ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಮೋದಿ ಭೇಟಿ, ತ್ರಿಶೂಲ ಹಿಡಿದು ಹರ ಹರ ಮಹಾದೇವ್‌ ಎಂದ ಪ್ರಧಾನಿ

By Santosh Naik  |  First Published Mar 9, 2024, 11:06 PM IST

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಕೂಡ ಇದ್ದರು. ಈ ವೇಳೆ ಅಲ್ಲಿದ್ದ ಭಕ್ತರು ಇಬ್ಬರೂ ನಾಯಕರಿಗೆ ಜೈಕಾರ ಕೂಗಿದ್ದಾರೆ.


ನವದೆಹಲಿ (ಮಾ.9):  ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದಲ್ಲಿ ಶನಿವಾರ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅಲ್ಲಿದ್ದ ತ್ರಿಶೂಲವನ್ನು ಕೈಯಲ್ಲಿ ಹಿಡಿದು ಸಾರ್ವಜನಿಕರತ್ತ ಕೈಬೀಸಿದರು. ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿಯವರ ಪಕ್ಕದಲ್ಲಿ ನಿಂತಿದ್ದರು. ಮೋದಿ ತ್ರಿಶೂಲ ಹಿಡಿದು ಕಾಶಿ ವಿಶ್ವನಾಥ ದೇವಸ್ಥಾನದ ಹೊರಗೆ ನಿಂತಿರುವ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದರೊಂದಿಗೆ ತಮ್ಮ ಎಕ್ಸ್‌ ಪೇಜ್‌ನಲ್ಲಿಯೂ ಈ ಚಿತ್ರ ಹಂಚಿಕೊಂಡಿರುವ ಮೋದಿ ಹರ್‌ ಹರ್‌ ಮಹಾದೇವ್‌ ಎಂದು ಟ್ವೀಟ್‌ ಮಾಡಿದ್ದಾರೆ. ತ್ರಿಶೂಲ ಹಿಂದುಗಳ ಆರಾಧ್ಯ ದೈವವಾದ ಶಿವನ ಆಯುಧವಾಗಿದೆ. ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರು ವಿಸ್ತಾರವಾದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡು ಶಿವನಿಗೆ ಪ್ರಾರ್ಥನೆ ಸಲ್ಲಿಸಿದರು. ಅವರ ಭೇಟಿಯ ಸಂದರ್ಭದಲ್ಲಿ, ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿತ್ತು ಮತ್ತು ನಾಯಕರನ್ನು ಸ್ವಾಗತಿಸಲು ಅಪಾರ ಜನರು ಸೇರಿದ್ದರು.

ಬಿಜೆಪಿ ಈಗಾಗಲೇ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದ್ದು, ಪ್ರಧಾನಿ ಮೋದಿ ವಾರಣಾಸಿಯಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಇದರ ಬೆನ್ನಲ್ಲಿಯೇ ವಾರಣಾಸಿಯಲ್ಲಿ ಶನಿವಾರ ಬೃಹತ್‌ ರೋಡ್‌ಶೋಅನ್ನೂ ಮೋದಿ ನಡೆಸಿದ್ದಾರೆ. ಸತತ ಮೂರನೇ ಅವಧಿಗೆ ಕಾಶಿ ವಿಶ್ವನಾಥನ ಕ್ಷೇತ್ರದಿಂದ ಮೋದಿ ಲೋಕಸಭೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಮೋದಿ ಅವರನ್ನು ಸ್ವಾಗತಿಸುವ ಸಲುವಾಗಿ ಜನರು ರಸ್ತೆಯ ಅಕ್ಕಪಕ್ಕದಲ್ಲಿ ಸಾಲುಗಟ್ಟಿ ನಿಂತಿದ್ದರು.

Tap to resize

Latest Videos

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸಾವಿರಾರು ಕೋಟಿ ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಪಶ್ಚಿಮ ಬಂಗಾಳದಲ್ಲಿ, ಅವರು ಸಿಲಿಗುರಿಯಲ್ಲಿ "ವಿಕಸಿತ ಭಾರತ್ ವಿಕಸಿತಪಶ್ಚಿಮ ಬಂಗಾಳ" ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಒಟ್ಟು ₹ 4,500 ಕೋಟಿ ಮೌಲ್ಯದ ರೈಲು ಮತ್ತು ರಸ್ತೆ ವಲಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು. ಜನರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದ ಆಡಳಿತಾರೂಢ ಟಿಎಂಸಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು.

ಜ್ಞಾನವಾಪಿ ಹೋರಾಟಕ್ಕೆ ವಿಶ್ವನಾಥನ ಅಭಯ, ಪೂಜೆ ಪ್ರಶ್ನಿಸಿದ ಮುಸ್ಲಿಮ್ ಸಮಿತಿಗೆ ಹೈಕೋರ್ಟ್‌ನಲ್ಲೂ ಹಿನ್ನಡೆ!

"ಬಡವರ ವಿರೋಧಿ ಟಿಎಂಸಿ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸುತ್ತಿಲ್ಲ. ಟಿಎಂಸಿ ಸರ್ಕಾರ ಪ್ರತಿ ಹಂತದಲ್ಲೂ ನಿಮ್ಮನ್ನು ಲೂಟಿ ಮಾಡುತ್ತಿದೆ. ಮೋದಿ MGNREGA ಗೆ ಹಣ ಕಳುಹಿಸುತ್ತಾರೆ ಆದರೆ TMC ಸರ್ಕಾರ ಜನರಿಗೆ 25 ಲಕ್ಷ ನಕಲಿ ಜಾಬ್ ಕಾರ್ಡ್‌ಗಳನ್ನು ಸೃಷ್ಟಿಸಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್!

Prayed at the Kashi Vishwanath Temple. Har Har Mahadev! pic.twitter.com/sDeJIDioYF

— Narendra Modi (@narendramodi)
click me!