿಗೆ ಪಾರ್ಥಿವ ಶರೀರ ಒಯ್ಯಲಾಗುತ್ತದೆ. ಅಲ್ಲಿ ಬೆಳಗ್ಗೆ 8.30ರಿಂದ 9.30ರವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಅಂತಿಮ ಯಾತ್ರೆ ನಡೆಯಲಿದೆ.
ಅಂತ್ಯಕ್ರಿಯೆ ವಿಳಂಬ ಏಕೆ?
ಡಾ। ಸಿಂಗ್ ಅವರ ಪುತ್ರಿ ಅಮೆರಿಕದಲ್ಲಿದ್ದಾರೆ. ಅವರ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಶುಕ್ರವಾರವೇ ನಡೆಯಬೇಕಿದ್ದ ಅಂತ್ಯಕ್ರಿಯೆಯನ್ನು ಶನಿವಾರಕ್ಕೆ ನಿಗದಿಪಡಿಸಲಾಗಿದೆ.
ನನ್ನ ಮಾರ್ಗದರ್ಶಕರಾಗಿದ್ದರು
ಡಾ। ಸಿಂಗ್ ನನ್ನ ಮಿತ್ರ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕರಾಗಿದ್ದರು. ಅವರ ನಿಧನದಿಂದ ವೈಯಕ್ತಿಕವಾಗಿಯೂ ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ರತನ್ ಟಾಟಾ & ಮನಮೋಹನ್ ಸಿಂಗ್: ಮರೆಯಾದ ದಿಗ್ಗಜರ ಅಚ್ಚರಿಯ ಸಾಮ್ಯತೆಗಳು!
ಸಂಕಷ್ಟದಿಂದ ದೇಶ ಬಚಾವ್ ಮಾಡಿದ್ದು ಸಿಂಗ್: ದೇವೇಗೌಡ
ಬೆಂಗಳೂರು: ದೇಶ ಆರ್ಥಿಕವಾಗಿ ಭೀಕರಪರಿಸ್ಥಿತಿಯಲ್ಲಿದ್ದಾಗ ಹಣಕಾಸು ಸಚಿವರಾಗಿ ಬಂದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸಮರ್ಥ ವಾಗಿ ಕೆಲಸ ಮಾಡಿ ಅರ್ಥ ವ್ಯವಸ್ಥೆಯ ನ್ನು ಸರಿದಾರಿಗೆ ತಂದರು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಪಾರು ಮಾಡಿ ಗೌರದ ಉಳಿ ಸಿದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಬಣ್ಣಿಸಿದ್ದಾರೆ. ಶುಕ್ರವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ದಾಂಜಲಿ ಸಮರ್ಪಣೆ ಸಭೆಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ನಿಧನ ನನಗೆ ಬಹಳ ನೋವುಂಟು ಮಾಡಿದೆ ಎಂದಿದ್ದಾರೆ.
ಡಾ|ಸಿಂಗ್ ಜೀವನ ಭವಿಷ್ಯದ ಪೀಳಿಗೆಗೆ ಪಾಠ: ಮೋದಿ
ನವದೆಹಲಿ: ತಮಗಿಂತ ಮುಂಚೆ ಪ್ರಧಾನಿ ಆಗಿದ್ದ ಡಾ। ಮನಮೋಹನ್ ಸಿಂಗ್ ಅವರ ನಿಧನವನ್ನು 'ರಾಷ್ಟ್ರಕ್ಕೆ ಆದ ದೊಡ್ಡ ನಷ್ಟ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬಣ್ಣಿಸಿದ್ದಾರೆ ಹಾಗೂ 'ದೇಶದ ಅಭಿವೃ ದ್ವಿಗೆ ಅವರ ಬದ್ಧತೆಯನ್ನು ಯಾವಾಗಲೂ ಗೌರವಿ ಸಲಾಗುವುದು' ಎಂದಿ ದ್ದಾರೆ. ಅಲ್ಲದೆ, 'ದೇಶ ವನ್ನು ಹೊಸ ಆರ್ಥಿಕ ಮಾರ್ಗಕ್ಕೆ ತಂದವರು ಮನಮೋಹನ್' ಎಂದೂ ಶ್ಲಾಘಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ