ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಯಶಸ್ವಿಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ 2036ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: 2036ರ ಒಲಿಂಪಿಕ್ಸ್ ಆಯೋಜನೆ ಆತಿಥ್ಯ ಹಕ್ಕು ಸಿಗಲು ಎಲ್ಲಾ ಪ್ರಯತ್ನ ಮಾಡುವುದಾಗಿ ಪುನರುಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಒಲಿಂಪಿಕ್ ಆಯೋಜನೆ ಭಾರತದ ಕನಸು' ಎಂದು ಹೇಳಿದ್ದಾರೆ.
ಗುರುವಾರ ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಭಾಷಣ ಮಾಡಿದ ಮೋದಿ, 2036ರ ಒಲಿಂಪಿಕ್ ಭಾರತದ ಕನಸು. ಅದಕ್ಕಾಗಿ ನಾವು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಜಿ20 ಶೃಂಗಸಭೆ ಆಯೋಜಿಸಿತ್ತು. ಈ ಮೂಲಕ ಭಾರತ ಯಾವುದೇ ಜಾಗತಿಕ ಸಮಾರಂಭ ಆಯೋಜಿಸಲು ಸಮರ್ಥವಾಗಿದೆ ಎಂಬುದನ್ನು ತೋರಿಸಿಕೊಟ್ಟಿದೆ' ಎಂದು ಹೇಳಿದರು.
undefined
ಅಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತೀಯ ಅಥ್ಲೆಟ್‌ಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಮೋದಿ, 'ಒಲಿಂಪಿಕ್ಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರುವಂತೆ ಮಾಡಿದ ಎಲ್ಲರಿಗೂ ಅಭಿನಂದನೆಗಳು. 140 ಕೋಟಿ ಭಾರತೀಯರ ಪರವಾಗಿ ನಾನು ನಿಮಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಅಥ್ಲೆಟ್‌ಗಳು ಪ್ಯಾರಿಸ್‌ಗೆ ತೆರಳಲಿದ್ದಾರೆ. ಅವರಿಗೆ ಶುಭ ಹಾರೈಕೆಗಳು' ಎಂದು ಅವರು ಹೇಳಿದರು.
ಈ ಬಾರಿ ಲೆಹೆರಿಯಾ ಟರ್ಬನ್ ಮೂಲಕ ಮಿಂಚಿದ ಪ್ರಧಾನಿ ಮೋದಿ: ಇದರ ಹಿಂದಿದೆ ಕುತೂಹಲ ಕತೆ!
ಪ್ರಧಾನಿ ಮೋದಿ ಈ ಹಿಂದೆಯೂ ಹಲವು ಬಾರಿ ಒಲಿಂಪಿಕ್ಸ್ ಆಯೋಜನೆ ಬಗ್ಗೆ ಮಾತನಾಡಿದ್ದರು.ಈಗಾಗಲೇ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯು ಕ್ರೀಡಾಕೂಟದ ಆತಿಥ್ಯ ಹಕ್ಕಿಗಾಗಿ ಬಿಡ್ ಕೂಡಾ ಸಲ್ಲಿಸಿದೆ. ಇಂಡೋನೇಷ್ಯಾ, ಟರ್ಕಿ, ಚಿಲಿ ಕೂಡಾ ಬಿಡ್ ಸಲ್ಲಿಸಿದ್ದು, ಸೌದಿ ಅರೇಬಿಯಾ, ಕತಾರ್, ಚೀನಾ ಕೂಡಾ ಆತಿಥ್ಯ ರೇಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಆತಿಥ್ಯ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮುಂದಿನ ವರ್ಷ ಘೋಷಿಸಲಿದೆ. ಭಾರತ ಈ ಮೊದಲು ಜಾಗತಿಕ ಮಟ್ಟದ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿದ್ದು 2010ರಲ್ಲಿ, ಆಗ ನವದೆಹಲಿಯಲ್ಲಿ ಕಾಮನ್‌ವೆಲ್ತ್ ಗೇಮ್ ಆಯೋಜನೆಗೊಂಡಿತ್ತು. ಆದರೆ ಕ್ರೀಡಾಕೂಟದ ಆಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು.
ನೆಟ್ಟಿಗರು ಮನು ಬಾಕರ್ ಜೊತೆ ನೀರಜ್ ಚೋಪ್ರಾ ಮದ್ವೆ ಮಾಡಿಸುತ್ತಿದ್ದರೆ, ಅವರು ಜರ್ಮನಿಗೆ ಹೋಗಿದ್ಯಾಕೆ?
ಸ್ವಾತಂತ್ರೋತ್ಸವದಲ್ಲಿ ಒಲಿಂಪಿಯನ್‌ಗಳು ಭಾಗಿ
ಕೆಂಪುಕೋಟೆಯಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರೋತ್ಸವದಲ್ಲಿ ಭಾರತದ ಒಲಿಂಪಿಯನ್ ಗಳು ಕೂಡಾ ಪಾಲ್ಗೊಂಡರು. 2 ಕಂಚಿನ ಪದಕ ವಿಜೇತ ಶೂಟರ್ ಮನು ಭಾಕರ್, ಸರಬೋತ್ ಸಿಂಗ್, ಪುರುಷರ ಹಾಕಿ ತಂಡದ ನಾಯಕ ಹರ್ಮನ್ ಪ್ರತ್ ಸಿಂಗ್, ಗೋಲ್‌ಕೀಪರ್ ಶ್ರೀಜೇಶ್ ಸೇರಿದಂತೆ ಇತರ ಕೆಲ ಕ್ರೀಡಾಪಟುಗಳು ಸಹ ಈ ವೇಳೆ ಉಪಸ್ಥಿತರಿದ್ದರು.