ಸ್ವದೇಶಿ ಮೇಳ ಆಯೋಜಿಸಿ : ಸಂಸದರಿಗೆ ಮೋದಿ ಕರೆ

Kannadaprabha News   | Kannada Prabha
Published : Sep 09, 2025, 05:27 AM IST
PM Narendra Modi

ಸಾರಾಂಶ

ಅಮೆರಿಕದ ತೆರಿಗೆ ಭಾರತದ ರಫ್ತಿನ ಕುತ್ತಿಗೆ ಹಿಸುಕುತ್ತಿರುವ ಹಾಗೂ ದೇಶದ ಆರ್ಥಿಕ ಸುಧಾರಣೆಗೆ ಜಿಎಸ್‌ಟಿಯಲ್ಲಿ ಬದಲಾವಣೆ ತರಲಾಗಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಉತ್ಪನ್ನಗಳ ಪ್ರಚಾರಕ್ಕೆ ಸ್ವದೇಶಿ ಮೇಳ ಆಯೋಜಿಸುವಂತೆ ಎನ್‌ಡಿಎ ಕೂಟದ ಸಂಸದರಿಗೆ ಸೂಚಿಸಿದ್ದಾರೆ.

ನವದೆಹಲಿ: ಅಮೆರಿಕದ ತೆರಿಗೆ ಭಾರತದ ರಫ್ತಿನ ಕುತ್ತಿಗೆ ಹಿಸುಕುತ್ತಿರುವ ಹಾಗೂ ದೇಶದ ಆರ್ಥಿಕ ಸುಧಾರಣೆಗೆ ಜಿಎಸ್‌ಟಿಯಲ್ಲಿ ಬದಲಾವಣೆ ತರಲಾಗಿರುವ ಹೊತ್ತಿನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಉತ್ಪನ್ನಗಳ ಪ್ರಚಾರಕ್ಕೆ ಸ್ವದೇಶಿ ಮೇಳ ಆಯೋಜಿಸುವಂತೆ ಎನ್‌ಡಿಎ ಕೂಟದ ಸಂಸದರಿಗೆ ಸೂಚಿಸಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ‘ಜಿಎಸ್‌ಟಿ ಕಡಿತದಿಂದ ನಮ್ಮ ಸರ್ಕಾರ ಅಲೆಯೊಂದನ್ನು ಸೃಷ್ಟಿಸಿದೆ. ಸಂಸದರು ಸಹ ವಿವಿಧ ಸಭೆಗಳನ್ನು ನಡೆಸುವ ಮೂಲಕ ಜನರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಇದಕ್ಕಾಗಿ ನಿಮ್ಮನಿಮ್ಮ ಕ್ಷೇತ್ರಗಳಲ್ಲಿ ಮೇಳಗಳನ್ನು ಆಯೋಜಿಸಿ’ ಎಂದರು.

ಮೋದಿ ಜನ್ಮದಿನಕ್ಕೆ‘ನಮೋ ಯುವ ರನ್‌’ ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಇದೇ 17ರಂದು 75ನೇ ಜನ್ಮದಿನ ಆಚರಿಸಿಕೊಳ್ಳಲಿದ್ದು, ಈ ನಿಮಿತ್ತ ಸೆ.21ರಂದು ಬಿಜೆಪಿ ಯುವಮೋರ್ಚಾ ದೇಶಾದ್ಯಂತ 75 ನಗರಗಳಲ್ಲಿ ‘ನಶಾ ಮುಕ್ತ ಭಾರತಕ್ಕೆ ನಮೋ ಯುವ ರನ್‌’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈ ಓಟಕ್ಕೆ ನಟ ಮಿಲಿಂದ್‌ ಸೋಮನ್‌ ಅವರನ್ನು ರಾಯಭಾರಿಯನ್ನಾಗಿಸಲಾಗಿದೆ.

ಈ ಅಭಿಯಾನವನ್ನು ಮಾದಕ ವಸ್ತು ಮುಕ್ತ ಭಾರತ, ಸ್ವದೇಶಿ ವಸ್ತು ಬಳಕೆ ಹೆಚ್ಚಿಸುವ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಅಂದು ವಿಶ್ವಾದ್ಯಂತ 75 ನಗರಗಳಲ್ಲಿ ನಮೋ ಯುವ ರನ್‌ ನಡೆಯಲಿದೆ ಎಂದು ಯುವ ಮೋರ್ಚಾ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಭಾನುವಾರ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್