ಪ್ರಧಾನಿ ಆದ ನಂತರ 2ನೇ ಸಲ ಇಂದು Modi ಅಯೋಧ್ಯೆಗೆ ಭೇಟಿ: ದೀಪೋತ್ಸವಕ್ಕೆ ಚಾಲನೆ

By Kannadaprabha News  |  First Published Oct 23, 2022, 7:47 AM IST

ಪ್ರಧಾನಿಯಾದ ನಂತರ ಅಯೋಧ್ಯೆಗೆ ಮೋದಿ ಇಂದು 2ನೇ ಬಾರಿ ಭೇಟಿ ಮಾಡುತ್ತಿದ್ದು, ಈ ವೇಳೆ 18 ಲಕ್ಷ ದೀಪಗಳನ್ನು ಬೆಳಗಿಸುವ ದೀಪಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ರಾಮಾಯಣ ರೂಪಕಗಳನ್ನು ಪ್ರಧಾನಿ ಮೋದಿ ವೀಕ್ಷಣೆ ಮಾಡಲಿದ್ದಾರೆ.


ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಮೋದಿ ರಾಮನ ದರ್ಶನ ಮಾಡಿ ಬಳಿಕ ದೇಗುಲದಲ್ಲಿ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ರಾಮಮಂದಿರ ನಿರ್ಮಾಣ ಚಟುವಟಿಕೆ ವೀಕ್ಷಿಸಲಿದ್ದಾರೆ. ಜೊತೆಗೆ ಶ್ರೀರಾಮನ ಪಟ್ಟಾಭಿಷೇಕದ ಸಾಂಕೇತಿಕ ಆಚರಣೆ ನೆರವೇರಿಸಲಿದ್ದಾರೆ. ಸಂಜೆ 6.30ಕ್ಕೆ ಮೋದಿ ಸರಯೂ ನದಿ ತೀರದಲ್ಲಿ ಆರತಿ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ಬಳಿಕ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದೀಪೋತ್ಸವದ ಅಂಗವಾಗಿ 15 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.

ಜೊತೆಗೆ ಕ್ವೀನ್‌ ಹ್ಯೂ ಸ್ಮಾರಕ ಪಾರ್ಕ್ ಉದ್ಘಾಟನೆ- ಮೊದಲಾದ ಕಾರ‍್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೊರಿಯಾ ರಾಣಿಯಾಗಿದ್ದ ಹ್ಯೂ ಹ್ವಾಂಗ್‌ ಓಕ್‌ ಕ್ರಿ.ಶ.48ರಲ್ಲಿ ಜೀವಿಸಿದ್ದರು ಎನ್ನಲಾಗಿದ್ದು, ಇವರ ಮೂಲ ಅಯೋಧ್ಯೆ ಹಾಗೂ ಮೂಲನಾಮ ಸುರಿರತ್ನ ಎಂದು ಹೇಳಲಾಗಿದೆ. ಆಗ ಕೊರಿಯಾಗೆ ವಲಸೆ ಹೋಗಿ ಹ್ಯೂ ಎಂದು ಹೆಸರು ಬದಲಿಸಿಕೊಂಡರು ಎಂಬ ಪ್ರತೀತಿ ಇದೆ. ಹೀಗಾಗಿ ಅವರ ಹೆಸರಿನಲ್ಲಿ ನಿರ್ಮಾಣ ಆಗಿರುವ ಪಾರ್ಕ್ ಅನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

Tap to resize

Latest Videos

ಇದನ್ನು ಓದಿ: Modi ಅವಧಿಯಲ್ಲಿ ಉಗ್ರ ದಾಳಿ ಇಳಿಕೆ: RTI ಮಾಹಿತಿ

ಅಯೋಧ್ಯೆಯಲ್ಲಿ ಇಂದು ಏನೇನು?
- 22,000 ಸ್ವಯಂಸೇವಕರಿಂದ ಸರಯೂ ನದಿ ದಡ, ರಾಮ್‌ ಕಿ ಪೈಡಿಯಲ್ಲಿ 15 ಲಕ್ಷ ದೀಪಗಳ ಪ್ರಜ್ವಲನ
- ಇನ್ನೂ 3 ಲಕ್ಷ ದೀಪಗಳು ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಪ್ರಜ್ವಲನ
- ನದಿ ದಡದಲ್ಲಿನ ಪ್ರತಿ ಚೌಕದಲ್ಲಿ 256 ದೀಪಗಳ ಇಡುವಿಕೆ
- ನದಿ ತಟದಲ್ಲಿ ಲೇಸರ್‌ ಶೋ, 3ಡಿ ಪ್ರೊಜೆಕ್ಷನ್‌ ಮ್ಯಾಪಿಂಗ್‌ ಶೋ, ಪಟಾಕಿ ಪ್ರದರ್ಶನ
- ಭಾರತ, ರಷ್ಯಾ ಸೇರಿ ದೇಶ-ವಿದೇಶಗಳ ಸಾಂಸ್ಕೃತಿಕ ಕಲಾ ತಂಡಗಳಿಂದ ರಾಮಲೀಲಾ 
- ರಾಮ, ಸೀತೆ, ಲಕ್ಷ್ಮಣ, ಹನುಮಂತ, ಪುಷ್ಪಕ ವಿಮಾನದಿಂದ ಇಳಿದಂತೆ ಅಭಿನಯ
- ಸರಯೂ ನದಿ ದಂಡೆಯಲ್ಲಿ ಆರತಿ, ಎಲ್ಲ ಕಾರ‍್ಯಕ್ರಮದಲ್ಲಿ ಮೋದಿ ಭಾಗಿ

4.5 ಲಕ್ಷ ‘ಪ್ರಧಾನಮಂತ್ರಿ ಆವಾಸ್‌’ ಮನೆಗಳ ‘ಗೃಹಪ್ರವೇಶ’
ನವದೆಹಲಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾಗಿರುವ 4.5 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಶನಿವಾರ ಆನ್‌ಲೈನ್‌ ಮೂಲಕವೇ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿ ‘ಗೃಹಪ್ರವೇಶ’ ನೆರವೇರಿಸಿದರು. ಬಳಿಕ ‘ಗೃಹಪ್ರವೇಶ’ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದಿನ ಸರ್ಕಾರಗಳು ಬಡತನ ನಿರ್ಮೂಲನೆ ಘೋಷಣೆಯನ್ನು ಹೊರತುಪಡಿಸಿ ಬಡವರಿಗಾಗಿ ಏನನ್ನೂ ಸಹ ಮಾಡಿಲ್ಲ. ಅಲ್ಲದೇ ಬಡವರಿಗಾಗಿ ಇರುವ ಎಲ್ಲಾ ಯೋಜನೆಗಳನ್ನು ವಿಳಂಬ ಮಾಡಿವೆ. ಬಡವರಿಗೆ ಕನಿಷ್ಠ ಅಗತ್ಯತೆಗಳನ್ನು ಪೂರೈಸಲೂ ಸಹ ಈ ಸರ್ಕಾರಗಳ ಬಳಿ ಸಮಯವಿರಲಿಲ್ಲ’ ಎಂದು ಆರೋಪಿಸಿದರು ಹಾಗೂ ಉಚಿತ ಯೋಜನೆಗಳ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಈ ಭಾರಿಯೂ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ, ಕೇದಾರನಾಥ ಭದ್ರಿನಾಥಕ್ಕೂ ಭೇಟಿ!

ಆದರೆ, ‘ನಮ್ಮ ಪಿಎಂ ಆವಾಸ್‌ ಯೋಜನೆಯಿಂದ ಯೋಜನೆಯಿಂದ ಸಾಮಾಜಿಕ- ಆರ್ಥಿಕ ಬದಲಾವಣೆ ಸಾಧ್ಯವಾಗಲಿದೆ. ಈ ಮನೆಗಳು ವಿದ್ಯುತ್‌, ನೀರು ಸೌಲಭ್ಯ, ಶೌಚಾಲಯ ಮತ್ತು ಗ್ಯಾಸ್‌ ಸಂಪರ್ಕ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿವೆ. ಅಲ್ಲದೇ ಫಲಾನುಭವಿಗಳ ಎಲ್ಲಾ ಆಕಾಂಕ್ಷೆಗಳನ್ನು ಇದು ಈಡೇರಿಸಲಿದೆ’ ಎಂದು ಹೇಳಿದರು.

click me!