
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13000 ಕೋಟಿ ವಂಚಿಸಿದ ಪ್ರಕರಣದ ಪ್ರಮುಖ ಆರೋಪಿ ಮೇಹುಲ್ ಚೋಕ್ಸಿಯನ್ನು ಇಂಟರ್‌ಪೋಲ್ ತನ್ನ ಮೋಸ್ಟ್ ವಾಂಟೆಡ್ ಉಗ್ರನ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ವಿಪಕ್ಷಗಳನ್ನು ಇ.ಡಿ. (ED) ಮತ್ತು ಸಿಬಿಐ (CBI) ಮೂಲಕ ಗುರಿ ಮಾಡುತ್ತಿದೆ. ಆದರೆ ಅವರ ಗೆಳೆಯರನ್ನು ಬಿಟ್ಟು ಕಳುಹಿಸಿದ್ದಾರೆ. ಚೋಕ್ಸಿಯಂಥವರಿಗೆ ರಕ್ಷಣೆ ನೀಡುವವರು ದೇಶಪ್ರೇಮದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge) ಕಿಡಿಕಾರಿದ್ದಾರೆ.
ಮತ್ತೊಂದೆಡೆ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈ ಬಗ್ಗೆ ಟ್ವೀಟ್ ಮಾಡಿದ್ದು,‘ ಸಿಐಡಿ, ಇ.ಡಿ. ವಿಪಕ್ಷಗಳಿಗೆ ಮಾತ್ರ ಇದೆ. ಬಿಜೆಪಿಯ ಸ್ನೇಹಿತರಿಗೆ ಅಲ್ಲ. ಮೊದಲು ಲೂಟಿ ಮಾಡಿಸಿ, ನಂತರ ಅವರನ್ನು ಶಿಕ್ಷೆಯಿಂದ ಮುಕ್ತವಾಗಿಸುವ ಮಾದರಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಟೀಕಿಸಿದರು. ಈ ನಡುವೆ ಇಂಟರ್‌ಪೋಲ್ ಬೆಳವಣಿಗೆ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಐ, ಮೇಹುಲ್ ಮೇಲೆ ಮತ್ತೇ ರೆಡ್ ನೋಟಿಸ್ ಜಾರಿಮಾಡಲು ಇಂಟರ್‌ಪೋಲ್ ನಿಯುಂತ್ರಣ ಆಯೋಗಕ್ಕೆ(CCF) ಕೋರಲಾಗಿದೆ ಎಂದು ತಿಳಿಸಿದೆ.
ಪಿಎನ್‌ಬಿ ವಂಚಕ ಚೋಕ್ಸಿ ಇಂಟರ್‌ಪೋಲ್ ಲಿಸ್ಟಿಂದ ಹೊರಕ್ಕೆ: ಭಾರತ ಆಕ್ಷೇಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ