
ಕೋಲ್ಕತಾ(ಮಾ.21): ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಸಂಘಟನೆಯ ಜೊತೆ ನಂಟು ಹೊಂದಿದ್ದ, ಸ್ಥಳೀಯ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ ಕೋಲ್ಕತಾದ 21 ವರ್ಷದ ಕಾಲೇಜು ಯುವತಿಯೊಬ್ಬಳನ್ನು ಕೋಲ್ಕತಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತಳನ್ನು ತಾನಿಯಾ ಪವೀರ್‍ನ್ ಎಂದು ಗುರುತಿಸಲಾಗಿದೆ. ಮೌಲಾನಾ ಆಜಾದ್ ಕಾಲೇಜಿನಲ್ಲಿ ಎಂಎ ಅರೇಬಿಕ್ ವಿದ್ಯಾರ್ಥಿನಿಯಾಗಿರುವ ಈಕೆ ವಿರುದ್ಧ ಪೊಲೀಸರು ಕ್ರಿಮಿನಲ್ ಸಂಚು, ದೇಶದ್ರೇಹ, ಕೋಮುಭಾವನೆ ಕೆರಳಿಸುವ ಆರೋಪಗಳನ್ನು ಪೊಲೀಸರು ಹೊರಿಸಿದ್ದಾರೆ.
ಬಳಿಕ ಈಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಲಾಗಿದ್ದು, ಕೋರ್ಟ್ ಆಕೆಯನ್ನು 14 ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಈಕೆಯ ಬ್ಯಾಂಕ್ ಖಾತೆ ಮೂಲಕ ನಿರಂತರವಾಗಿ ಕೋಟ್ಯಂತರ ರುಪಾಯಿ ಹಣ ಚಲಾವಣೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಕಳೆದೊಂದು ವರ್ಷದಿಂದ ಈಕೆ ಮೇಲೆ ನಿಗಾ ಇಟ್ಟಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ