ಮತ ಪ್ರಮಾಣ ಹೆಚ್ಚಿಸಲು ತಟ್ಟೆ ಬಾರಿಸಿ: ಸ್ತ್ರೀಯರಿಗೆ ಮೋದಿ ಕರೆ

Published : May 22, 2024, 05:30 AM IST
ಮತ ಪ್ರಮಾಣ ಹೆಚ್ಚಿಸಲು ತಟ್ಟೆ ಬಾರಿಸಿ: ಸ್ತ್ರೀಯರಿಗೆ ಮೋದಿ ಕರೆ

ಸಾರಾಂಶ

ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿಅಂಶಗಳು ಚಿಗುರೊಡೆಯುತ್ತವೆ’ ಎಂದ ಪ್ರಧಾನಿ ನರೇಂದ್ರ ಮೋದಿ 

ವಾರಾಣಸಿ(ಮೇ. 22):  ‘ಪ್ರತಿ ಮತಗಟ್ಟೆಯಲ್ಲಿ 20-25 ಮಹಿಳೆಯರು ಸೇರಿಕೊಂಡು ತಟ್ಟೆ, ನಗಾರಿ ಬಾರಿಸುತ್ತಾ ಹಾಡು ಹಾಡುತ್ತಾ 10 ಮೆರವಣಿಗೆ ಮಾಡಿ ಜಾಗೃತಿ ಮೂಡಿಸಿದರೆ ಮತದಾನ ಪ್ರಮಾಣ ತನ್ನಿಂತಾನೇ ಹೆಚ್ಚಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮಂಗಳವಾರ ಸಂಜೆ ಸ್ವಕ್ಷೇತ್ರ ವಾರಾಣಸಿಯಲ್ಲಿ ನಡೆದ ನಾರಿ ಶಕ್ತಿ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ‘ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿಅಂಶಗಳು ಚಿಗುರೊಡೆಯುತ್ತವೆ’ ಎಂದರು. ಈ ಹಿಂದೆ ಕೋವಿಡ್‌ ಮಹಾಮಾರಿಯ ವೇಳೆ ಕೂಡ ಮೋದಿ ಅವರು ತಟ್ಟೆ ಬಾರಿಸಿ ಜಾಗೃತಿ ಮೂಡಿಸುವ ಚಳವಳಿಗೆ ಕರೆ ನೀಡಿ ಗಮನ ಸೆಳೆದಿದ್ದರು.

ನರೇಂದ್ರ ಮೋದಿ ಅವರಿಂದ ನಾನು ಏನ್ ಬೇಕಾದರೂ ಹೇಳಿಸಬಲ್ಲೆ: ರಾಹುಲ್ ಗಾಂಧಿ

ಮುಲಾಯಂಗೆ ಟಾಂಗ್‌:

ಇದೇ ವೇಳೆ, ಮಹಿಳೆ ಮೇಲೆ ಅತ್ಯಾಚಾರ ನಡೆದ ಪ್ರಕರಣದಲ್ಲಿ ಹುಡುಗರನ್ನು ಸಮರ್ಥಿಸಿಕೊಂಡು ‘ಲಡಕೇ ಲಡಕೇ ಹೋತೇ ಹೈ’ (ಹುಡುಗರು ಹುಡುಗರೇ ಬಿಡಿ.. ಹುಡುಗರು ತಪ್ಪು ಮಾಡುವುದು ಸಹಜ) ಎಂದಿದ್ದ ಎಸ್ಪಿ ನೇತಾರ ಮುಲಾಯಂ ಸಿಂಗ್ ಯಾದವ್ ಬಗ್ಗೆ ಲೇವಡಿ ಮಾಡಿದ ಮೋದಿ, ‘ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಆಡಳಿತದಲ್ಲಿ ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಯಾರೂ ಈ ರೀತಿ ತಪ್ಪು ಮಾಡುವುದಕ್ಕೆ ಧೈರ್ಯ ತೋರುವುದಿಲ್ಲ’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಕೊಂಡಾಡಿದರು.

20-25 ಸ್ತ್ರೀಯರು ಮೆರವಣಿಗೆ ಮಾಡಲಿ

ಬಿಜೆಪಿಗರು 20-25 ಮಹಿಳೆಯರನ್ನು ಸೇರಿಸಬೇಕು. ಈ ಮಹಿಳೆಯರು ನಗಾರಿ ಬಾರಿಸುತ್ತಾ, ತಟ್ಟೆ ಬಾರಿಸುತ್ತಾ, ಹಾಡು ಹೇಳುತ್ತಾ ಮತಗಟ್ಟೆಗೆ ವ್ಯಾಪ್ತಿಯಲ್ಲಿ 8-10 ಮೆರವಣಿಗೆಗಳನ್ನು ನಡೆಸಿದರೆ, ಮತದಾನದ ಅಂಕಿ- ಅಂಶಗಳು ಚಿಗುರೊಡೆಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!