4 ವರ್ಷದ ದಾಂಪತ್ಯ 4 ಸೆಕೆಂಡ್‌ನಲ್ಲಿ ಅಂತ್ಯ, ವ್ಯಾಟ್ಸ್ಆ್ಯಪ್ ಮೂಲಕ ಪತ್ನಿಗೆ ತಲಾಖ್ ಮೆಸೇಜ್!

By Suvarna NewsFirst Published Oct 22, 2022, 7:23 PM IST
Highlights

2018ರಲ್ಲಿ ಮದುವೆ, ಒಂದು ವರ್ಷದ ಬಳಿಕ ಪತಿ ಹಾಗೂ ಪತಿಯ ಕುಟುಂಬಸ್ಥರಿಂದ ವರದಕ್ಷಿಣ ತರುವಂತೆ ಕಿರುಕುಳ. ಈ ಜಗಳದ ನಡುವೆ ಪತ್ನಿ ವ್ಯಾಟ್ಸ್ಆ್ಯಪ್‌ಗೆ ಪತಿ ಮೆಸೇಜ್ ಕಳುಹಿಸಿದ್ದಾರೆ. ಏನೆಂದು ನೋಡಿದರೆ ತ್ರಿವಳಿ ತಲಾಖ್. ಪತ್ನಿ ಕಂಗಾಲಾಗಿದ್ದಾರೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಉತ್ತರ ಪ್ರದೇಶ(ಅ.22): ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸಲಾಗಿದೆ. ತಲಾಖ್ ಮೂಲಕ ವಿಚ್ಚೇದನ ನೀಡುವ ಪದ್ಧತಿ ಅಂತ್ಯವಾಗಿದೆ. ಆದರೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕೇಳಿಬರುತ್ತಿದೆ. ತ್ರಿವಳಿ ತಲಾಖ್ ನಿಷೇಧವಾಗಿದ್ದರೂ, ಆಧುನಿಕ ರೂಪದಲ್ಲಿ ಕಾಣಿಸಿಕೊಂಡಿದೆ. ಇಷ್ಟೇ ಅಲ್ಲ ಈ ತಲಾಖ್ ಆಧುನಿಕತೆಗೆ ತೆರೆದುಕೊಂಡಂತೆ ಕಾಣುತ್ತಿದೆ. ವರದಕ್ಷಿಣೆ ತರುವಂತೆ ಗಂಡ ಪ್ರತಿ ಬಾರಿ ಪತ್ನಿ ಜೊತೆ ಜಗಳವಾಡುತ್ತಲೇ ಇದ್ದ. ಕಳೆದೊಂದು ವರ್ಷದಿಂದ ಈ ಜಗಳ ನಡೆಯುತ್ತಲೇ ಇತ್ತು. ಹೀಗೆ ಫೋನ್ ಮೂಲಕ ಸಣ್ಣ ಜಗಳ ಶುರುವಾಗುತ್ತಿದ್ದಂತೆ ಪತ್ನಿ ಜಗಳ ಮುಂದುವರಿಸುವುದು ಬೇಡ ಎಂದು ಫೋನ್ ಕಾಲ್ ಕಟ್ ಮಾಡಿದ್ದಾಳೆ. ಇಷ್ಟೇ ನೋಡಿ ಮರುಕ್ಷಣದಲ್ಲಿ ಪತಿಯ ಸಂದೇಶ ಬಂದಿದೆ. ವ್ಯಾಟ್ಸ್ಆ್ಯಪ್ ಮೂಲಕ ಬಂದ ಈ ಸಂದೇಶ ಏನು ಎಂದು ನೋಡಿದ ಪತ್ನಿ ಕಂಗಾಲಾಗಿದ್ದಾಳೆ. ಇದು ತ್ರಿವಳಿ ತಲಾಖ್ ಸಂದೇಶ. ಪತಿ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ, ಪತಿ ಕುಟುಂಬಸ್ಥರು ಸಂಬಂಧ ಕಡಿದು ಆಗಿದೆ ಎಂದು ಉತ್ತರಿಸಿದ್ದಾರೆ. ಇದರ ವಿರುದ್ಧ ದೂರು ನೀಡಿರುವ ಪತ್ನಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾಳೆ.

ಉತ್ತರ ಪ್ರದೇಶದ ಶಾಜಮಹಲ್ ಕಾಲೋನಿ ನಿವಾಸಿಯಾಗಿರುವ 27 ವರ್ಷದ ಇಮಾ ಖಾನ್ 2018ರಲ್ಲಿ ಅಬ್ದುಲ್ ರಶೀದ್‌ನನ್ನು ಮದುವೆಯಾಗಿದ್ದಾಳೆ. ಮದುವೆಯಾದ ಬಳಿಕ ಮೆಲ್ಲನೆ ಅಬ್ದುಲ್ ರಶೀದ್ ವರದಕ್ಷಿಣ ಕಿರುಕುಳು ಆರಂಭಿಸಿದ್ದಾನೆ. ಕಳೆದ ವರ್ಷದ ಪತ್ನಿಯ ಒಡವೆಗಳನ್ನು ಅಡವಿಟ್ಟು ಕೆಲ ಆಭರಣಗಳನ್ನು ಮಾರಾಟ ಮಾಡಿ ಕೆಲಸಕ್ಕಾಗಿ ಸೌದಿ ಅರೇಬಿಯಾಗೆ ತೆರಳಿದ್ದಾನೆ. 6 ತಿಂಗಳ ಬಳಿಕ ಪತ್ನಿಯನ್ನು ಕರೆಯಿಸಿಕೊಳ್ಳುವುದಾಗಿ ವಾಗ್ದಾನ ನೀಡಿದ್ದಾನೆ.

 

Udupi ತಲಾಕ್ ನಂತೆ ಬಹುಪತಿತ್ವವನ್ನೂ ನಿಷೇಧಿಸಲು ಮೋದಿಗೆ ಮುಸ್ಲಿಂ ಕುಟುಂಬದ ಮನವಿ

ಸೌದಿಗೆ ತೆರಳಿದ ಬಳಿಕ ಫೋನ್ ಕರೆ ಸಂಖ್ಯೆ ಕಡಿಮೆಯಾಗಿದೆ. ವಾರಕ್ಕೊಂದು ಫೋನ್ ಕಾಲ್ ಮಾಡಿದರೆ ವರದಕ್ಷಿಣೆ ತರುವಂತೆ ಜಗಳ. ಅಡವಿಟ್ಟ ಚಿನ್ನಾಭರಣ ನೀನೆ ಬಿಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾನೆ. 6 ತಿಂಗಳ ಬಲಿಕ ಸೌದಿ ಅರೆಬಿಯಾಗೆ ಕರೆಯಿಸಿಕೊಳ್ಳುತ್ತೇನೆ ಎಂದಿದ್ದ ಪತಿ, ಬಳಿಕ ವರದಕ್ಷಿಣೆ ಇಲ್ಲದೆ ನಿನ್ನೊಂದಿಗೆ ಜೀವನ ಕಷ್ಟ ಎಂದಿದ್ದಾನೆ. 

ಫೋನ್ ಮೂಲಕ ಜಗಳವಾಡಿದ ಪತಿ ಹಾಗೂ ಪತ್ನಿ ಕೆಲ ಹೊತ್ತಲ್ಲೇ ಫೋನ್ ಸಂಭಾಷಣೆ ಅಂತ್ಯಗೊಂಡಿದೆ. ಮರುಕ್ಷಣದಲ್ಲಿ ಅಬ್ದುಲ್ ರಶೀದ್ ಲೇಟೆಸ್ಟ್ ಸ್ಟೈಲ್‌ನಲ್ಲಿ ಸಂದೇಶ ಕಳುಹಿಸಿದ್ದಾನೆ. ಪಿಡಿಎಫ್ ಫೈಲ್ ಪತ್ನಿ ಇಮಾ ಖಾನ್‌ಗೆ ಕಳುಹಿಸಿದ್ದಾನೆ. ತ್ರಿವಳಿ ತಲಾಖ್ ಪಿಡಿಎಫ್ ಫೈಲ್ ತೆರೆದು ನೋಡಿದ ಪತ್ನಿ ಕಂಗಾಲಾಗಿದ್ದಾಳೆ. ಈ ಕುರಿತು ಮತ್ತೆ ಅಬ್ದುಲ್ ರಶೀದ್‌ಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಪತಿ ಕುಟುಂಬಸ್ಥರು ಸಂಬಂಧ ಕಡಿದುಕೊಂಡಾಗಿದೆ ಎಂದಿದ್ದಾರೆ. 

ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ!

ಪತಿಗೆ ತಕ್ಕ ಪಾಠ ಕಲಿಸಲು ಇಮಾ ಖಾನ್ ಪೊಲೀಸರಿಗೆ ದೂರು ನೀಡಿದ್ದಾಳೆ. ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಅಶೋಕ್ ಕುಮಾರ್ ಸಿಂಗ್ ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ತ್ರವಳಿ ತಲಾಖ್ ರದ್ದುಪಡಿಸಲಾಗಿದೆ. ಈ ಪದ್ಧತಿ ಭಾರತದಲ್ಲಿ ಇಲ್ಲ.  ವರದಕ್ಷಿಣೆ ಆರೋಪವೂ ದೂರಿನಲ್ಲಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.
 

click me!