ಭಾರತದ ಚೊಚ್ಚಲ ಗಗನಯಾತ್ರೆಗೆ ಸಿದ್ಧತೆ: ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ

Published : Feb 27, 2024, 01:10 PM ISTUpdated : Feb 27, 2024, 01:21 PM IST
ಭಾರತದ ಚೊಚ್ಚಲ ಗಗನಯಾತ್ರೆಗೆ  ಸಿದ್ಧತೆ: ಗಗನಯಾತ್ರಿಗಳ ಹೆಸರು ಬಹಿರಂಗಪಡಿಸಿದ ಪ್ರಧಾನಿ

ಸಾರಾಂಶ

ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. 

ನವದೆಹಲಿ: ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. 

ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರೆಗೆ ಸಜ್ಜಾಗಿದ್ದು, ಕಳೆದ 5 ವರ್ಷಗಳಿಂದ ಇಸ್ರೋ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಗನಯಾತ್ರೆ ಕೈಗೊಳ್ಳುವ ಗಗನಯಾನಿಗಳ ಪರಿಚಯ ಮಾಡಿಕೊಟ್ಟಿದ್ದಾರೆ. 


 ಗಗನಯಾತ್ರೆಗೆ ಸಿದ್ಧಗೊಳ್ಳುತ್ತಿರುವ ಈ ವಾಯುಸೇನಾ ಅಧಿಕಾರಿಗಳಿಗೆ ಭಾರತದ ವಿವಿಧ ಸೇನಾಪಡೆಗಳಲ್ಲಿ ನಿಯೋಜಿಸಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಇದರ ಜೊತೆಗೆ ರಷ್ಯಾದಲ್ಲೂ ಕಠಿಣ ತರಬೇತಿಯನ್ನು ಈ ಗಗನಯಾನಿಗಳು ಪಡೆದಿದ್ದಾರೆ. ಇಸ್ರೋ ಕೈಗೊಳ್ಳಲಿರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನಕ್ಕೆ  ಭಾರತೀಯ ವಾಯುಸೇಯ ಅಧಿಕಾರಿಗಳಾದ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರನ್ನು ಆಯ್ಕೆ ಮಾಡಿ ಕಠಿಣ ತರಬೇತಿ ನೀಡಲಾಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!