ರಾಜಕಾರಣಿಗಳು ಮೂಗುತೂರಿಸಿದ್ದರಿಂದ Aircel ಕಂಪನಿ ಕಳ್ಕೊಂಡೆ, ಈಗ ದೇಶ ಬದಲಾಗಿದೆ ಎಂದ ಮಾಲೀಕ!

By Santosh Naik  |  First Published May 25, 2024, 5:43 PM IST

ಹಿಂದಿನ ಸರ್ಕಾರಗಳು ಇದ್ದಾಗ ಯಶಸ್ಸು ಕಾಣೋದೇ ಒಂದು ಸಮಸ್ಯೆಯಾಗಿತ್ತು ಎಂದು ಏರ್‌ಸೆಲ್‌ನ ಮಾಲೀಕ ಚಿನ್ನಕಣ್ಣನ್ ಶಿವಶಂಕರನ್ ಹೇಳಿದ್ದಾರೆ. "ರಾಜಕಾರಣಿಗಳು ಮಧ್ಯಪ್ರವೇಶ ಮಾಡಿದ್ದರಿಂದಲೇ ನನ್ನ ಕಂಪನಿಯನ್ನು ಕಳೆದುಕೊಂಡೆ" ಎಂದಿದ್ದಾರೆ.
 


ನವದೆಹಲಿ (ಮೇ.25): ಏರ್‌ಸೆಲ್ ಸಂಸ್ಥಾಪಕ ಚಿನ್ನಕಣ್ಣನ್ ಶಿವಶಂಕರನ್ ಬಹಳ ದಿನಗಳ ಬಳಿಕ ಮಾತನಾಡಿದ್ದಾರೆ. ಒಂದು ದಶಕದ ಹಿಂದಿನ ಭಾರತಕ್ಕಿಂತ ಇಂದಿನ ಭಾರತ ತುಂಬಾ ಭಿನ್ನವಾಗಿದೆ, ಆ ಸಮಯದಲ್ಲಿ ವ್ಯವಹಾರ ಮಾಡುವಾಗ ಸರ್ಕಾರದಿಂದಲೇ ಅತಿಯಾದ ಒತ್ತಡ ಇರುತ್ತಿತ್ತು. ಆ ಸಮಯದಲ್ಲಿ (ಯುಪಿಎ ಕಾಲಘಟ್ಟದಲ್ಲಿ) ಯಶಸ್ಸು ಸಾಧಿಸೋದೇ ಒಂದು ಸಮಸ್ಯೆ ಆಗಿತ್ತು ಎಂದು ಪಾಡ್‌ಕಾಸ್ಟ್‌ನಲ್ಲಿ ಅವರು ತಿಳಿಸಿದ್ದಾರೆ. ರಾಜಕಾರಣಿಗಳು ನನ್ನ ಕಂಪನಿಯ ವ್ಯವಹಾರದಲ್ಲಿ ಅತಿಯಾಗಿ ಮೂಗು ತೂರಿಸಿದ್ದರಿಂದಲೇ ನಾನು ಕಂಪನಿಯನ್ನು ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ. ಏರ್‌ಸೆಲ್‌ ಕಂಪನಿಯ ಮಾರಾಟದ ಒಪ್ಪಂದದಿಂದ ಕೇಬಲ 3400 ಕೋಟಿ ರೂಪಾಯಿಯ ಅಲ್ಪ ಮೊತ್ತದ ಲಾಭ ಮಾತ್ರ ಮಾಡಿಕೊಂಡೆ. ಹಾಗೇನಾದರೂ ನನ್ನ ಕಂಪನಿಯನ್ನು ಅಮೆರಿಕದ ಎಟಿ&ಟಿ ಕಂಪನಿಗೆ ಮಾರಾಟ ಮಾಡಿದ್ದರೆ ನನಗೆ 8 ಬಿಲಿಯನ್‌ ಮೊತ್ತ ಸಿಗುತ್ತಿತ್ತು ಎಂದು ಹೇಳಿದ್ದಾರೆ.

ಇಂದು ಭಾರತವು ಅಂದಿನ ಭಾರತದಂತಿರಲಿಲ್ಲ, "ಇಂದು ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಆಗ ಉದ್ಯಮಿ ತಮ್ಮ ಕಂಪನಿಯನ್ನು ನಿರ್ದಿಷ್ಟ ವ್ಯಕ್ತಿಗೆ ಮಾರಾಟ ಮಾಡಬೇಕು ಎನ್ನುವ ಒತ್ತಡವೇ ಅತಿಯಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ.

ಆರ್ಥಿಕ ಸಮಸ್ಯೆಗಳಿಂದಾಗಿ ಏರ್‌ಸೆಲ್ ಫೆಬ್ರವರಿ 2018 ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತು. 2006 ರಲ್ಲಿ, ಮ್ಯಾಕ್ಸಿಸ್ ಬರ್ಹಾದ್ 74% ಪಾಲನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಏರ್‌ಸೆಲ್ ಅನ್ನು ಸ್ವಾಧೀನಪಡಿಸಿಕೊಂಡಿತು. 2011ರ ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದ ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಬರಂ ಹಾಗೂ ಅಂದಿನ ಯುಪಿಎ ಸರ್ಕಾರಕ್ಕೆ ಮುಗ್ಗುಲ ಮುಳ್ಳಾಗಿ ಕಾಡಿತ್ತು.  ಆ ವೇಳೆಯಲ್ಲಿಯೇ ಚಿನ್ನಕಣ್ಣನ್ ಶಿವಶಂಕರನ್ ಅವರಿಗೆ ಏರ್‌ಸೆಲ್‌ ಕಂಪನಿಯ ಪಾಲನ್ನು ಮ್ಯಾಕ್ಸಿಸ್ ಬರ್ಹಾದ್‌ಗೆ ಮಾರಾಟ ಮಾಡಲು ಒತ್ತಡ ಹೇರಲಾಗಿದೆ ಎಂದು ಆರೋಪಿಸಲಾಗಿತ್ತು.

40 ಸಾವಿರ ಕೋಟಿ ಆಸ್ತಿ ಬಿಟ್ಟು ಸನ್ಯಾಸಿಯಾದ ಶ್ರೀಮಂತ!

Latest Videos

undefined

“ಈಗ ನೀವು ಉದ್ಯಮವನ್ನು ಕಟ್ಟಿದರೆ, ಯಾರೂ ನಿಮ್ಮ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ಈಗ ಅದು ಉದಾರೀಕರಣಗೊಂಡ ಭಾರತವಾಗಿದೆ. ನನ್ನ ದೂರು ಏನೆಂದರೆ, ಕಂಪನಿಯನ್ನು ಮಾರಾಟ ಮಾಡಲು ಅವರು ಒತ್ತಡ ಹೇರಿದರು ಎಂದಲ್ಲ, ಆದರೆ, 8 ಬಿಲಿಯನ್‌ ಆಫರ್‌ ಮಾಡಿದ್ದ ಕಂಪನಿಗೆ ನನ್ನ ಕಂಪನಿಯನ್ನು ಮಾರಾಟ ಮಾಡಲು ಅವರು ಅವಕಾಶ ನೀಡಬೇಕಿತ್ತು' ಎಂದು ಚಿನ್ನಕಣ್ಣನ್ ಶಿವಶಂಕರನ್ ಹೇಳಿದ್ದಾರೆ.

Aircel Maxis Case: ಚಿದಂಬರಂ ಪುತ್ರ ಕಾರ್ತಿಗೆ ಮತ್ತೆ ಕಂಟಕ, ಸಮನ್ಸ್ ಜಾರಿ!

click me!