ನನ್ನ ಬಗ್ಗೆ ಕೆಲವು ಜನ ಕೀಳಾಗಿ ಮಾತಾಡುತ್ತಾರೆ. ಮತ್ತೆ ಕೆಲವು ಜನ ಹೊಗಳುತ್ತಾರೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನೋವುಂಟು ಮಾಡಬಾರದು ಎಂಬ ಏಕಮೇವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ ಎಂದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ(ಮೇ.26): ‘ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ ಮತ್ತು ಆ ಕಾರ್ಯ ಮುಗಿಯುವವರೆಗೆ ಕೆಲಸ ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅಲ್ಲಿಯವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ನುಡಿದಿದ್ದಾರೆ.
ಎನ್‌ಡಿಟೀವಿಗೆ ಸಂದರ್ಶನ ನೀಡಿದ ಮೋದಿ, ಆದರೆ ಕಾರ್ಯದ ಕುರಿತಾಗಿ ಮೊದಲೇ ಸುಳಿವು ನೀಡುವುದಿಲ್ಲ. ಹಾಗೆಯೇ ತಾನೂ ದೇವರಿಗೆ ಆ ಕುರಿತು ಪ್ರಶ್ನಿಸಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ದೇವರೇ ತನ್ನನ್ನು 2047ರೊಳಗೆ ಭಾರತವನ್ನು ವಿಕಸಿತ ಭಾರತ ಮಾಡುವ ಸಲುವಾಗಿ ಕಳುಸಿಹಿಸಿರುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಕ್ಕೆ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
undefined
'ಮೋದಿ ಇನ್ನೊಮ್ಮೆ ಗೆದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೋತಾರೆ': ಶಿವರಾಜ ತಂಗಡಗಿ ವಾಗ್ದಾಳಿ
ಎನ್‌ಡಿಟಿವಿ ಸಂದರ್ಶನದಲ್ಲಿ ಮಾತನಾಡಿ ‘ನನ್ನ ಬಗ್ಗೆ ಕೆಲವು ಜನ ಕೀಳಾಗಿ ಮಾತಾಡುತ್ತಾರೆ. ಮತ್ತೆ ಕೆಲವು ಜನ ಹೊಗಳುತ್ತಾರೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನೋವುಂಟು ಮಾಡಬಾರದು ಎಂಬ ಏಕಮೇವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ’ ಎಂದರು,
ಇದೇ ವೇಳೆ, ‘ಕೆಲವರು ನನ್ನನ್ನು ಹುಚ್ಚ (ಕ್ರೇಜಿ) ಎನ್ನಬಹುದು. ಆದರೂ ಹೇಳುತ್ತಿದ್ದೇನೆ. ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ. ಒಮ್ಮೆ ದೇವರ ಉದ್ದೇಶ ಈಡೇರಿತು ಎಂದರೆ ನನ್ನ ಕೆಲಸ ಮುಗಿಯಿತು ಎಂದರ್ಥ. ಅದಕ್ಕಾಗಿಯೇ ನಾನು ಸಂಪೂರ್ಣವಾಗಿ ದೇವರಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ಹೇಳಿದರು.
‘ದೇವರು ನನ್ನ ಬಳಿ ಬಹಳ ಕೆಲಸ ಮಾಡಿಸುತ್ತಿದ್ದಾನೆ. ಆದರೆ ತನ್ನ ಮುಂದಿನ ಗುರಿ ಏನು ಎಂಬ ಸುಳಿವು ಬಿಟ್ಟುಕೊಡುವುದಿಲ್ಲ. ಅಲ್ಲದೆ, ನನ್ನ ಮುಂದಿನ ಕೆಲಸ ಏನು ಎಂದು ನಾವು ಆತನನ್ನು ಕೇಳಲು ಸಾಧ್ಯವಿಲ್ಲ’ ಎಂದು ನುಡಿದರು.
ಪ್ರತಿಪಕ್ಷಗಳು ಶತ್ರುಗಳಲ್ಲ:
ಇದೇ ವೇಳೆ ಪ್ರತಿಪಕ್ಷಗಳನ್ನು ಶ್ಲಾಘಿಸಿದ ಮೋದಿ, ‘ನಾನು ಪ್ರತಿಪಕ್ಷ ನಾಯಕರನ್ನು ಶತ್ರುಗಳಾಗಿ ಪರಿಗಣಿಸುವುದಿಲ್ಲ. ಅವರನ್ನು ನನ್ನ ಜೊತೆಗೇ ಕರೆದೊಯ್ಯಲು ಬಯಸುವೆ. ಅವರೂ ಸಹ 60 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದು, ಪ್ರತಿಪಕ್ಷಗಳಿಂದ ಕಲಿಯುವುದು ಬಹಳಷ್ಟಿದೆ’ ಎಂದು ತಿಳಿಸಿದರು.