ಕೊರೋನಾ ಆತಂಕ; ರಾಜ್ಯ ಹಾಗೂ ಜಿಲ್ಲಾ ಕ್ಷೇತ್ರ ಅಧಿಕಾರಿಗಳ ಜೊತೆ ಮೋದಿ ಸಂವಾದ!

By Suvarna NewsFirst Published May 17, 2021, 8:02 PM IST
Highlights
  • ಗ್ರಾಮೀಣ ಭಾಗದಲ್ಲಿ ಕೊರೋನಾ ಗಣನೀಯ ಏರಿಕೆ
  • ಹಲವು ರಾಜ್ಯಗಳ  ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ
  • ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ

ನವದೆಹಲಿ(ಮೇ.17): ಕೊರೋನಾ ವೈರಸ್  ಇದೀಗ ಗ್ರಾಮೀಣ ಭಾಗಗಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆರೋಗ್ಯ ಮೂಲಕ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸೂಕ್ತ ಚಿಕಿತ್ಸೆ, ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಚರ್ಚಿಸಲು ಪ್ರದಾನಿ ನರೇಂದ್ರ ಮೋದಿ ಮೇ. 18 ರಂದು ಕೊರೋನಾ ಹೆಚ್ಚಿರುವ ದೇಶದ ಹಲವು ರಾಜ್ಯ ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಸಂವಾದ ನಡೆಸಲಿದ್ದಾರೆ.

ಕೊರೋನಾ ಸ್ಥಿತಿಗತಿ: ಕರ್ನಾಟಕದ 17 ಜಿಲ್ಲಾಧಿಕಾರಿಗಳ ಜೊತೆ ಪ್ರದಾನಿ ಮೋದಿ ಸಂವಾದ!.

ವಿವಿಧ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ COVID 19 ವಿರುದ್ಧದ ಯುದ್ಧವನ್ನು ಕ್ಷೇತ್ರ ಮಟ್ಟದ ಅಧಿಕಾರಿಗಳು ಮುನ್ನಡೆಸುತ್ತಿದ್ದಾರೆ. ಕೆಲ ರಾಜ್ಯಗಳ ಜಿಲ್ಲೆಗಳಲ್ಲಿ ಕೊರೋನಾ ಇಳಿಕೆಯಾಗಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಗಣನೀಯ ಏರಿಕೆ ಆತಂಕ ಹೆಚ್ಚಿಸಿದೆ. ಹೀಗೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಹೀಗಾಗಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಾಳೆ ಬೆಳಗ್ಗೆ 11 ಗಂಟೆಗೆ ಸಂವಾದ ನಡೆಸಲಿದ್ದಾರೆ. 

ಕರ್ನಾಟಕದ ಸೇರಿದಂತೆ  ಬಿಹಾರ, ಅಸ್ಸಾಂ, ಚಂಡೀಗಢ,  ತಮಿಳುನಾಡು, ಉತ್ತರಾಖಂಡ,  ಗೋವಾ, ಹಿಮಾಚಲ ಪ್ರದೇಶ, ದೆಹಲಿಯ ಕೊರೋನಾ ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. 

click me!