ರಿಬ್ಬನ್ ಬಿಚ್ಚಿ ಜೇಬಿನಲ್ಲಿಟ್ಟು ಅಂಚೆ ಚೀಟಿ ಬಿಡುಗಡೆ, ಮೋದಿ ಸ್ವಚ್ಚ ಭಾರತ ನಡೆಗೆ ಭಾರಿ ಮೆಚ್ಚುಗೆ!

By Chethan Kumar  |  First Published Aug 31, 2024, 3:53 PM IST

ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಸ್ಮರಣಿ, ಪುಸ್ತಕ ಬಿಡುಗಡೆ ವೇಳೆ ರಿಬ್ಬನ್ ಬಿಚ್ಚಿ ಅಲ್ಲೆ ಬೀಸಾಡದೆ, ಅಥವಾ ಇತರರ ಕೈಗೆ ನೀಡದೆ ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅಂಚೆ ಚೀಟಿ ಬಿಡುಗಡೆ ವೇಳೆ ರಿಬ್ಬನ್ ಜೇಬಿನಲ್ಲಿಟ್ಟಿದ್ದಾರೆ. ಮೋದಿ ಸ್ವಚ್ಛ ಭಾರತ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 


ನವದೆಹಲಿ(ಆ.31) ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಜಿಲ್ಲಾ ನ್ಯಾಯಂಗ ಕಾರ್ಯಕ್ರಮದ ಒಂದು ವಿಡಿಯೋ ಇದೀಗ ಭಾರಿ ಹರಿದಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಾರ್ಯಕ್ರಮದಲ್ಲಿ 75ನೇ ಸುಪ್ರೀಂ ಕೋರ್ಟ್ ವರ್ಷಾಚರಣೆ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮೋದಿ ಅಂಚೆ ಚೀಟಿ ಪುಸ್ತಕ ಮೇಲಿನ ರಿಬ್ಬನ್ ಬಿಚ್ಚಿ ಅಲ್ಲೆ ಎಸೆಯಲಿಲ್ಲ. ಇತ್ತ ಯಾರಿಗೂ ನೀಡಲಿಲ್ಲ. ಬದಲಾಗಿ ಮೋದಿ ಈ ರಿಬ್ಬನ್ ಬಿಚ್ಚಿ ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಪ್ರಧಾನಿ ಮೋದಿ ಸ್ವಚ್ಛ ಭಾರತ ನಡೆ ಯಾವಾಗಲೂ ಜಾಗೃತವಾಗಿರುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ 75ನೇ ವರ್ಷಾಚರಣೆಯ ಸಂಭ್ರಮದಲ್ಲಿ ದೇಶದ ನ್ಯಾಯಾಂಗ ಹಲವು ಕಾರ್ಯಕ್ರಮಗಳು, ಕಾನ್ಫರೆನ್ಸ್ ಹಮ್ಮಿಕೊಂಡಿದೆ. ಈ ಪೈಕಿ ಇಂದು  ಸುಪ್ರೀಂ ಕೋರ್ಟ್‌ನಲ್ಲಿ ನಡೆದ  ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಭಾರತದ ಸುದೀರ್ಘ ಸುಪ್ರೀಂ ಕೋರ್ಟ್ ಪಯಣ, ಐತಿಹಾಸಿಕ ತೀರ್ಪು ಸೇರಿದಂತೆ ಹಲವು ವಿಚಾರಗಳ ಚರ್ಚೆ ಮಂಥನಗಳು ನಡೆಯುತ್ತಿದೆ. ಈ ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿ ಸುಪ್ರೀಂ ಕೋರ್ಟ್ ಅಂಚೇ ಚೀಟಿ ಬಿಡುಗಡೆ ಮಾಡಿದ್ದಾರೆ.  

Tap to resize

Latest Videos

ಮೋದಿ ಪ್ರಧಾನಿಯಾದ ನಂತರ ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಂತಿದೆ: ಹೆಚ್‌ಡಿ ದೇವೇಗೌಡ

ವೇದಿಕೆ ಮೇಲಿದ್ದ ಪ್ರಧಾನಿ ಮೋದಿ ಹಾಗೂ CJI ಡಿವೈ ಚಂದ್ರಚೂಡ್ ಇಬ್ಬರಿಗೆ ಅಂಚೆ ಚೀಟಿ ಪುಸ್ತಕ ನೀಡಲಾಗಿದೆ. ಈ ಪೈಕಿ ಮೋದಿ ಪುಸ್ತಕದ ರಿಬ್ಬನ್ ಬಿಚ್ಚಿ ಬಿಡುಗಡೆ ಮಾಡಬೇಕಿತ್ತು. ರಿಬ್ಬನ್ ಬಿಚ್ಚುತ್ತಿದ್ದಂತೆ ಡಿವೈ ಚಂದ್ರಚೂಡ್, ರಿಬ್ಬನ್ ಪಡೆಯಲು ಮುಂದಾಗಿದ್ದಾರೆ. ಆದರೆ ಮೋದಿ ರಿಬ್ಬನ್ ಬಿಚ್ಚಿ ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಬಳಿಕ ಅಂಚೆ ಚೀಟಿ ಬಿಡುಗಡೆ ಮಾಡಿ ಸಭೆ ಹಾಗೂ ಮಾಧ್ಯಮಗಳಿಗೆ ತೋರಿಸಿದ್ದಾರೆ.

 

Notice how PM Modi didn't throw the Ribbon.

He put it in his Pocket.

He leads by example on how to make India a Swachh Bharat. pic.twitter.com/zqO73brfn7

— Ankur Singh (@iAnkurSingh)

 

ಸ್ವಚ್ಚ ಭಾರತ ಅಭಿಯಾನವನ್ನು ಮೋದಿ ಆರಂಭಿಸಿ ದೇಶವನ್ನು ಸ್ವಚ್ಛತೆಯ ಕಡೆಗೆ ಗಮನ ಕೇಂದ್ರಿಕರಿಸುವಂತೆ ಮಾಡಿದ್ದಾರೆ. ಇದು ಕೇವಲ ಅಭಿಯಾನವಾಗಿ ಮೋದಿ ತೆಗೆದುಕೊಂಡಿಲ್ಲ. ಅಕ್ಷರಶಃ ಇದನ್ನು ಪಾಲಿಸುತ್ತಾರೆ. ಎಲ್ಲೆಂದರಲ್ಲಿ ಕಸ ಎಸೆಯುವ ಪದ್ಧತಿಗೆ ಬ್ರೇಕ್ ಹಾಕಲು ಸ್ವತಃ ಮೋದಿಯೇ ಮಾದರಿಯಾಗಿದ್ದರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಹಲವು ಕಾರ್ಯಕ್ರಮಗಳಲ್ಲಿ ಮೋದಿ ಈ ರೀತಿ ರಿಬ್ಬನ್ ಹಾಗೂ ಇತರ ವಸ್ತುಗಳನ್ನು ಜೇಬಿನಲ್ಲಿಟ್ಟುಕೊಂಡು ಬಳಿಕ ಕಸದ ತೊಟ್ಟಿಗೆ ಹಾಕಿದ ಉದಾಹರಣೆಗಳಿವೆ. 

ಮಹಾರಾಷ್ಟ್ರದ ವಾಧ್ವಾನ್‌ಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ: ಭಾರತದ ಅತಿದೊಡ್ಡ ಬಂದರು ಹೀಗಿರಲಿದೆ!
 

click me!