
ನವದೆಹಲಿ ( ಜುಲೈ 6, 2023): ಜುಲೈ 7 ರಂದು ಪ್ರಧಾನಿ ಮೋದಿ ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಪೈಕಿ, 2.8 ಕಿಮೀನ 6 ಪಥದ ಸುರಂಗವನ್ನು ಸಹ ಅನಾವರಣಗೊಳಿಸಲಿದ್ದಾರೆ. ಈ ಸುರಂಗ ಮಾರ್ಗ ವಿಶೇಷವಾದದ್ದು. ಏಕೆ ಅಂತೀರಾ..? ಇದರಿಂದ ಪ್ರಾಣಿಗಳ ಚಲನೆಗೆ ಸಹಕಾರಿಯಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜುಲೈ 7 ರಂದು ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದ್ದು, ಈ ವೇಳೆ 6 ಪಥಗಳ ಗ್ರೀನ್‌ಫೀಲ್ಡ್ ರಾಯ್‌ಪುರ - ವಿಶಾಖಪಟ್ಟಣಂ ಕಾರಿಡಾರ್‌ನ ಛತ್ತೀಸ್‌ಗಢ ವಿಭಾಗದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಅಂಶವೆಂದರೆ ಉದಾಂತಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅನಿಯಂತ್ರಿತ ವನ್ಯಜೀವಿ ಚಲನೆಗಾಗಿ 27 ಪ್ರಾಣಿಗಳ ಪಾಸ್‌ಗಳು ಮತ್ತು 17 ಮಂಗಗಳ ಕ್ಯಾನೋಪಿಗಳೊಂದಿಗೆ 2.8 ಕಿಮೀ ಉದ್ದದ ಆರು-ಪಥದ ಸುರಂಗ.
ಇದನ್ನು ಓದಿ: Breaking: ಮಹಾರಾಷ್ಟ್ರದಲ್ಲಿ ಮತ್ತೊಂದು ಭೀಕರ ಅಪಘಾತ: ಯಮ ಸ್ವರೂಪಿ ಟ್ರಕ್‌ಗೆ 15 ಮಂದಿ ಬಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ
ಹೆದ್ದಾರಿಗಳ ಅಭಿವೃದ್ಧಿಯಿಂದ ವನ್ಯಜೀವಿಗಳಿಗೆ ಹೆಚ್ಚು ತೊಂದರೆಯಾಗದಂತೆ ಮಾಡುವ ಪ್ರಧಾನಿ ಮೋದಿಯವರ ದೃಷ್ಟಿಗೆ ಈ ಸುರಂಗ ಹೊಂದಿಕೆಯಾಗುತ್ತದೆ. ಹಾಗೆ, ಪ್ರಧಾನಮಂತ್ರಿ ಮೋದಿಯವರ ಅಡಿಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳು / ಎಕ್ಸ್‌ಪ್ರೆಸ್‌ವೇಗಳ ಅಭಿವೃದ್ಧಿಯೊಂದಿಗೆ ವನ್ಯಜೀವಿಗಳ ಸುರಕ್ಷಿತ ಮಾರ್ಗ ಮತ್ತು ಅವುಗಳ ವಾಸಕ್ಕೆ ಇಂತಹ ಮೀಸಲಾದ ಮೂಲಸೌಕರ್ಯಗಳ ಅಭಿವೃದ್ಧಿಯು ಭಾರತದಲ್ಲಿ ಹೆದ್ದಾರಿ ಅಭಿವೃದ್ಧಿಯ ವೈಶಿಷ್ಟ್ಯವಾಗಿದೆ ಎಂದೂ ಮೂಲಗಳು ತಿಳಿಸಿವೆ.
ಇದೇ ರೀತಿ, ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಡಿಸೆಂಬರ್ 2021 ರಲ್ಲಿ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು. ಈ ಆರ್ಥಿಕ ಕಾರಿಡಾರ್ ನಿಯಂತ್ರಿತ ವನ್ಯಜೀವಿ ಚಲನೆಗಾಗಿ ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ (12 ಕಿಮೀ) ಅನ್ನು ಹೊಂದಿರುತ್ತದೆ ಎಂದೂ ತಿಳಿದುಬಂದಿದೆ. ಇದು ಸಹ ಪ್ರಧಾನಿ ಮೋದಿಯ ದೃಷ್ಟಿಕೋನಕ್ಕೆ ಒಂದು ನಿದರ್ಶನ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಮಳೆಯ ಅಬ್ಬರಕ್ಕೆ 11 ಜನ ಬಲಿ: ಉತ್ತರಾಖಂಡದಲ್ಲಿ ಭೂಕುಸಿತದಿಂದ ಚಾರ್‌ಧಾಮ್ ಯಾತ್ರೆಗೆ ಅಡ್ಡಿ
ಇನ್ನು, ಇದೇ ರೀತಿ ವನ್ಯಜೀವಿಗಳ ಅನಿಯಂತ್ರಿತ ಚಲನೆಗೆಂದು ಮೀಸಲಾದ ಮೂಲಸೌಕರ್ಯದ ಅನೇಕ ಮೂಲಸೌಕರ್ಯಗಳು ದೇಶದಲ್ಲಿದೆ. ಇವುಗಳ ಪೈಕಿ,
* 4 ಅಂಡರ್‌ಪಾಸ್‌ಗಳೊಂದಿಗೆ 11.6 ಕಿಮೀ ಎಲಿವೇಟೆಡ್ ಕಾರಿಡಾರ್. ಇದರಲ್ಲಿ 360-ಮೀಟರ್ ಸುರಂಗ ಮತ್ತು ಗಣೇಶ್‌ಪುರ-ಡೆಹ್ರಾಡೂನ್ NH-72A ನಲ್ಲಿ ಎಲ್ಲಾ ರಚನೆಗಳ ಮೇಲೆ ಧ್ವನಿ ಮತ್ತು ಬೆಳಕಿನ ತಡೆಗೋಡೆ.
* ರಾಂಬನ್-ಬನಿಹಾಲ್ ಸುರಂಗವು ಒಟ್ಟು 2.967 ಕಿಮೀ ಉದ್ದದ 6 ಸುರಂಗಗಳನ್ನು ಹೊಂದಿದೆ
* ಬೆಂಗಳೂರು-ವಿಜಯವಾಡ ಮಾರ್ಗವು 3.75 ಕಿ.ಮೀ ಸುರಂಗ ಮತ್ತು 2.5 ಕಿ.ಮೀ ಉದ್ದದ ವಯಡಕ್ಟ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ಹೊಂದಿರುತ್ತದೆ.
* ಗ್ವಾಲಿಯರ್-ಶಿವಪುರಿ ಯೋಜನೆಯು ಎಲಿವೇಟೆಡ್ ಕಾರಿಡಾರ್ ಮತ್ತು ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುವ 5.5 ಕಿಮೀ ವ್ಯಾಪ್ತಿಯಲ್ಲಿ ಅಂಡರ್‌ಪಾಸ್‌ಗಳನ್ನು ಹೊಂದಿದೆ.
ಇದೇ ರೀತಿ, ಕೆಲವು ಇತರ ಯೋಜನೆಗಳ ಮಾಹಿತಿ ಈ ಟ್ವೀಟ್‌ನಲ್ಲಿದೆ ನೋಡಿ..
ಇದನ್ನೂ ಓದಿ: ಗುಜರಾತ್‌ನಲ್ಲಿ ಮಳೆಯ ಅಬ್ಬರಕ್ಕೆ 11 ಜನ ಬಲಿ: ಉತ್ತರಾಖಂಡದಲ್ಲಿ ಭೂಕುಸಿತದಿಂದ ಚಾರ್‌ಧಾಮ್ ಯಾತ್ರೆಗೆ ಅಡ್ಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ