ಪ್ರಧಾನಿ ಮೋದಿ ಹುಟ್ಟುಹಬ್ಬ : ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ

Published : Sep 17, 2023, 09:24 AM IST
ಪ್ರಧಾನಿ ಮೋದಿ ಹುಟ್ಟುಹಬ್ಬ : ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ

ಸಾರಾಂಶ

ದೇಶದ ಪ್ರಧಾನಿ, ನರೇಂದ್ರ ಮೋದಿ ಇಂದು ತಮ್ಮ 73ನೇ ವಸಂತಕ್ಕೆ ಕಾಲಿರಿಸಿದ್ದು, ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ.

ನವದೆಹಲಿ: ದೇಶದ ಪ್ರಧಾನಿ, ನರೇಂದ್ರ ಮೋದಿ ಇಂದು ತಮ್ಮ 73ನೇ ವಸಂತಕ್ಕೆ ಕಾಲಿರಿಸಿದ್ದು, ಮೋದಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಲ್ಲಿ ದೇಶದ ನಾಗರಿಕರು ಕೂಡ ಭಾಗವಹಿಸಬಹುದಾಗಿದೆ. ಮೋದಿ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಸೇವಾ ಪಾಕ್ಷಿಕ ಎಂಬ ಅಭಿಯಾನವನ್ನು ಆರಂಭಿಸಿದೆ.  ಇಂದಿನಿಂದ ಅಕ್ಟೋಬರ್ 12ರ ಗಾಂಧಿ ಜಯಂತಿವರೆಗೆ ಈ ಸೇವಾ ಪಾಕ್ಷಿಕದಲ್ಲಿ ದೇಶದ ನಾಗರಿಕರು ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭ  ಹಾರೈಸಬಹುದಾಗಿದೆ. ಇದಕ್ಕಾಗಿ ಬಿಜೆಪಿ ನಮೋ ಆಪ್‌ನಲ್ಲಿ ಪೋರ್ಟಲೊಂದನ್ನು ಆರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕೂಡ ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ. ತನ್ನ ಹುಟ್ಟುಹಬ್ಬದ ಹೆಸರಿನಲ್ಲಿ ಸೇವೆ ಹಾಗೂ ಜನ ಕಲ್ಯಾಣದತ್ತ ತನ್ನ ಒಲವನ್ನು ಮತ್ತಷ್ಟು ಧೃಡವಾಗಿಸಿಕೊಳ್ಳಲು ಪ್ರಧಾನಿ ಮುಂದಾಗಿದ್ದಾರೆ. ತಮ್ಮ ಈ ಸೇವಾ ಕಾರ್ಯದಲ್ಲಿ ಜನರೂ ಭಾಗಿಯಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಆಶಯ. ಮೋದಿ ಆಶಯದಂತೆ ದೇಶದ ಜನರನ್ನು ಸೇವಾ ಕಾರ್ಯದಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಬಿಜೆಪಿ ಈ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿದೆ.

ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ : ಸೇವಾ ಪಾಕ್ಷಿಕದಲ್ಲಿ ಭಾಗವಹಿಸಿ ನಿ ...

ನೀವು ಮಾಡಬೇಕಾಗಿದ್ದೇನು? 

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಮೋ ಆಪ್ (Namo App) ಡೌನ್‌ಲೋಡ್ ಮಾಡಿ, ಬಳಿಕ ನಿಮ್ಮ ಮೊಬೈಲ್ ಫೋನ್ ನಂಬರ್ ಹಾಗೂ ಇ-ಮೇಲ್ ವಿಳಾಸ ಹಾಕಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ, ನಂತರ ಅಲ್ಲಿರುವ ಸೇವಾ ಪಾಕ್ಷಿಕ ಎಂಬ ಪೋಸ್ಟರ್‌ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ಹಲವು ರೀತಿಯಲ್ಲಿ ಪ್ರಧಾನಿಗೆ ಶುಭ ಹಾರೈಸಬಹುದಾಗಿದೆ. 

ವೀಡಿಯೋ ಮೂಲಕ ಶುಭ ಹಾರೈಕೆ
ಕೋಟ್ಯಾಂತರ ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಿದ್ದಾರೆ. ನಮೋ ಆಪ್ ಬಳಸಿ ವೀಡಿಯೋ ರೆಕಾರ್ಡ್‌ (video Record) ಮಾಡಿ ಈ ಬಾರಿ ದೇಶದ ನಾಗರಿಕರು ವಿಶ್ ಮಾಡಬಹುದಾಗಿದೆ. ಈ ವೀಡಿಯೋಗಳು ನಮೋ ಆಪ್‌ನ ವಾಲ್‌ನಲ್ಲಿ ಕಾಣಿಸಿಕೊಳ್ಳಲಿದೆ. 

ಫ್ಯಾಮಿಲಿ ಕಾರ್ಡ್‌
ಇಡೀ ಕುಟುಂಬವೇ ಜೊತೆಯಾಗಿ ನರೇಂದ್ರ ಮೋದಿಯವರಿಗೆ ಫ್ಯಾಮಿಲಿ ಕಾರ್ಡ್ (Family Card) ಬಳಸಿ ಒಮ್ಮೆಗೆ ವಿಶ್ ಮಾಡಬಹುದಾಗಿದೆ. ಈ ಕಾರ್ಡ್‌ನಲ್ಲಿ ಪ್ರಧಾನಿ ಮೋದಿಗೆ ನೀವು ಮಾಡುವ ವಿಶ್‌ನ್ನು ಬರೆದು ಅಪ್‌ಲೋಡ್ ಮಾಡಬಹುದಾಗಿದೆ. ಇದರ ಜೊತೆ ನೀವು ನಿಮ್ಮ ಗೆಳೆಯರನ್ನು ಕೂಡ ಪ್ರಧಾನಿಗೆ ವಿಶ್ ಮಾಡುವಂತೆ ಮನಿ ಮಾಡಬಹುದು. 

ಕೋಲಾರ: ಕುರುಡುಮಲೆಯಲ್ಲಿಂದು ಮೋದಿ ಜನ್ಮದಿನ ನಿಮಿತ್ತ ಯಡಿಯೂರಪ್ಪ ಪೂಜೆ ...

ವರ್ಚುವಲ್ (ಆನ್‌ಲೈನ್‌) ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಜೀವನಗಾಥೆಗೆ ಸಂಬಂಧಿಸಿದ ಯಾವುದಾದರು ಕೆಲ ತುಣುಕುಗಳನ್ನು ಬಳಸಿ ಈ ವರ್ಚುವಲ್ ಶೋವನ್ನು (Virtual Show) ರೆಕಾರ್ಡ್ ಮಾಡಿ ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಬಹುದು.

ಸೇವೆಯ ಮೂಲಕ ಪ್ರಧಾನಿಗೆ ಹುಟ್ಟುಹಬ್ಬದ ಕೊಡುಗೆ
ಪ್ರಧಾನಿ ಹುಟ್ಟುಹಬ್ಬಕ್ಕೆ ವಸ್ತುಗಳ ಗಿಫ್ಟ್ ನೀಡುವ ಬದಲಾಗಿ ತಾವು ಪ್ರಧಾನಿ ಹೆಸರಲ್ಲಿ ಯಾವುದಾದರು ಸೇವಾ ಕಾರ್ಯ ಮಾಡುವ ಮೂಲಕ ಅದನ್ನೇ ಗಿಫ್ಟ್ ನೀಡಬಹುದಾಗಿದೆ. ತಾವು ಮಾಡಿದ ಸೇವಾ ಚಟುವಟಿಕೆಗಳ ಫೋಟೋ ತೆಗೆದು ಕಳುಹಿಸಬಹುದಾಗಿದೆ. ಅದಕ್ಕಾಗಿ ಹಲವು ನಿಗದಿತ ಸೇವೆಗಳನ್ನು ಪೋರ್ಟಲ್‌ನಲ್ಲಿ ಉಲ್ಲೇಖಿಸಲಾಗಿದೆ. 

1. ಆತ್ಮನಿರ್ಭರ
ದೇಶ ಸ್ವಾವಲಂಬಿಯಾಗುವತ್ತ ಹೆಜ್ಜೆ ಇಡಲು ಸಹಕಾರಿಯಾಗುವ ಯಾವುದಾದರು ಕಾರ್ಯದ ವೀಡಿಯೋ

2.ರಕ್ತದಾನ
ರಕ್ತದಾನ ಮಾಡುವ ಮೂಲಕ ಒಂದು  ಅಮೂಲ್ಯ ಜೀವವನ್ನು ಉಳಿಸುವ ಕಾರ್ಯದ ವೀಡಿಯೋ

3.ಮಳೆ ನೀರಿನ ಸಂಗ್ರಹ
ನೀರು ಈ ಪ್ರಪಂಚಕ್ಕೆ ಅತೀ ಅಮೂಲ್ಯವಾದುದು, ಮಳೆ ನೀರನ್ನು ಸಂಗ್ರಹಿಸುವುದರಿಂದ ನಾವು ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡಬಹುದಾಗಿದೆ.
ಇದರ ಫೋಟೋ ವೀಡಿಯೋಗಳನ್ನು ಶೇರ್ ಮಾಡಬಹುದಾಗಿದೆ.

4. ಡಿಜಿಟಲ್ ಇಂಡಿಯಾವನ್ನು ಪ್ರೋತ್ಸಾಹಿಸುವ ಕಾರ್ಯ
ಜೀವನದಲ್ಲಿ ಡಿಜಿಟಲ್ ಇಂಡಿಯಾವನ್ನು ಪ್ರೋತ್ಸಾಹಿಸುವ ಹಾಗೂ ಇತರರನ್ನು ಬಳಸುವಂತೆ ಮನವಿ ಮಾಡುವ ಕಾರ್ಯದಲ್ಲಿ ಭಾಗಿಯಾಗುವ ಕ್ಷಣಗಳು

5. ಒಂದು ಭಾರತ ಶ್ರೇಷ್ಠ ಭಾರತ
ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದೆ ಎಂಬ ಪರಿಕಲ್ಪನೆ ಹಾಗೂ ದೇಶದ ಐಕ್ಯತೆಯನ್ನು ಸಾರುವ ವೀಡಿಯೋಗಳು

6. ಇರುವುದೊಂದೆ ಭೂಮಿ
ಭೂಮಿಗೆ ಈ ಪರಿಸರಕ್ಕೆ ಹಾನಿಯಾಗದಂತೆ ಬದುಕುವುದು ಇದಕ್ಕಾಗಿ ತಮ್ಮ ಜೀವನ ಶೈಲಿಯನ್ನು ಬದಲಿಸುವ ಕಾರ್ಯ, 

7.ಸ್ವಚ್ಛ ಭಾರತ
ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತ ಕಾರ್ಯದಲ್ಲಿ ತೊಡಗುವ ದೃಶ್ಯಗಳು

8. ಟಿಬಿ ಮುಕ್ತ ಭಾರತ
ಟಿಬಿಯಿಂದ ಬಳಲುವ ವ್ಯಕ್ತಿಗೆ ಸಹಾಯ ಮಾಡುವುದು. ಆತನ ಆರೋಗ್ಯ ಸುಧಾರಣೆಗೆ ಔಷಧಿ, ಪ್ರೋಟಿನ್‌ಗಳನ್ನು ನೀಡುವುದು, ಹಾಗೂ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದು

9. ವೋಕಲ್ ಫಾರ್ ಲೋಕಲ್

ಸ್ಥಳೀಯ ವಿಚಾರಗಳಿಗೆ ಧ್ವನಿಯಾಗುವುದು, ಸ್ಥಳೀಯವಾಗಿ ನಿರ್ಮಿಸಿದ ವಸ್ತುಗಳನ್ನು ಸ್ಥಳೀಯ ವ್ಯಕ್ತಿಗಳಿಂದಲೇ ಖರೀದಿಸುವ ಮೂಲಕ ಸ್ಥಳೀಯ ಜನರಿಗೆ ಆರ್ಥಿಕವಾಗಿ ನೆರವಾಗುವುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್