PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ

By Suvarna News  |  First Published Nov 19, 2021, 9:21 AM IST

* ದೇಶದ ರೈತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು
* ರೈತರ ಅಭಿವೃದ್ದಿಗೆ ನಾವು ಬದ್ದ ಎಂದ ಪ್ರಧಾನಿ ಮೋದಿ
* ವಿವಾದಿತ ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ನರೇಂದ್ರ ಮೋದಿ


ನವದೆಹಲಿ(ನ.19): ದೇಶದ ಹಲವೆಡೆ ನಿರಂತರ ಮಳೆಯಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ದೇಶದ ರೈತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ನಮ್ಮ ಸರ್ಕಾರ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಂಪೂರ್ಣ ಪ್ರಯತ್ನ ಮಾಡುತ್ತಿದೆ. ದೇಶದಲ್ಲಿರುವ ಸಣ್ಣ ರೈತರು ಬಲಿಷ್ಠರಾಗಲು ನಾವು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿದ್ದೇವೆ. ಈ ಹಿಂದಿನ ಸರ್ಕಾರಗಳು ಕೂಡಾ ಈ ಕಾನೂನು ತರಲು ಚಿಂತನೆ ನಡೆಸಿದ್ದವು. ದೇಶದ ಕೋಟಿ ಕೋಟಿ ರೈತರು ಈ ಮೂರು ಕೃಷಿ ಕಾನೂನುಗಳನ್ನು ಸ್ವಾಗತಿಸಿದ್ದಾರೆ. ಆದರೂ, ಪ್ರತಿಭಟನೆಗೆ ಮಣಿದು, ಇಂಥದ್ದೊಂದು ನಿರ್ಧಾರಕ್ಕೆ ಬಂದಿರುವುದಾಗಿ ಭಾವುಕರಾಗಿ ಮೋದಿ ನುಡಿದರು.

"

Latest Videos

undefined

ಪಂಜಾಬ್‌ ರಾಜ್ಯಾದ್ಯಂತ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ನೂತನ ಕೃಷಿ ಕಾಯ್ದೆಗೆ (Farm Bill) ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಕೇಂದ್ರ ಸರ್ಕಾರ ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿತಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಇದರ ಬೆನ್ನಲ್ಲೇ ಗುರು ಪೂರಬ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದು, ಮೂರು ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯಲು ತೀರ್ಮಾನಿಸಿದೆ. ಇದರೊಂದಿಗೆ ವರ್ಷಗಳ ರೈತರ ಹೋರಾಟಕ್ಕೆ ಗೆಲುವು ಸಿಕ್ಕಂತೆ ಆಗಿದೆ.

ನಾವು ರೈತರಿಗೆ ಸಮಜಂಸ ಬೆಲೆಯಲ್ಲಿ ಬಿತ್ತನೆ ಬೀಜಗಳು ಸಿಗುವಂತೆ ನೋಡಿಕೊಂಡಿದ್ದೆವು. ಇದರ ಜತೆಗೆ ಸಣ್ಣ ನೀರಾವರಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೆವು. 22 ಕೋಟಿ ಮಣ್ಣಿನ ಹೆಲ್ತ್‌ ಕಾರ್ಡ್‌ ನೀಡಿದ್ದೇವೆ. ಇದರಿಂದ ಕೃಷಿಯಲ್ಲಿ ಹೆಚ್ಚಿನ ಉತ್ಫಾದನೆ ಸಾಧ್ಯವಾಗಲಿದೆ. ಹೀಗಿದ್ದೂ ನೂತನ ಕೃಷಿ ಕಾಯ್ದೆಯ ಪ್ರಯೋಜನವನ್ನು ಜನರಿಗೆ ಅರ್ಥೈಸಲು ನಾವು ವಿಫಲರಾಗಿದ್ದೇವೆ. ಹೀಗಾಗಿ ನಾವು ಮೂರು ಕೃಷಿ ಕಾಯ್ದೆಯನ್ನು ಹಿಂದೆ ಪಡೆಯಲು ತೀರ್ಮಾನಿಸಿರುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ.

ರೈತರಿಗೆ ನೆರವಾಗುವ ಉದ್ದೇಶದಿಂದ ಹಾಗೂ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ಎಪಿಎಂಸಿ ಕಾಯ್ದೆಯನ್ನು ಮೋದಿ ಸರಕಾರ ಜಾರಿಗೊಳಿಸಲು ಚಿಂತನೆ ನಡೆಸಿತ್ತು. ಆದರೆ, ಒಂದು ವರ್ಗದ ರೈತರಿಂದ ಮೂಡಿ ಬಂದ ವಿರೋಧ ಹಾಗೂ ನಿರಂತರವಾಗಿ ದಿಲ್ಲಿ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳಿಂದ ಕೇಂದ್ರ ಸರಕಾರ ಇಂಥದ್ದೊಂದು ನಿರ್ಧಾರಕ್ಕೆ ಬಂದಿರಬಹುದೆಂದು ವಿಶ್ಲೇಷಸಲಾಗುತ್ತಿದೆ. ಅಲ್ಲದೆ ಬರುವ ಉತ್ತರ ಪ್ರದೇಶ ಹಾಗೂ ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಕೇಂದ್ರ ಸರಕಾರ. ಇಂದು ಪವಿತ್ರ ಗುರುಪೂರಬ್ ದಿನವಾಗಿದ್ದು, ಈ ದಿನವೇ ಗುರು ನಾನಕ್ ಅವರನ್ನು ನೆನಪಿಸಿಕೊಂಡು ಮೋದಿ ಪಂಜಾಬ್‌ನಲ್ಲಿ ಹೆಚ್ಚು ವಿರೋಧ ವ್ಯಕ್ತವಾಗುತ್ತಿರುವ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ.

PM Modi address:ಬ್ಯಾಂಕ್‌ ತಾವು ನೀಡುವವರು ಗ್ರಾಹಕರು ಸ್ವೀಕರಿಸುವವರು ಭಾವನೆ ಬಿಡಬೇಕು; ಪ್ರಧಾನಿ ಮೋದಿ!

ನನ್ನ ಸರಕಾರ ರೈತರಿಗೆ ನೆರವಾಗಲು ಅವರನ್ನು ಸ್ವಾವಲಂಬಿಗಳನ್ನಾಗಿಸುವ ಅನೇಕ ನಿರ್ಧಾರಗಳಿಗೆ ಮುಂದಾಗಿದೆ. ಈ ಕಾಯ್ದೆಯನ್ನು ಅದೇ ಉದ್ದೇಶದಿಂದ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಕೆಲ ವರ್ಗದ ಜನರ ಅರ್ಥ ಮಾಡಿಕೊಳ್ಳಲು ವಿಫಲವಾಗಿ, ದಂಧೆ ಎಬ್ಬಿಸುತ್ತಿದ್ದಾರೆ. ಉರಿಯುತ್ತಿರುವ ದೀಪದಷ್ಟೇ ಕೇಂದ್ರ ಸರಕಾರ ರೈತರಿಗಾಗಿ ಕೆಲಸ ಮಾಡುತ್ತಿದೆ, ಎಂದು ಭಾವುಕರಾಗಿ ಮಾತನಾಡಿರು.

ಭಾರತದಲ್ಲಿ ನೂರು ಕೋಟಿ ಗುರಿ ತಲುಪಿದ ಕೊರೋನಾ ಲಸಿಕೆ

ಪ್ರಧಾನಿ ನರೇಂದ್ರ ಕೊರೋನಾ ವೈರಸ್ ಭಾರತದಲ್ಲಿ ಕಾಣಿಸಿಕೊಂಡ ನಂತರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಕಳೆದ 20 ತಿಂಗಳಲ್ಲಿ ಪ್ರಧಾನಿ ಇದೀಗ 20ನೇ ಬಾರಿ ಭಾಷಣ ಮಾಡುತ್ತಿದ್ದಾರೆ. ಕಳೆದ ಅಕ್ಟೋಬರ್ 22ಕ್ಕೆ ಭಾರತ ನೂರು ಕೋಟಿ ಲಸಿಕೆ ಗುರಿ ತಲುಪಿದ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಾಧನೆಯ ಹಿಂದೆ 130 ಕೋಟಿ ಭಾರತೀಯರ ಕರ್ತವ್ಯ ಶಕ್ತಿಯನ್ನು ಕೊಂಡಾಡಿ, ಇದರ ಯಶಸ್ಸನ್ನು ಪ್ರತಿಯೊಬ್ಬ ನಾಗರಿಕರದ್ದು ಎಂದು ಶ್ಲಾಘಿಸಿದ್ದರು. 

ಕೊರೋನಾ ಆರಂಭವಾದಾಗ ಮೊದಲ ಲಾಕ್‌ಡೌನ್ ಘೋಷಿಸಲು, ನಂತರದ ಮತ್ತೊಂದು ಹಂತದ ಲಾಕ್‌ಡೌನ್, ಭಾರತ ಕೊರೋನಾಗೆ ಲಸಿಕೆ ಕಂಡು ಹಿಡಿದಾಗ, ವಿಶೇಷ ಪ್ಯಾಕೇಜ್ ಘೋಷಿಸುವ ಸಂದರ್ಭ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಹುರಿದುಂಬಿಸುವ ಸಲುವಾಗಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಎಲ್ಲವುಕ್ಕಿಂತ ಹೆಚ್ಚು ದೇಶದಲ್ಲಿ ಕೆಲವು ಮೌಲ್ಯದ ನೋಟು ಅಮಾನ್ಯಗೊಂಡಾಗ ಮೋದಿ ಮಾತನಾಡಿದ ಭಾಷಣ ಮಾತ್ರ ಎಲ್ಲರನ್ನೂ ಅಚ್ಚರಿಯಾಗುವಂತೆ ಮಾಡಿದ್ದು. ಅಂದಿನಿಂದಲೂ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆಂದರೆ ಜನರಲ್ಲಿ ಯಾವುದೋ ಆತಂಕ ಸೃಷ್ಟಿಯಾಗುವುದಂತೂ ಸುಳ್ಳಲ್ಲ. 
 

click me!