7 ದಶಕಗಳ ಬಳಿಕಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ - ಇಂದು ‘ಸೇವಾ ತೀರ್ಥ’ ಉದ್ಘಾಟನೆ

Kannadaprabha News   | Kannada Prabha
Published : Feb 13, 2026, 05:15 AM IST
Seva theerth

ಸಾರಾಂಶ

ಪ್ರಧಾನ ಮಂತ್ರಿಗಳ ನೂತನ ಕಚೇರಿ ಇರುವ ‘ಸೇವಾ ತೀರ್ಥ’ ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೆರವೇರಿಸಲಿದ್ದಾರೆ. ಈ ಮೂಲಕ ಸ್ವಾತಂತ್ರ್ಯಾನಂತರ ಮೊದಲ ಬಾರಿ ಪ್ರಧಾನಿ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.

ನವದೆಹಲಿ : ಪ್ರಧಾನ ಮಂತ್ರಿಗಳ ನೂತನ ಕಚೇರಿ ಇರುವ ‘ಸೇವಾ ತೀರ್ಥ’ ಕಟ್ಟಡದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೆರವೇರಿಸಲಿದ್ದಾರೆ. ಈ ಮೂಲಕ ಸ್ವಾತಂತ್ರ್ಯಾನಂತರ ಮೊದಲ ಬಾರಿ ಪ್ರಧಾನಿ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.

ಈ ಹಿಂದೆ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಸೇರಿ ಹಲವು ಸರ್ಕಾರಿ ಕಚೇರಿಗಳು ಸೆಂಟ್ರಲ್‌ ವಿಸ್ತಾ ಪ್ರದೇಶದ ಸೌತ್‌ ಬ್ಲಾಕ್ ಹಾಗೂ ನಾರ್ತ್‌ ಬ್ಲಾಕ್‌ನಲ್ಲಿದ್ದವು. 1931ರಲ್ಲೇ ಇವು (ಬ್ರಿಟಿಷ್‌ ಕಾಲದಲ್ಲೇ) ನಿರ್ಮಾಣಗೊಂಡಿದ್ದವು. ಇದರ ನಡುವೆ 1947ರಲ್ಲಿ ಪ್ರಧಾನಿ ಕಚೇರಿ ಆರಂಭವಾಗಿತ್ತು. ಅವೆಲ್ಲವೂ ಬಹಳ ಹಳೆಯದಾಗಿದ್ದ ಕಾರಣ ಆಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.

ಶುಕ್ರವಾರ ಮೋದಿಯವರು ಮೊದಲಿಗೆ ‘ಸೇವಾ ತೀರ್ಥ’ ಎಂಬ ಹೊಸ ಹೆಸರನ್ನು ಅನಾವರಣಗೊಳಿಸಲಿದ್ದಾರೆ. ಈ ಕಟ್ಟಡವು ಪ್ರಧಾನಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯವನ್ನು ಒಳಗೊಂಡಿರುತ್ತದೆ.

ಅನಂತರ ಸೇವಾ ತೀರ್ಥ, ಕರ್ತವ್ಯ ಭವನ 1 ಮತ್ತು 2 ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆ ಸುಮಾರಿಗೆ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಿಎಂಒ ಮಾಹಿತಿ ನೀಡಿದೆ.

ವೈಶಿಷ್ಟ್ಯಗಳು:

ಸೇವಾ ತೀರ್ಥವು ಪ್ರಧಾನ ಮಂತ್ರಿಗಳ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಂಪುಟ ಸಚಿವಾಲಯಗಳನ್ನು ಹೊಂದಿದೆ. ಇವೆಲ್ಲವೂ ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ನೆಲೆಗೊಂಡಿದ್ದವು.

ಕರ್ತವ್ಯ ಭವನ 1 ಮತ್ತು 2 ಕಾನೂನು, ರಕ್ಷಣೆ, ಹಣಕಾಸು, ಆರೋಗ್ಯ, ಕೃಷಿ ಮತ್ತು ಹಲವಾರು ಇತರ ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

ಡಿಜಿಟಲ್ ಆಗಿ ಸಂಯೋಜಿತ ಕಚೇರಿ

ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಆಗಿ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಇಂಟರ್ಫೇಸ್ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತ ಸೌಲಭ್ಯಗಳನ್ನು ಹೊಂದಿವೆ.

4-ಸ್ಟಾರ್ ‘ಗೃಹ’ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಸಂಕೀರ್ಣಗಳು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ನೀರಿನ ಸಂರಕ್ಷಣಾ ಕ್ರಮಗಳು, ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಒಳಗೊಂಡಿವೆ

ಈ ಕಟ್ಟಡಗಳು ಸ್ಮಾರ್ಟ್ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು, ಕಣ್ಗಾವಲು ಜಾಲಗಳು ಮತ್ತು ಸುಧಾರಿತ ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಹೊಂದಿರುತ್ತವೆ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಗಾ ವಿರುದ್ಧ ಸಂಸತ್ತಲ್ಲಿ ಬಿಜೆಪಿಯ ಅನರ್ಹತೆ ಅಸ್ತ್ರ
ಐಪಿಎಲ್ ಬೆಟ್ಟಿಂಗ್ ಮಾನನಷ್ಟ ಮೊಕದ್ದಮೆ: 10 ಲಕ್ಷ ರೂ. ಪಾವತಿಸುವಂತೆ ಧೋನಿಗೆ ಹೈಕೋರ್ಟ್ ಆದೇಶ!