ಬದಲಾಗದ ಮೋದಿ ಸ್ಟೈಲ್: ಬಂದೇಜ್ ಪೇಟಾ, ಕುರ್ತಾ ಬ್ಯೂಟಿಫುಲ್!

Suvarna News   | Asianet News
Published : Jan 26, 2020, 06:20 PM IST
ಬದಲಾಗದ ಮೋದಿ ಸ್ಟೈಲ್: ಬಂದೇಜ್ ಪೇಟಾ, ಕುರ್ತಾ ಬ್ಯೂಟಿಫುಲ್!

ಸಾರಾಂಶ

71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ|  ರಾಜಪಥದಲ್ಲಿ ಸಶಸ್ತ್ರಪಡೆಗಳ ಪಥಸಂಚಲನ ಅಂತ್ಯ| ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಪ್ರಧಾನಿ ಮೋದಿ| ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ| ಕೇಸರಿ ಬಣ್ಣದ ಬಂದೇಜ್’ನಲ್ಲಿ ಕಂಗೊಳಿಸಿದ ಪ್ರಧಾನಿ ಮೋದಿ|

ನವದೆಹಲಿ(ಜ.26): 71ನೇ ಗಣರಾಜ್ಯೋತ್ಸವಕ್ಕೆ ಅಧಿಕೃತ ತೆರೆ ಬಿದ್ದಿದ್ದು, ರಾಜಪಥದಲ್ಲಿ ಸಶಸ್ತ್ರಪಡೆಗಳ ಪಥಸಂಚಲನ ಕೊನೆಗೊಂಡಿದೆ. ಈ ಮಧ್ಯೆ ಪ್ರಧಾನಿ ಮೋದಿ ಗಣರಾಜ್ಯೋತ್ಸವಕ್ಕೆ ತೊಟ್ಟಿದ ಬಟ್ಟೆಯ ಚರ್ಚೆ ಜೋರಾಗಿದೆ.

ಪ್ರಧಾನಿ ಮೋದಿ ಪ್ರತಿ ಬಾರಿಯಂತೆ ಈ ಬಾರಿಯೂ ಸಾಂಪ್ರದಾಯಿಕ ಪೇಟ, ಕುರ್ತಾ ಹಾಗೂ ಜಾಕೆಟ್ ಧರಿಸಿದ್ದು, ಪ್ರಮುಖವಾಗಿ ಬಂದೇಜ್ ಎಂದು ಕರೆಯಲ್ಪಡುವ ಉದ್ದನೆಯ ಪೇಟ ಗಮನ ಸೆಳೆದಿದೆ.

ಇಂದು ಬೆಳಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಸಾಮಪ್ರದಾಯಿಕ ಕೇಸರಿ ಬಂದೇಜ್’ನ್ನು ಧರಿಸಿದ್ದು, ಇದು ರಾಜಸ್ಥಾನ ಹಾಗೂ ಗುಜರಾತ್’ನಲ್ಲಿ ಜನಪ್ರಿಯವಾಗಿದೆ.

ಜವಾಬ್ದಾರಿ ಮುಗಿಸಿ ಜನರತ್ತ ಬಂದ ಪ್ರಧಾನಿ: ಕೈಬೀಸಿ ಸಂಭ್ರಮಿಸಿದ ಜನತೆ!

ಕಳೆದ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆಯಂದೂ ಪ್ರಧಾನಿ ಮೋದಿ ತಮ್ಮ ತಲೆಗೆ ಇದೇ ಬಂದೇಜ್’ನ್ನು ಧರಿಸಿದ್ದರು. ಈ ಹಿಂದಿನ ಹಲವು ರಾಷ್ಟ್ರೀಯ ಹಬ್ಬಗಳಲ್ಲಿ ಪ್ರಧಾನಿ ಮೋದಿ ಸಾಂಪ್ರದಾಯಿಕ ಉಡುಗೆಯನ್ನೇ ತೊಟ್ಟಿರುವುದು ಗಮನಾರ್ಹ.

ಇಷ್ಟೇ ಅಲ್ಲದೇ ತಮ್ಮ ಎಂದಿನ ಕುರ್ತಾ ಹಾಗೂ ಅದರ ಮೇಲೆ ಜಾಕೆಟ್ ಧರಿಸಿದ್ದ ಪ್ರಧಾನಿ ಮೋದಿ, ಕೇಸರಿ ಬಣ್ಣದ ಬಂದೇಜ್’ನೊಂದಿಗೆ ರಾಜಪಥದಲ್ಲಿ ಕಂಗೊಳಿಸುತ್ತಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು