ಕ್ಲೀನ್ ಬೀಚ್ ಪಟ್ಟಿಯಲ್ಲಿ ಭಾರತದ ಮತ್ತೆರಡು ಸಮುದ್ರ, ಲಕ್ಷದ್ವೀಪಕ್ಕೆ ಮೋದಿ ಅಭಿನಂದನೆ!

By Suvarna News  |  First Published Oct 26, 2022, 8:28 PM IST

ಶುಚಿತ್ವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಹಾಗೂ ಅಭಿಯಾನಗಳನ್ನು ಭಾರತ ನಡೆಸುತ್ತಿದೆ. ಜೊತೆಗೆ ಸಂಪನ್ಮೂಲಗಳ ಸಮಗ್ರ ನಿರ್ವಹಣೆ ಮೂಲಕ ಕರಾವಳಿ ತೀರಗಳನ್ನು ಹಾಗೂ ಜಲಜೀವರಾಶಿಗಳನ್ನು ಸಂರಕ್ಷಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಭಾರತದ ಮತ್ತೆರಡು ಬೀಚ್ ಬ್ಲೂ ಬೀಚ್ ಪಟ್ಟಿಗೆ ಸೇರಿದೆ. ಈ ಸಾಧನೆಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.


ನವದೆಹಲಿ(ಅ.26): ಸ್ವಚ್ಚ ಭಾರತ ಅಭಿಯಾನ ಇಡೀ ಭಾರತದಲ್ಲಿ ವಿಸ್ತರಿಸಲಾಗಿದೆ. ಎಲ್ಲಾ ಕ್ಷೇತ್ರಕ್ಕೂ ಈ ಅಭಿಯಾನವನ್ನು ಕೊಂಡೊಯ್ಯಲಾಗಿದೆ. ಇದರ ಪರಿಣಾಮ ಹಲವು ಪ್ರದೇಶಗಳು ಹಿಂದಂದೂ ಕಾಣದ ರೀತಿಯಲ್ಲಿ ಶುಚಿಯಾಗಿದೆ. ಇತ್ತ ಪ್ರಾಚೀನ ಕರಾವಳಿ ಹಾಗೂ ಸಮುದ್ರ ತೀರಗಳನ್ನು ಸಂರಕ್ಷಿಸವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪರಿಸರ ಕುರಿತು ಸಮೀಕ್ಷೆ ನಡೆಸುವ ಅಂತಾರಾಷ್ಟ್ರೀ ಸಂಸ್ಥೆ ಬ್ಲೂ ಫ್ಲಾಗ್ ಇದೀಗ ಭಾರತದ ಮತ್ತೆರೆಡು ಬೀಚ್‌ನ್ನು ಬ್ಲೂ ಬೀಚ್ ಪಟ್ಟಿಗೆ ಸೇರಿಸಿದೆ. ಲಕ್ಷದ್ವೀಪದ  ಮಿನಿಕಾಯ್ ಥುಂಡಿ ಬೀಚ್. ಮತ್ತು ಕದ್ಮತ್ ಬೀಚ್ ಇದೀಗ ಅತ್ಯಂತ ಶುಚಿ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಭಾರತದ ಒಟ್ಟು 12 ಬೀಚ್‌ಗಳು ಬ್ಲೂ ಬೀಚ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಲಕ್ಷದ್ವೀಪದ ಎರಡು ಬೀಚ್ ಶುಚಿ ಬೀಚ್ ಪಟ್ಟಿಗೆ ಸೇರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಬ್ಲೂ ಬೀಚ್ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್  ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.  ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.  ಭಾರತದ ಲಕ್ಷದ್ವೀಪದಲ್ಲಿರುವ ತುಂಡಿ ಬೀಚ್ ಮತ್ತು ಕಡ್ಮತ್ ಬೀಚ್ ಬ್ಲೂ ಬೀಚ್ ಆಸ್ಕರ್ ಪಟ್ಟಿಯಲ್ಲಿ ಪ್ರವೇಶ ಪಡೆದಿದೆ. ಇದು ವಿಶ್ವದ ಅತ್ಯಂತ ಸ್ವಚ್ಚವಾದ ಬೀಚ್‌ಗೆ ನೀಡಲಾದ ಪರಿಸರ ಲೇಬಲ್ ಎಂದು ಭೂಪೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.  

Tap to resize

Latest Videos

 

ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್‍ಗೆ ಮೂರನೇ ಬಾರಿ 'ಬ್ಲೂಫ್ಲ್ಯಾಗ್' ವಿಶ್ವಮಾನ್ಯತೆ

ಭೂಪೇಂದ್ರ ಯಾದವ್ ಟ್ವೀಟ್‌ ಬೆನ್ನಲ್ಲೇ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ.  ಇದು ಮಹತ್ವದ ಸಾಧನೆಯಾಗಿದೆ. ಈ ವಿಶೇಷ ಸಾಧನೆಗಾಗಿ ಲಕ್ಷದ್ವೀಪದ ಜನರಿಗೆ ಅಭಿನಂದನೆ. ಭಾರತದ ಕಡಲತೀರವು ಗಮನಾರ್ಹವಾಗಿದೆ.  ಜನರಲ್ಲಿ ಮತ್ತಷ್ಟು ಕರಾವಳಿ ಶುಚಿತ್ವದ ಬಗ್ಗೆ ಹೆಚ್ಚಿನ ಉತ್ಸಾಹವಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸ್ವಚ್ಚ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಭಾರತ ಬೀಚ್ ವಿವರ:
ಸದ್ಯ ಲಕ್ಷದ್ವೀಪದ ಎರಡು ಬೀಚ್ ಬ್ಲೂ ಬೀಚ್ ಪಟ್ಟಿಗೆ ಸೇರಿಕೊಂಡಿದೆ. ಇದಕ್ಕೂ ಮೊದಲು ಭಾರತದ 10 ಬೀಚ್‌ಗಳು ಅತ್ಯಂತ ಸ್ವಚ್ಚ ಬೀಚ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಜರಾತ್‌ನ ಶಿವರಾಜಪುರ ಬೀಚ್, ಕಾಸರಗೋಡಿನ ಗೋಗ್ಲಾ ದಿಯು, ಕರ್ನಾಟಕದ ಪಡುಬಿದ್ರಿ ಬೀಚ್, ಕೇರಳದ ಕಪ್ಪಾಡ್ ಬೀಚ್, ಆಂಧ್ರಪ್ರದೇಶದ ರುಶಿಕೊಂಡ ಬೀಚ್, ಒಡಿಶಾದ ಗೋಲ್ಡನ್ ಬೀಚ್, ಅಂಡಮಾನ್ ಮತ್ತು ನಿಕೋಬಾರ್‌ನ ರಾಧಾನಗರ ಬೀಚ್, ತಮಿಳುನಾಡಿನ ಕೋವಲಂ ಬೀಚ್, ಪುದುಚೇರಿಯ ಈಡನ್ ಬೀಚ್ ವಿಶ್ವದ ಅತ್ಯಂತ ಸ್ವಚ್ಚ ಬೀಚ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 

ಉಡುಪಿಯ ವರ್ಲ್ಡ್ ನಂಬರ್ ವನ್ ಸೈಕ್ಲಿಂಗ್ ಬೀಚ್‌ಗೆ ವಿದೇಶಿಗರ ಮೆಚ್ಚುಗೆ
 

click me!