ನಿಮ್ಮ ಪ್ರಯಾಣ ಸ್ಪೂರ್ತಿದಾಯಕ; ಝೋಮ್ಯಾಟೋ ಸಿಇಒ ಸಾಧನೆ ಹೊಗಳಿದ ಪ್ರಧಾನಿ ಮೋದಿ

By Reshma Rao  |  First Published May 22, 2024, 2:37 PM IST

ಝೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಸಾಧನೆಗೆ ಪ್ರಧಾನಿ ಪ್ರಶಂಸೆ
ಉಪನಾಮಕ್ಕಿಂತ ಕಠಿಣ ಪರಿಶ್ರಮವೇ ದೊಡ್ಡದು ಎಂದ ಮೋದಿ
ಝೊಮ್ಯಾಟೋ ಯಶಸ್ಸಿಗೆ ಸರ್ಕಾರದ ಉಪಕ್ರಮಗಳೇ ಕಾರಣ ಎಂದ ಗೋಯಲ್


'ಯಶಸ್ಸಿಗೆ ಸರ್‌ನೇಮ್ ಮುಖ್ಯವಲ್ಲ, ಪರಿಶ್ರಮವಷ್ಟೇ ಮುಖ್ಯ' ಎನ್ನುತ್ತಲೇ ಪ್ರಧಾನಿ ನರೇಂದ್ರ ಮೋದಿ ಝೊಮಾಟೊ ಸಿಇಒ ದೀಪಿಂದರ್ ಗೋಯಲ್‌ ಸಾಧನಯನ್ನು ಶ್ಲಾಘಿಸಿದ್ದಾರೆ.

ಪ್ರಧಾನಿಯ ಈ ಟ್ವೀಟ್ ಗೋಯಲ್ ಅವರ ವೈರಲ್ ವೀಡಿಯೊಗೆ ಪ್ರತಿಕ್ರಿಯೆಯಾಗಿ ಬಂದಿದೆ. ಈ ವಿಡಿಯೋದಲ್ಲಿ ಗೋಯಲ್ ತಮ್ಮ ಆರಂಭಿಕ ಪ್ರಯಾಣ ಮತ್ತು ಆರಂಭದಲ್ಲಿ ಎದುರಿಸಿದ ಗೆಲುವಿನ ಕುರಿತ ಸಂದೇಹಗಳ ಬಗ್ಗೆ ಮಾತಾಡಿದ್ದಾರೆ. 

Latest Videos

undefined

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ದೀಪಿಂದರ್ ಗೋಯಲ್ ಅವರು Zomatoದ ಆರಂಭದ ಬಗ್ಗೆ ಆಳವಾದ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಶೀಘ್ರವಾಗಿ ವೈರಲ್ ಆಗಿದೆ. 

ಜೆಫ್ ಬೆಜೋಸ್‌ನ ನೌಕೆಯಲ್ಲಿ‌ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯನಾಗಿ ಇತಿಹಾಸ ನಿರ್ಮಿಸಿದ ಗೋಪಿಚಂದ್
 

ಕ್ಲಿಪ್‌ನಲ್ಲಿ, ಗೋಯಲ್ 16 ವರ್ಷಗಳ ಹಿಂದೆ, 2008ರಲ್ಲಿ ಝೊಮ್ಯಾಟೊವನ್ನು ಪ್ರಾರಂಭಿಸುವ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅವರ ತಂದೆಯ ಆರಂಭಿಕ ಪ್ರತಿಕ್ರಿಯೆಯು ಅನುಮಾನ ಮತ್ತು ಕಾಳಜಿಯಿಂದ ಕೂಡಿತ್ತು. ಸ್ಟಾರ್ಟಪ್ ಪ್ರಾರಂಭಿಸುತ್ತೇನೆಂದಾಗ ಗೋಯಲ್ ಅವರ ತಂದೆ ಅವರನ್ನು ಕೇಳಿದರು, 'ಜಾನ್ತಾ ಹೈ ತೇರಾ ಬಾಪ್ ಕೌನ್ ಹೈ?'(ನಿಮ್ಮ ತಂದೆ ಯಾರೆಂದು ತಿಳಿದಿದೆಯೇ?). ಅಂದರೆ ಸ್ಟಾರ್ಟಪ್ ತಮ್ಮಂಥ ಜನಸಾಮಾನ್ಯರಿಗಲ್ಲ ಎಂಬುದು ಅವರ ಇಂಗಿತವಾಗಿತ್ತು. 

ಪಂಜಾಬ್‌ನ ಸಣ್ಣ-ಪಟ್ಟಣದ ಹುಡುಗನಾಗಿದ್ದ ಗೋಯಲ್ ಸ್ಟಾರ್ಟಪ್ ಜಗತ್ತಿನಲ್ಲಿ ಯಶಸ್ವಿಯಾಗುವ ಅವರ ಸಾಮರ್ಥ್ಯವನ್ನು ಪ್ರಶ್ನಿಸುವ ಸಾಮಾನ್ಯ ಮನಸ್ಥಿತಿಯನ್ನು ಎದುರಿಸಿದರು. 

'ಆದರೆ ಈ ಸರ್ಕಾರ ಮತ್ತು ಅವರ ಉಪಕ್ರಮಗಳು ನನ್ನಂತಹ ಸಣ್ಣ ಪಟ್ಟಣದ ಹುಡುಗನಿಗೆ ಝೊಮ್ಯಾಟೊವನ್ನು ನಿರ್ಮಿಸಲು ಅನುವು ಮಾಡಿಕೊಟ್ಟವು, ಅದು ಇಂದು ಲಕ್ಷಗಟ್ಟಲೆ ಜನರಿಗೆ ಉದ್ಯೋಗ ನೀಡುತ್ತಿದೆ!' ಎಂದು ಹೇಳಿದ್ದಾರೆ. 

ಪತ್ನಿ ಮೇಲೆ ರೇಪ್ ಮಾಡುವ, ನಿಮಿರು ದೌರ್ಬಲ್ಯದಿಂದ ಬಳಲುವ ಟ್ರಂಪ್; ಬಯೋಪಿಕ್ ವಿರುದ್ಧ ಸಿಡಿದು ಬಿದ್ದ ಅಮೆರಿಕ ಮಾಜಿ ಅಧ್ಯಕ್ಷ
 

ಈ ಕ್ಲಿಪ್ ಅನ್ನು ಮರುಟ್ವೀಟ್ ಮಾಡಿದ ಪ್ರಧಾನಿ ಮೋದಿ, 'ಇಂದಿನ ಭಾರತದಲ್ಲಿ, ಒಬ್ಬರ ಉಪನಾಮವು ಅಪ್ರಸ್ತುತವಾಗುತ್ತದೆ. ಕಠಿಣ ಪರಿಶ್ರಮ ಮುಖ್ಯ. ನಿಮ್ಮ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ದೀಪಿಂದರ್ ಗೋಯಲ್! ಇದು ಅಸಂಖ್ಯಾತ ಯುವಕರನ್ನು ಅವರ ಉದ್ಯಮಶೀಲತೆಯ ಕನಸುಗಳನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ಸ್ಟಾರ್ಟಪ್‌ಗಳು ಅಭಿವೃದ್ಧಿ ಹೊಂದಲು ಸರಿಯಾದ ವಾತಾವರಣವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ,' ಎಂದು ಬರೆದಿದ್ದಾರೆ. 

ಪ್ರಧಾನ ಮಂತ್ರಿಯವರ ಹೊಗಳಿಕೆಗೆ ಪ್ರತಿಕ್ರಿಯಿಸಿದ ಗೋಯಲ್, 'ನಿಮ್ಮ ಮಾತುಗಳಿಗೆ ಧನ್ಯವಾದಗಳು, ಸರ್. ಇದು ಖಂಡಿತವಾಗಿಯೂ ನಮ್ಮನ್ನು ಇನ್ನಷ್ಟು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಮತ್ತು ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ' ಎಂದು ಹೇಳಿದ್ದಾರೆ.

2008ರಲ್ಲಿ Zomato ಅನ್ನು ಪ್ರಾರಂಭಿಸಿದ ನಂತರ, ದೀಪಿಂದರ್ ಗೋಯಲ್ ತ್ವರಿತವಾಗಿ ಅದನ್ನು ಆಹಾರ ವಿತರಣಾ ಸಂಸ್ಥೆಯ ದೈತ್ಯವಾಗಿ ಬೆಳೆಸಿದರು. ಅವರು 1000ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ Zomato ವಿಸ್ತರಣೆಯ ಮೇಲ್ವಿಚಾರಣೆ ವಹಿಸಿದರು.

IIT ದೆಹಲಿ ಪದವೀಧರರಾಗಿರುವ ಗೋಯಲ್ ಅವರು ಇತ್ತೀಚೆಗೆ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 2 ರಲ್ಲಿ ಶಾರ್ಕ್ ಆಗಿ ಕಾಣಿಸಿಕೊಂಡರು. ಅವರು ಮಾಜಿ ಮಾಡೆಲ್ ಮತ್ತು ಉದ್ಯಮಿ ಗ್ರೀಸಿಯಾ ಮುನೋಜ್ ಅವರೊಂದಿಗಿನ ವಿವಾಹದಿಂದ ಸುದ್ದಿಯಲ್ಲಿದ್ದಾರೆ.

click me!