Rozgar Mela: ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೋದಿ, 75 ಸಾವಿರ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ!

Published : Oct 22, 2022, 01:00 PM IST
Rozgar Mela: ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಮೋದಿ, 75 ಸಾವಿರ ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ!

ಸಾರಾಂಶ

ದೇಶದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಯ ವಚನ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅದರ ಭಾಗವಾಗಿ ಶನಿವಾರ ರೋಜ್‌ಗಾರ್‌ ಮೇಳಕ್ಕೆ ಚಾಲನೆ ನೀಡಿದರು. ಇದರ ಅಡಿಯಲ್ಲಿ ಹೊಸದಾಗಿ ನೇಮಕವಾದ 75 ಸಾವಿರ ಸಿಬ್ಬಂದಿಗೆ ಅವರು ನೇಮಕಾತಿ ಪತ್ರವನ್ನು ವಿತರಣೆ ಮಾಡಿದರು.  

ನವದೆಹಲಿ (ಅ.22): ಉದ್ಯೋಗ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವರ್ಚುವಲ್ ಆಗಿ ಉದ್ಘಾಟಿಸಿದರು. ಈ ಅಭಿಯಾನದ ಅಡಿಯಲ್ಲಿ ಮುಂದಿನ 18 ತಿಂಗಳಲ್ಲಿ ಈ ಎಲ್ಲಾ ಖಾಲಿ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತದೆ. ಇದಕ್ಕಾಗಿ ಕೇಂದ್ರದ ಎಲ್ಲ ಇಲಾಖೆಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಈ ದಿಸೆಯಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದರು. ಉದ್ಯೋಗ ಮೇಳದ ಅಡಿಯಲ್ಲಿ, ದೇಶಾದ್ಯಂತ ಆಯ್ದ ಯುವಕರನ್ನು ಭಾರತ ಸರ್ಕಾರದ 38 ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ನೇಮಕ ಮಾಡಲಾಗುತ್ತದೆ. ಹೊಸದಾಗಿ ನೇಮಕಗೊಂಡ ನೌಕರರು ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. 10 ಲಕ್ಷ ಕೇಂದ್ರ ಸರ್ಕಾರಿ ನೌಕರಿಯನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ 75 ಸಾವಿರ ಸಿಬ್ಬಂದಿಗಳು ಮೋದಿ ವರ್ಚುವಲ್‌ ಆಗಿ ನೇಮಕಾತಿ ಪತ್ರವನ್ನು ಹಸ್ತಾಂತರ ಮಾಡಿದರು.

ಉದ್ಯೋಗ ಮೇಳ ಉದ್ಘಾಟನೆ ಸಂದರ್ಭದಲ್ಲಿ ಮಾತಾನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅಭಿಯಾನ ನಡೆಯುತ್ತಿದ್ದು, ಇಂದು ಅದಕ್ಕೆ ಮತ್ತೊಂದು ಕೊಂಡಿ ಸೇರ್ಪಡೆಯಾಗುತ್ತಿದೆ. ಇದು ಉದ್ಯೋಗ ಮೇಳದ ಕೊಂಡಿ. ಇಂದು ಕೇಂದ್ರ ಸರ್ಕಾರ 75 ಸಾವಿರ ಯುವಕರಿಗೆ ನೇಮಕಾತಿ (appointment letters) ಪತ್ರ ನೀಡುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಈಡೇರಿಕೆಗಾಗಿ ನಾವು ಸ್ವಾವಲಂಬಿ ಭಾರತದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದು ಹೇಳಿದರು. ಇಂದು ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಇಷ್ಟು ಚುರುಕುತನವನ್ನು ನೀವು ಗಮನಿಸಿದ್ದರೆ. ಅದರ ಹಿಂದೆ ಏಳೆಂಟು ವರ್ಷಗಳ ಶ್ರಮವಿದೆ, ಕರ್ಮಯೋಗಿಗಳ ದೊಡ್ಡ ಸಂಕಲ್ಪವಿದೆ ಎಂದರು.

ನ.11ಕ್ಕೆ ಬೆಂಗ್ಳೂರಿಗೆ ಪ್ರಧಾನಿ ಮೋದಿ: ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮಕ್ಕೆ ಸಿಎಂ ಸೂಚನೆ

ಒಂದು ಕೋಟಿಗೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.: ಇಂದು ಭಾರತವು ವಿಶ್ವದ ಐದನೇ ಅತಿದೊಡ್ಡ (Economy) ಆರ್ಥಿಕತೆಯಾಗಿದೆ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದರು. ಏಳೆಂಟು ವರ್ಷಗಳಲ್ಲಿ ನಾವು ನ.10 ರಿಂದ ನಂ.5ಕ್ಕೆ ಜಿಗಿದಿದ್ದೇವೆ. ಇದು ಸಾಧ್ಯವಾಗುತ್ತಿದೆ ಏಕೆಂದರೆ ಕಳೆದ 8 ವರ್ಷಗಳಲ್ಲಿ ದೇಶದ ಆರ್ಥಿಕತೆಯ ಅಡೆತಡೆಗಳನ್ನು ನಾವು ತೆಗೆದುಹಾಕಿದ್ದೇವೆ. ಕೌಶಲ್ಯಾಭಿವೃದ್ಧಿ ಯೋಜನೆಯಡಿ ದೇಶದ ಯುವಕರಿಗೆ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ತರಬೇತಿ ನೀಡುವ ಬೃಹತ್ ಅಭಿಯಾನ ನಡೆಯುತ್ತಿದೆ ಎಂದು ಈ ವೇಳೆ ಹೇಳಿದರು. ಇದರ ಅಡಿಯಲ್ಲಿ ಇದುವರೆಗೆ 1.25 ಕೋಟಿಗೂ ಹೆಚ್ಚು ಯುವಕರಿಗೆ ಸ್ಕಿಲ್ ಇಂಡಿಯಾ (Skill India campaign) ಅಭಿಯಾನದ ಸಹಾಯದಿಂದ ತರಬೇತಿ ನೀಡಲಾಗಿದೆ. ಈ ವರ್ಷಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದಲ್ಲಿ ಒಂದು ಕೋಟಿಗೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ. ಇದರಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಹೋದರಿಯರ ಪಾಲು ಇದೆ ಎಂದರು.

ಹಿಂದಿನ ಸರ್ಕಾರಗಳಿಂದ ಧಾರ್ಮಿಕ ಕ್ಷೇತ್ರ ನಿರ್ಲಕ್ಷ್ಯ: ಪ್ರಧಾನಿ ಮೋದಿ ವಾಗ್ದಾಳಿ

ಮಹಿಳಾ ಸಬಲೀಕರಣದ ಉದಾಹರಣೆಯನ್ನು ನೀಡಿದ ಪ್ರಧಾನಿ ಮೋದಿ, ಇತ್ತೀಚಿನ ವರ್ಷಗಳಲ್ಲಿ 80 ಮಿಲಿಯನ್ ಮಹಿಳೆಯರು ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ, ಅವರಿಗೆ ಭಾರತ ಸರ್ಕಾರವು ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದರು. ಈ ಕೋಟಿಗಟ್ಟಲೆ ಮಹಿಳೆಯರು ಈಗ ತಮ್ಮ ಉತ್ಪನ್ನಗಳನ್ನು ದೇಶಾದ್ಯಂತ ಮಾರಾಟ ಮಾಡುತ್ತಿದ್ದಾರೆ, ತಮ್ಮ ಆದಾಯವನ್ನು ಹೆಚ್ಚಿಸುತ್ತಿದ್ದಾರೆ ಎಂದರು. ಸ್ವಾವಲಂಬಿ ಭಾರತದ ಉದಾಹರಣೆಯನ್ನು ನೀಡಿದ ಪ್ರಧಾನಿ, ಇಂದು ದೇಶದಲ್ಲಿ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಹೇಳಿದರು. ಇಂದು ವಾಹನಗಳಿಂದ ಹಿಡಿದು ಮೆಟ್ರೋ ಕೋಚ್‌ಗಳು, ರೈಲು ಕೋಚ್‌ಗಳು, ರಕ್ಷಣಾ ಸಾಧನಗಳು, ರಫ್ತುಗಳು ಅನೇಕ ಕ್ಷೇತ್ರಗಳಲ್ಲಿ ವೇಗವಾಗಿ ಹೆಚ್ಚುತ್ತಿವೆ. ಭಾರತ ಹಲವು ರೀತಿಯಲ್ಲಿ ಸ್ವಾವಲಂಬಿಯಾಗುತ್ತಿದೆ ಎಂದರು. ಭಾರತವು ಆಮದುದಾರರಿಂದ ರಫ್ತುದಾರರ ದೇಶವಾಗಿ ಬದಲಾಗುತ್ತಿದೆ. ಭಾರತ ಹಲವು ಕ್ಷೇತ್ರಗಳಲ್ಲಿ ಜಾಗತಿಕ ಕೇಂದ್ರವಾಗುವತ್ತ ಸಾಗುತ್ತಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ನೂ 10 ದಿನಗಳ ಕಾಲ ಇಂಡಿಗೋಳು
ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌